ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದಕರು ಎಂದವರ ತುಚ್ಚಿಸಲಾಗದುಸಂದೇಹವಿಲ್ಲವು ಅವರು ಅತಿಹಿತರು ಪ ಸಂಚಿಸಿದ ಕರ್ಮದಿಂ ಸತ್ಪುರುಷರುದಿಸಿರಲುಹಂಚಿಕೊಂಬರು ತಾವು ಎಲ್ಲರದನುವಂಚಕರು ಎಂದವರ ನೀಚಸಲಿಕಾಗದು ಮುಂಚೆವಂದಿಸಬೇಕು ಅವರ ಪದಕೆ 1 ತಾಯಿ ಶಿಶುವಿನ ಮಲವ ತಾ ತೃಣದಿ ತೆಗೆಯುವಳುಮಾಯಹರ ಮಹಾಪುರುಷರ ಮಲವನುಆಯಾಸವಿಲ್ಲದಲೆ ತಮ್ಮ ನಾಲಿಗೆಯಲಿ ತೆಗೆಯುವರುಪ್ರಿಯರಿಂತವರಿಗಿಂತ ಹಿತವರುಂಟೆ 2 ಉದಯ ಮಧ್ಯಾಹ್ನ ಮುಹೂರ್ತಗಳ ನೋಡದಲೆವಿಧವಿಧದ ಪಾಪಗಳ ತಮ್ಮ ಮುಖದಿಮುದದಲುಚ್ಚರಿಸಿ ಚಿದಾನಂದ ಗುರುಭಕ್ತರನುಸುಧೆಯ ಸುಖಮುಕ್ತಿಯೊಳು ಹೊಂದಿಸುವವರು 3
--------------
ಚಿದಾನಂದ ಅವಧೂತರು
ಮನಿ ಮನಿಗೆ ಗುರುಭಕ್ತರಾದವರು | ಜಗದೊಳಗೆಲ್ಲಾ | ಘನ ನೆಲೆ ಕಂಡವರೊಬ್ಬರಿಲ್ಲಾ ಪ ಗುರು ಸ್ವರೂಪರಿಯದೆ | ನರಭಾವ ಮರಿಯದೆ | ಗುರು ಭಕ್ತಿ ಶೀಲಾ ತಾ ತಿಳಿಯದೇ 1 ಸಂಪ್ರದಾಯಕರು ಯನಿಸಿಕೋಬೇಕು | ಯಂದು ಬಯಸೀ | ಕ್ಷಿಪ್ರದಿ ಮಂತ್ರವ ಕೊಂಬರು ಅರಸಿ 2 ಸುರಸ ಮಾತಾಡಿದರ | ಗುರುಯಂದಿರುತಿಹರು ಸಾರೆ | ಬಿರುನುಡಿಕೇಳಲು ತೊಲಗುವರು ಬ್ಯಾರೇ 3 ಮೊಲೆ ಬದಿಯೊಲುಣ್ಣಿ | ಮೊತ್ತಾ ಇರುವಂತೆ ನೋಡಿಸತ್ಯಾ | ನೆಲೆ ಭಕ್ತಿಯೆತ್ತಾ ತಾನಿವ್ಹನೆತ್ತಾ 4 ಹುರಡೆ ಡಾಂಭಿಕದಿಂದಾ | ಚರಿಸಿದರೇನು ಛಂದಾ | ಗುರುಮಹಿಪತಿ ಪ್ರಭು ನೆಲಿಯಲಿ ಯಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾವಧಾನಾಗಿ ಮಾಡೆಲೋ ಗುರುಭಕ್ತಿ | ಕಾವಕರುಣಾಳುದೋರಿ ನಿಜ ಮುಕ್ತಿ ಪ ಗುರುನಾಮ ಸ್ಮರಣೆ ಅನುದಿನಾ | ಗುರುಮೂರ್ತಿಯ ಮಾಡಿ ನಿಜಧ್ಯಾನಾ | ಗುರುಚರಣವ ಪೂಜಿಸು ನಿಧಾನಾ | ಗುರು ನಮನದಿ ಹಾಕಿ ಲೋಟಾಂಗಣಾ 1 ಗುರುಭಕ್ತರ ಸಂಗವನು ಮಾಡಿ | ಗುರು ಕರುಣದ ಮಹಿಮೆಯ ಪಾಡಿ | ಗುರುವಾಕ್ಯ ಪ್ರಸಾದವನು ಬೇಡಿ | ಗುರು ಅಭಯವ ಕೊಂಡು ನಲಿದಾಡಿ 2 ಗುರುವಿನಲ್ಲಿ ಹಿಡಿಯದೆ ನರಭಾವಾ | ಗುರುವಿಗರ್ಪಿಸಿ ತನುಧನ ಮನ ಜೀವಾ | ಭವ ಬಂಧನವಾ | ಗುರುಮಹಿಪತಿ ಬಾಲನಾಗಿರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು