ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಎ) ಗುರುನಮನ ಶಿರಿವರನೆ ಕರುಣಾಂಬುನಿಧಿಯಮಲ ಚರಣಕಮಲವ ಬೇಡುತಿಪ್ಪರ ಪಾದಪಿಡಿವೆನು ನಾನು ಪ ಶಿರಿಲಕುಮಿ ಸರಸಿಜಭವ ಸರಸ್ವತಿ ಗುರುಪವಮಾನ ಭಾರತಿ ಮುಖ್ಯರ ವರ ಪಾದಂಗಳಿಗೆ ನಮಿಸುವೆ ಹರಿಯ ತೋರ್ಪದಕೆ 1 ಪನ್ನಗಾಶನ ಪನ್ನಗೇಂದ್ರರ ಪನ್ನಗ ವಿಭೂಷಣ ಸತಿಸುತರ ಸನ್ನುತಾಂಘ್ರಿಗಳ ಬಿಡದ್ವಿಡಿಪಿ ರಘುರನ್ನರರಪದಕೆ 2 ಗುರು ಶ್ರೀಪಾದರಾಯ ವ್ಯಾಸರ ಪುರಂದರ ವಿಜಯಾದಿ ಗುರುಗಳಿಗೊಂದಿಪೆನು ನರಸಿಂಹವಿಠಲನಂತುಪಾದ್ಯನು ದಾರಿತೋರ್ಪುದಕೆ 3
--------------
ನರಸಿಂಹವಿಠಲರು
ಧ್ಯಾನಿಸೋ ಮಾನವಾ ದೀನೋದ್ಧಾರಿ ವಿಜಯದಾಸರನಾ | ದೇವಮಾನಿತರು ಧೇನು ಸಮ ಪ. ಭೃಗುಮುನಿಯೆ ಈ ಜಗದಿ | ಸಂಜನಿಸಿ ಮದಪಾಲಿಸಿ ಘೋರ ಭವಕ್ಲೇಶ ಪರಿಹರಿಸಿ ಸುಖವಾ ಬೀರಿದಾ1 ಗುರುಪವನ ಶಾಸ್ತ್ರವ ಕನ್ನಡದಿ ವಿರಚಿಸಿ | ಜ್ಞಾನಪಥ ತೋರಿ ಶಿರಿವದನ ಮಹಿಮೆ ಸಾರಿದಾ2 ಶ್ರೀವರ ಶಾಮಸುಂದರನ ಸ್ತವಿಸಿ ಸಂಸೇವಿಸಿ | ಭಾವದಲಿ ನೋಡಿ ನಲಿದವರು ಕರುಣಾಶಾಲಿ 3
--------------
ಶಾಮಸುಂದರ ವಿಠಲ
ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು ಹೀನನಾದೆನೊ ಲೋಕದಿ ಪ ಪಾದ ಧ್ಯಾನಮಾಡುವ ಮುಖ್ಯ- ಪ್ರಾಣನೀನೆಂದು ಮನಸಾರ ಪೂಜಿಸದೆ ಶ್ರೀ ಅ.ಪ ಶರಧಿ ಬಂಧಿಸಿ ದಶಶಿರನಳಿದ ಪಾದ ಸ್ಮರಣೆ ಮಾಡುತಲಿ ನಿತ್ಯ ಧರಣಿಸುತೆಯಳ ತಂದು ಪರಮ ಸಂಭ್ರಮದಿಂದ ಮೆರೆವದೇವನ ಸ್ಮರಿಸುತ ನರರೂಪದಿಂದ ದಶರಥನ ಪುರದಲಿ ನಿಂತ ಪರಮಾತ್ಮನಿಗೆ ನಮಿಸುತ ಸುರರು ಸ್ತುತಿಸಲು ಪರಮಹರುಷದಿಂದಾಲಿಸುತ ಹರಿಯ ಮೆಚ್ಚಿಪ ನಮ್ಮ ಗುರುಪವಮಾನ ಶ್ರೀ 1 ಅಂದು ಆ ಬಕನ ಭಯದಿಂದ ಸಜ್ಜನರೆಲ್ಲ ಕುಂದಿರಲು ಭಯವ ಹರಿಸಿ ಅಂಧಕನ ಸುತನ ಬಂಧಿಸುತ ರಣದೊಳಗೆ ಯದು- ನಂದನಗೆ ಪ್ರೀತಿ ಪಡಿಸಿ ಕೊಂದು ಬಿಸುಡಲು ಜರಾಸಂಧನನು ವಸುದೇವ ಕಂದ ನೋಡುತಲಿ ಸುಖಿಸಿ ಇಂದಿರಾರಮಣ ಮುಕುಂದನನು ಪೂಜಿಸುವ ಸುಂದರ ಭೀಮ ನಿಸ್ಸೀಮನಹುದೆಂದು ಶ್ರೀ2 ಪತಿತ ಸಂಕರದಿಂದ ಮತವೆಲ್ಲ ಕೆಡಲು ಶ್ರೀ- ಪತಿಯ ಧ್ಯಾನವು ಮಾಡುತ ಯತಿ ಶಿರೋಮಣಿಯಾಗಿ ಶ್ರುತಿ ಸ್ಮøತಿಗಳಣಿ ಮಾಡಿ ಹಿತವ ಜನರಿಗೆ ತೋರುತ ಎಸೆವ ಘನಗಿರಿಯಲ್ಲಿ ಅಸದಳ ಹನುಮರೆಂ- ದೆಸೆದು ಮಿಗೆ ಶೋಭಿಸುತಲಿ ವಾರಿ ದಡದಲಿ ಕಮಲನಾಭ ವಿಠ್ಠಲನ ಸ್ಮರಿಸಿ ಧೀರ ಹನುಮಂತನಪಾರ ಮಹಿಮನೆಂದು ವನಗಿರಿಯ ಗುಹೆಗಳಲಿ ