ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದುದ ಕೊಂದರೆ ಹೋಗಲಿ ಮತ್ತೇ | ಹೋದುದೆಲ್ಲಾ ಹೋಗಲಿ ಶಿವನೆ ಪ ಮನದ ಆಶೆಗಳು ಕಡಿಯಲಿ ಶಿವನೆ | ಉನ್ಮನಾನಂದಕೆ ನಡೆಯಲಿ ಶಿವನೆ || ಘನವಾದ ಘನವನು ಹಿಡಿಯಲಿ ಮುಂದೆ ಜನನದ ಬಾಧೆಯು ನೀಗಲಿ ಶಿವನೆ 1 ಬಂದು ಹೋಗುದೆಲ್ಲ ನೀಗಲಿ ಶಿವನೆ |ಎಂದೆಂದು ನಿಜವೆಂಬುದಾಗಲಿ ಶಿವನೆ ||ಮಂದ ಮತಿತ್ವ ಹೋಗಲಿ ಜಗವು | ಇಂದುಧರನ ಸಮತೂಗಲಿ ಶಿವನೆ 2 ಪರಿ ಪರಿ ಕಲ್ಪನೆ ಜರೆಯಲಿ ನಾ | ಪರಮಾತ್ಮನೊಳಗಿನ್ನು ಬೆರೆಯಲಿ ಶಿವನೆ || ಗುರುಭವತಾರಕ ದೊರೆಯಲಿ ನಾ | ಪರಪುರುಷನೆಂದು ಅರಿಯಲಿ ಶಿವನೆ 3
--------------
ಭಾವತರಕರು
ಇದು ಎಲ್ಲಾ ಇದು ಎಲ್ಲಾ ಏನಾರೆಂಬುದ ಬಲ್ಲ್ಯಾ ಪ ತನುವಿದು ಮೊದಲಿಗೆ ನಿನ್ನದಲ್ಲಾ || ತನು ಸಂಬಂಧದ ಗುರುತು ಬಿಡಲಿಲ್ಲಾ 1 ನಿಜವೆನುತಲಿ ಆಶೆಯ ಕಚ್ಚಿ ಅಜಹರಿಹರರಾದರು ಕೇಳೇ ಹುಚ್ಚಿ 2 ಗುರುಭವತಾರಕನ ನಿಜವಾದ ಭಕ್ತಾ | ಅರಿತು ಆದನು ಜೀವನ್ಮುಕ್ತಾ 3
--------------
ಭಾವತರಕರು
ಈ ತನು ನೀನಲ್ಲಾ ನೀನಲ್ಲಾ |ತನುವಿನ ಗುಣವು ಇದುವೆ ಎಲ್ಲಾ ಪ ರೂಪಕ ಬಂದಿತು ಸ್ಥೂಲ ಸೂಕ್ಷ್ಮ |ರೂಪವು ಒಂದೇ ಬೀಜದ ಮೂಲಾ 1 ಕಾರಣ ದೇಹದೊಳಗೆ ಒಂದೇ | ಮಹಾ ಕಾರಣದಲಿ ನೋಡಿಂದೇ 2 ತನುಮನ ಧರ್ಮದ ಜ್ಞಾನವ ಬಿಟ್ಟು |ಉನ್ಮನದಿ ನೀ ಲಕ್ಷಿಸು ಲಕ್ಷಿಟ್ಟು 3 ತನುಮನ ಕರಣಗಳ್ ನಿನಗೆ ಬ್ಯಾರೆ |ತನುಮನ ನಿನಗಿಹುದೆಂದೆನಲಾರೆ 4 ಗುರುಭವತಾರಕ ದೇವನು ಒಲಿದರೆ |ತೋರುವನರಿವಿನ ನಿಜ ಭಾವಾ 5
--------------
ಭಾವತರಕರು
ಏನು ಇವನದು ಗುಮಾನ ರಾಮಾ |ನೀನೆ ನೋಡಿದೆಲ್ಲ ? ಉಳಿದಿತೇ ಮಾನಾ ? ಪ ದಶಕಂಠನಿಂದ ಬಲ್ಲಿದನೇ ?ಪಶುಪತಿ ಇವಗೇನು ವರವ ಕೊಟ್ಟಿಹನೇ ? 1 ಯಾತಕ ಅಂಜುವಿ ನೀನು ಮಹಾ |ಪಾತಕ ಹತ್ತದ ಕೊಂದರೆ ಏನೋ 2 ಗುರುಭವತಾರಕನ ತಂದೆ ನೀ |ವರವ ಕೊಟ್ಟು ಮಾತು ಅರಿತುಕೋ ಇಂದೇ 3
--------------
ಭಾವತರಕರು
ಹಿಡಿ ಜ್ಞಾನಾ ಹಿಡಿ ಜ್ಞಾನಾ | ಬಿಡು ಬಿಡು ಬಿಷಯದ ಧ್ಯಾನಾ ಪ ಉತ್ತಮ ಮನುಷ್ಯ ಜನ್ಮಕೆ ಬಂದೆ |ಸತ್ಯ ಮಿಥ್ಯಾ ತಿಳಿಯದೆ ನೊಂದೆ 1 ಎರವು ಮಾಯಾ ಮರವು2 ಗುರುಭವತಾರಕ ಭಕ್ತನ ಪಾದಾ | ಪೂಜಿಸಿ ಆಲಿಸು ಬೋಧದ ನಾದಾ 3
--------------
ಭಾವತರಕರು