ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನದ ಬೆಳೆಯನು ಬೆಳೆಯೊ ಶ್ರೀಗುರುಬಲವನು ನೀ ಪಡೆಯೋ ಪ ನಾದಗಳೆತ್ತನು ಹೂಡು ಅದಕೆ ತ್ರಿಗುಣದ ಕೂರಿಗೆ ಜೋಡುಬೋಧದ ಬೀಜವು ನೋಡು ಮನಸಿನ ಹೊಲದಲಿ ಬಿತ್ತಿಬಿಡು 1 ಕರ್ಮ ಕಸವ ಕಳೆದುನಿರ್ಮಳ ಬೆಳೆಗೊಂಡು ಗುರು ತಾ ಸ್ವರ್ಮಣಿ ಬಲಗೊಂಡು 2 ತೇಜರಾಶಿಗಳನೆಳೆದು ರಾಜಿಪ ರಾಜ ಕೊಳಗದಲಿ ಅಳೆದುಭೋಜನಕೆ ಎಡೆಮಾಡಿ ಚಿದಾನಂದ ಸಹಜ ಮೂರುತಿಗೂಡಿ3
--------------
ಚಿದಾನಂದ ಅವಧೂತರು
ನೋಡಯ್ಯಾ ನಿತ್ಯಾತ್ಮನನ್ನು ನಿಜವಾಗಿ ನಿನ್ನೊಳಗೆ ನೀನು ನೋಡಯ್ಯಾ ನಲಿನಲಿದಾಡಯ್ಯಾ ಎರಡುದಿನಸಂಸಾರಾ ಎರವಾಗಿ ತಂದ ಶರೀರಾ ಸ್ಥಿರವಲ್ಲ ಸ್ವಾಮಿ ಗುರುಬಲ್ಲಾ ನೋಡಯ್ಯಾ 1 ಶರೀರ ಅರ್ಥಪ್ರಾಣ ಮೂರು ಗುರುಮೂರ್ತಿಗರ್ಪಿಸಿ ತೋರು ದೃಢಭಾವಾ ಆತ್ಮಸುಖವೀವಾ ನೋಡಯ್ಯಾ 2 ನರದೇಹಕ್ಕೆ ಬಂದು ನೀನು ಇರುವಂಥಾ ಸಾರ್ಥಕವೇನು ದೃಢ ಭಕ್ತಿಮಾಡಿ ಪಡೆ ಮುಕ್ತಿ ನೋಡಯ್ಯಾ3 ದೊರಕುವುದು ಪರಿಕರ ಸರ್ವಾ ಗುರುಮೂರ್ತಿ ಸಿಕ್ಕುವುದಪೂರ್ವಾ ಬಿಡಬೇಡಾ ವ್ಯರ್ಥ ಕೆಡಬೇಡಾ ನೋಡಯ್ಯಾ 4 ಭಕ್ತಿಯಲಿ ಕೈವಿಡಿದು ಹೋಗು ಭಜಿಸಿ ಜೀವನ್ಮುಕ್ತನಾಗು ಸಾರಿದೆ ಮರ್ಮವ ತೋರಿದೆ ನೋಡಯ್ಯ5 ಯುಕ್ತಿಯಲಿ ಸಾಧಿಸಲು ಬೇಕು ಇಷ್ಟೊಂದು ಸಿಕ್ಕಿದರೆ ಸಾಕು ಚಂದದಿ ಗುರುವಿಮಲಾನಂದದಿ ನೋಡಯ್ಯಾ 6
--------------
ಭಟಕಳ ಅಪ್ಪಯ್ಯ
ಯಾರಂದರೇನು ಫಲವದೆ ನಮ್ಮ ದೃಷ್ಟ ಈ ರೀತಿ ಕಾಡಲು ಬರಿದೆ ಪ ಯಕ್ಷ ಕಿನ್ನರಾದಿವಂದಿತ ಪರಮಾತ್ಮ ಜಲ- ಜಾಕ್ಷ ಕೃಷ್ಣ ಮಾಧವಾಚ್ಯುತ ಪಕ್ಷಿವಾಹನ ಪಾಲಿಸು ಕರಿವರದ ಬೇಗನೆ ನೀನು ಪೇಕ್ಷಿಸದೆ ರಕ್ಷಿಸೆನ್ನ 1 ಇನ ಶಶಿ ಕುಜರಾಹು ಗುರುಬಲ ಇದರ ಮೇಲೆ ಶನಿ ಸೌಮ್ಯ ಕೇತು ಶುಕ್ರ ಗ್ರಹಗಳ ಘನದಿ ಸುಫಲ ಲೇಶಕಾಣದೆ ಬಳಲುವ ವೇಳೆ ಅನಿಮಿಷರೊಡೆಯನ ಮೊರೆ ಹೋಗದೆ 2 ಪರಮ ಪುರುಷ ಪತಿತ ಪಾವನ ಬಿರುದುಳ್ಳ ಹೆನ್ನೆಪುರನಿಲಯ ನರಹರಿ ಚರಣ ಸ್ಮರಣೆ ಹರುಷದಿಂದ ನಿರುತ ಮನದೊಳಾವಾಗ ಪರರ ನಿಂದೆಗೊಳಗಾಗಿ ವೃಥಾ 3
--------------
ಹೆನ್ನೆರಂಗದಾಸರು
