ಒಟ್ಟು 11 ಕಡೆಗಳಲ್ಲಿ , 4 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಣ್ಣಿಲೆ ಕಂಡಿತು ಧ್ರುವ ಆಯಿತು ವಸ್ತು ಒಂದು ಕಣ್ಣಿಗೆ ಕಣ್ಣು ಕಾಣಬಂದು ಕಾಣಿಸಿ ನಿಜಪುಣ್ಯಗೈಸಿತು ಎನಗಿಂದು 1 ಹೊಳೆಯುತಿಹ್ಯದು ನಿಜಘನ ನೋಡಲಿಕ್ಕಾಯಿತುನ್ಮನ 2 ಕಣ್ಣುಗುರುತಾದ ಪೂರ್ಣಗುರುಬೋಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಬೋಧ ಪರಮಸುಖಕಾರಿ ಬಾರಿ ಬಾರಿಗೂ ಕೇಳೈ ಭವರೋಗೀ ಪ ಬಿಡು ಬಾಳಿನ ಭ್ರಮೆಯ ಸಂಸಾರಿ ದುಃಖದ ಬಾಳಿದು ವಿನಾಶಕಾರಿ ಇದರೊಳು ಸಿಗುತಿಹ ಸುಖವು ವಿಕಾರಿ ತಿಳಿಯೈ ಮುಕ್ತನಾಗಲಿದು ದಾರಿ 1 ಆರಿ ನಿನ್ನಯ ನಿಜವಾ ಸುವಿಚಾರಿ ಅರಿವೇ ನಿನ್ನಯ ಈ ಭವತಾರಿ ಬೇರಾವುದು ನಿನಗಾಗದು ದಾರಿ ಈ ನುಡಿ ಪೇಳುತಿಹುದು ಶೃತಿಸಾರಿ 2 ಜಾಗರಾ ಕನಸು ನಿದ್ರೆಯ ಮೀರಿ ಅಮರವಾಗಿರುವ ಪದವನೆ ತೋರಿ ಅದೆ ನೀನೆನ್ನುತ ಪರಿಪರಿ ಸಾರಿ ಶಂಕರಭೋಧವಿದುವೆ ಭವಹಾರಿ3
--------------
ಶಂಕರಭಟ್ಟ ಅಗ್ನಿಹೋತ್ರಿ
ಜೀವಾ ತಿಳಿ ತಿಳಿ ನಿಜದರಿವಾ ಪ ಶಾಂತಮಯಾ ಆನಂದನಿಕಾಯ ಮನಸಿನ ಮೂಲದಾ ಘನಪದವಾ ಅ.ಪ. ಕಲ್ಪನಾಜಾಲದಾ ನಾಶದ ಸ್ಥಿತಿಯೇ ಪರಮಸೌಖ್ಯದಾ ನಿಧಿಯನು ನೀನೇ ಮನದಲಿ ಯೋಚಿಸಿ ತಿಳಿನಿನ್ನಾ 1 ಜನನಮರಣದಾ ಸಂಕಲೆ ಹರಿಯೋ ಘನವಿವೇಕದಾ ಬಲದಲಿ ತಿಳಿಯೋ ಸನ್ನುತ ಶಂಕರಗುರುಬೋಧಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಸುಖಕರಾ ಗುರುಬೋಧಸಾರಾ ಮರಣಾ ಜರಾ ದುರಿತಾದಿ ದೂರಾ ಪ ಜೀವಭಾವವಾ ಸಟೆಯಾಗಿ ಗೈವ ದೇವಭಾವನಾ ಬಗೆಸಿನಿಲಿಸುವಾ ಸಾವಿನಂಜಿಕೆ ದೂರಾಗಿ ಮಾಳ್ಪ ಜೀವಂತಮುಕುತಿ ಕರದೀಯುವಾ 1 ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ ದೃಶ್ಯವಸ್ತುವಿಂದ ಬೇರೆನಿಸುವಾ ಶಾಶ್ವತಾದ ಆ ಪದ ತೋರಿ ಮನದ ಕಶ್ಮಲವನು ಕಳೆವ ಭವತಾರಕಾ 2 ಭೇದಭಾವವಾ ಛೇದಿಸುತ ಮನದಿ ಬೋಧನಾರಾಯಣನ ಕೃಪೆ ಪೊಂದಿದಾ ಬೋಧರೂಪ ಗುರುವು ಪೇಳಿರ್ದ ಬೋಧ ಸಾಧು ಶಂಕರಾರ್ಯ ತಾನೆನ್ನುವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಪಾತಕಗೆ ಪರತರದ ಗುರುಬೋಧವ್ಯಾಕೆ ಸೂತಕವ ಬಿಡದವಗೆ ಪರತತ್ವವ್ಯಾಕೆ ಪ ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ ಭೂತಬಡಿದವನಿಗೆ ಭೀತಿಯು ಯಾತಕ್ಕೆ ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1 ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2 ಪತಿಗಂಜದವಳಿಗೆ ವ್ರತನೇಮಗಳು ಯಾಕೆ ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3 ಮಾನಹೀನನಿಗೆ ಬೇರೆ ಮರಣಬರಲೇಕೆ ಅ ಜ್ಞಾನಿಗ್ಯಾತಕ್ಕೆ ಜಾಣಜನಸಂಗ ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4 ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ ಕರುಣವಿಲ್ಲದವನಿಗೆ ಗುರುಸೇವೆ ಯಾಕೆ ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5
--------------
ರಾಮದಾಸರು
ಬೋಧಾ ಜ್ಞಾನದಾ ಬೋಧ ಮೋದಾ ಶಾಂತಿಯಾ ಸ್ವಾದಾ ಪ ಸ್ವರೂಪದಾ ಸುಖಸ್ಪದಾ ಪ್ರಶಾಂತ ಗುರುಬೋಧಾ ಬೋಧ ಅ.ಪ. ಸುಲಭಸಾಧ್ಯ ಸುವಿಚಾರಾ ವೇದಾಂತಶಾಸ್ತ್ರದ ಸಾರಾ ತಾನೇ ಪರಮಾತ್ಮನು ಎನುವಾ ಸ್ವಾನುಭವಾಮೃತಜಲಧಾರಾ ಘೋರಾ ಸಂಸ್ಕøತಿಯ ಪಾರಾ 1 ಜೀವಭಾವವ ಮರೆಯಿಸುತಿರುವಾ ಸಾವ ನೀಗುವಾ ಮಂತ್ರವಾ ಸಾರಿ ಪೇಳ್ವ ಶಂಕರಾರ್ಯ ಮೋದಾ ಶಾಂತಿಯಾ ಸ್ವಾದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಲೇಸುಲೇಸಾಯಿತು ಸದ್ಗುರು ಕೃಪೆ ಲೇಸುಲೇಸಾಯಿತು ಧ್ರುವ ಆದಿತತ್ವದ ಙÁ್ಞನ ಇದಿರಿಟ್ಟಿತು ಘನ ಲೇಸುಲೇಸಾಯಿತು ಭೇದಿಸಲು ಮನೆ ಅದೆ ಆಯಿತುನ್ಮನ 1 ಲೇಸುಲೇಸಾಯಿತು ಙÁ್ಞನಾಗಮ್ಯದ ಸ್ಥಾನ ಎನಗಿದೆ ನಿಜ ಧ್ಯಾನ 2 ಭಾವದ ಬಯಲಾಟ ಠಾವದೋರಿತು ನೀಟ ಲೇಸುಲೇಸಾಯಿತು ಸುವಿದ್ಯ ಗುರುನೋಟ ಸರಿಮಾಡಿತೀ ಮಾಟ 3 ನೀಡಿದಭಯ ಹಸ್ತ ಮಾಡಿತು ಮನಸ್ವಸ್ಥ ಗೂಢವಾಗಿಹ್ಯ ವಸ್ತಗೂಡಿತು ಸಾಭ್ಯಸ್ತ 4 ಇಹಪರಕ ಸ್ವಾದ ಮಹಾಗುರುಪ್ರಸಾದ ಸಾಹ್ಯಮಾಡುದೆ ಸದಾ ಮಹಿಪತಿ ಗುರುಬೋಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಿಷ್ಣುವೆಂಬುದು ಕೊಂಡಾಡಿ ಧ್ರುವ ಜಿಹ್ವೆಗೊಂಡಿತು ಸುಸ್ವಾದ ದಿವ್ಯನಾಮ ಸುರಸ್ವಾದ ಭವನಾಶಗೈಸಿತು ಗುರುಬೋಧ ಸವಿದೋರಿತು ಗುರುಪ್ರಸಾದ 1 ಸ್ವಾನುಭವದ ಸವಿಸುಖ ಏನೆಂದ್ಹೇಳಲಿ ಕೌತುಕ ಮನಕಾಯಿತು ಹರುಷ ಅನೇಕ ಧನ್ಯ ಧನ್ಯಗೈಯಿತು ಜಿಹ್ವೆಮುಖ 2 ಸುಸ್ಮರಣಿಯ ಮಾಡಿ ನಿತ್ಯ ಮಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ ಅತಿಸೂಕ್ಷ್ಮಾನಂದ ಸುಪಥ ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ ಹಿತದೋರಿಕೊಡುವ ಸದ್ಗುರುನಾಥ ಧ್ರುವ ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು ತಾವು ಕೊಡುವರೇನ ಹಾಕಿ ವೈವಯಮನ ಬ್ಯಾಗೆ ಗುರುದಯಕರುಣ 1 ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ ನಿನ್ನ ತನುವಿನೊಳಗೆ ಖೂನ ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ2 ಮಾನವ ಜನ್ಮ ನಿರ್ತದಿಂದ ಅರ್ತು ಕೂಡಿ ಕರ್ತು ನಿಜಾನಂದ ಗುರುಬೋಧ ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು ಪಡಿಯೊ ನಿನ್ನ ಸ್ವಹಿತದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ಗುರುಗುಟ್ಟು ಭೇದಿಸಿ ಮನವಿಟ್ಟು ವೇದಕೆ ನಿಲುಕದ ಹಾದಿಯದೋರುವ ಸದ್ಗುರು ದಯಗೊಟ್ಟು ಧ್ರುವ ಮಾತಿಲೆ ಆಡುವ ಙÁ್ಞನ ಯಾತಕ ಬಾಹುದೇನ ಆತ್ಮಕದೋರುವ ನಿಜಖೂನ ಪ್ರತ್ಯೇಕವಾದ ಸ್ಥಾನ 1 ಮಾತೆ ಆಗೇದ ಮುಂದೆ ರೀತ್ಯಡಗೇದ ಹಿಂದೆ ನೀತಿಯ ತೋರುವ ಗುರುತಂದೆ ಜ್ಯೋತಿಸ್ವರೂಪೊಂದೆ 2 ತಾಯಿತವಾಗೆದ ಗುಟ್ಟು ಧ್ಯಾಯಿಸಿ ರೀತಿ ಇಟ್ಟು ಆಯಿತು ನಿಜಗುಣ ಬಿಟ್ಟು ಹೋಯಿತು ಜನ ಕೆಟ್ಟು 3 ಗುಟ್ಟು ಕೇಳಿ ಪೂರ್ಣ ಮುಟ್ಟಿ ಮಾಡಿ ಮನ ಇಟ್ಟುಕೋ ಮಹಿಪತಿಗುರುಬೋಧ ನಿಜಧನ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯ ಚರಣವೆಂಬ ಸುರಧೇನವನುಗುರುಬೋಧೆಯೆಂಬ ಕಣ್ಣಿಯಲಿ ಕಟ್ಟಿರಯ್ಯಪ.ಭಕುತಿಯೆಂಬ ಕರುವನೆ ಬಿಟ್ಟು ನಿರುತ ವಿರಕುತಿಯೆಂಬ ಚೆನ್ನದಳಿಯ ಹಾಕಿ ||ಯುಕುತವಾದ ನಿತ್ಯಕಾಯ ಚರಿಗೆಯೊಳುಮುಕುತಿನಾಮಾಮೃತ ಕರೆದುಕೊಳ್ಳಿರಯ್ಯ 1ಕಾಮ ಕ್ರೋಧ ಲೋಭ, ಮೋಹ ಮದ ಮತ್ಸರಗಳೆಂಬಹಮ್ಮೆಂಬ ಕುರುಳನೆ ತಾಳಿ ಹಾಕಿ ||ತಾಮಸ ಜ್ಞಾನಾಗ್ನಿ ಪುಟಗೈದು ಇಂದ್ರಿಯನೇಮದ ನೀರ ಬೆರಸಿ ಕಾಯಲಿಡರೊ 2ಶಾಂತಗುಣವೆಂಬ ಹದನರಿತು ಆರಿಸಿ ಮತ್ತೆಭ್ರಾಂತಮನ ಮಜ್ಜಿಗೆಯ ಹೆಪ್ಪನಿಕ್ಕಿ ||ಕಾಂತವಿಷ್ಣು ಮಾಯಾಮಂಥದಿ ಶೋಧಿಸಿ ಸಿ -ದ್ಧಾಂತವೆಂಬ ಕಡೆಗೋಲ ನೇಣನೆ ಪಿಡಿದು 3ಪರಬೊಮ್ಮನೆನಿಪ ಬೆಣ್ಣೆಯ ಮುದ್ದಿಯನೆ ತೆಗೆದುಶರಣಮಣಿಯೆಂಬ ತುಪ್ಪವನೆ ಕಾಯಿಸಿ ||ಮರಣವೆಂಬ ನೊರೆ ತೆಗೆದೊಗೆದು ಅಮೃತವನಿರುತ ಹೃದಯವೆಂಬ ಕೊಡವನೆ ತುಂಬಿರೊ 4ಅನವರತ ಹರಿಸ್ಮರಣೆಯೆಂಬ ಬೀಸೂರಿಗೆಅನುವಾಗಿ ಕುಳಿತುಂಡು ಸುಖದಿ ತೇಗಿ ||ಚಿನುಮಯ ಚಿದಾನಂದ ಪುರಂದರವಿಠಲನಅನುದಿನ ನೆನೆ ನೆನೆದು ಸುಖಿಯಾಗಿರಯ್ಯ 5
--------------
ಪುರಂದರದಾಸರು