ಸಿರಿ ಚರಣದಲ- ಪಾರ ಭಕುತಿಯನೀಯೋ ತವ ಸೇವಕನೆನಿಸಿ ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ ಸೂರಿ ಸುಬ್ಬಣಾಚಾರ್ಯಕರಸ- ರೋರು ಹಗಲಲಿ ಪೂಜೆಗೊಳುತಲಿ ಚಾರುತರ ಶ್ರೀ ಜಯಮಂಗಳಿಯ ತೀರದೊಳಿರುವ ವೀರ ಮಾರುತಿ ಅ.ಪ. ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ- ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ ತತಿಯನಾಲೈಸುತ | ಅತಿ ಮೋದಬಡುತ ಪರಿ ಸಂ- ಸ್ತುತಿಸೆ ಹಿಗ್ಗುತಲವರ ಸ್ವಮನೋ- ರಥಗಳ ನೀ ಸಲಿಸುವೆನೆನುತಲಿ ಅತುಳ ವಿಕ್ರಮದಭಯ ಹಸ್ತದಿ ಕೃತಿರಮಣ ಸಿರಿವರ ಹರಿಯನನು ಮತವ ಪಡೆಯುತ ರಥವ ನಡೆಸಿ ಚತುರ ದಿಕ್ಕಲಿ ಬಿಜಯ ಮಾಡುತ ಸತತ ಹರುಷವಗರೆವ ದೇವ 1 ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು ಚಿಕ್ಕ ರೂಪವಗೊಂಡು ಲಂಕೆಯ ಪೊಕ್ಕು ರಾಮನ ಸತಿಯ ಕಂಡು ತುಕ್ಕಿ ವನವನು ಸೂರೆ ಮಾಡಿ ಉಕ್ಕಿನ ಧ್ವಜಸ್ತಂಭದಿಂದ ಸೊಕ್ಕಿ ಬಂದ ದನುಜವ್ರಾತವ ಕುಕ್ಕಿ ಕೆಡಹಿ ಪುರವನುರಹಿ ಅಕ್ಕರದ ಮಣಿಸಹಿತ ಬಂದು ಪಕ್ಕಿದೇರನಿಗೆರಗಿ ನಿಂದೆ 2 ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ- ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ ಅತಿಪ್ರೀತಿಸುತ ನೀನು | ನಿಷ್ಕಾಮಯುತನು ಪತಿತರನುದ್ಧರಿಸಲು ನೀ ಸಿರಿ ಪತಿಯ ಮತದೊಳು ಹನುಮ ಭೀಮ ಯತಿಯ ರೂಪವ ತಾಳಿ ಹರುಷದಿ ಕ್ಷಿತಿಯ ಭಾರವ ಹರಸಿ ಸಲಹಿದೆ ಅತುಳ ಮಹಿಮ ನಿನ್ನಪರಿಮಿತ ಶ ಕುತಿಗೆ ನಮೊ ನಮೊ ವಾಯುತನಯನೆ ಸತತ ಮುದದೊಳು ನಿನ್ನ ಸ್ಮರಿಸುವ ಮತಿಯ ಪಾಲಿಸು ಪತಿತ ಪಾವನ 3
--------------
ರಂಗೇಶವಿಠಲದಾಸರು
ಸುಲಭದಿಂದ ಪಾಂಡವರ ಗೆಲಿದುಕೊಂಡುನಗುತಬಾಹೊ ಬಲವ ಹೇಳೆಂದ ಕೃಷ್ಣ ಪ. ಭರದಿ ಕೃಷ್ಣನಂಫ್ರಿಗಳಿಗೆ ಎರಗಿಬೃಹಸ್ಪತಿಯು ನಗುತ ಬರುವೋದು ಚಂದ್ರನ ಬಲವ ಹರಿಯೇ ತೆgಳೆಂದ 1 ಮತ್ತೆ ಪಾಂಡವರ ಗರುವ ಒತ್ತೇವೋ ಮೂಲೆಗೆ ಈ ಹೊತ್ತೆ ಸೂರ್ಯನ ಬಲವ ಚಿತ್ತೈಸÉಂದನು ಬೃಹಸ್ಪತಿ ಚಿತ್ತೈಸೆಂದನು 2 ಗುರುಬಲ ಎಂಬೋದು ಎಲ್ಲ ಹರದೆಯರಿಗೆ ತೋರುತಿರೆÉ ಗರವು ಮುರಿದು ಸುಭದ್ರೆಯಬರುವಿರಮ್ಮಯ್ಯ ನಗುತ ಬರುವಿರಮ್ಮಯ್ಯ 3 ಶೀಘ್ರದಿ ಸತ್ಯಭಾಮೆ ರುಕ್ಮಿಣಿದೇವಿಯರು ತೆರಳಿ ದುರ್ಗೆರವಿ ದ್ರೌಪತಿಯ ಮಾನ ತಗ್ಗೋದೆಂದನು ಮಾರಿ ಕುಗ್ಗೋದೆಂದನು4 ಹದಿನಾರು ಸಾವಿರ ವೀರ ರಾಮೇಶನ ಮಡದಿಯರು ಮಾರಿ ಮೇಲಾಗಿ ಬಾಹೋದು ನಿಜವೆಂದ ಆಮಾತು ನೀರೆ ನಿಜವೆಂದ 5
--------------
ಗಲಗಲಿಅವ್ವನವರು
ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು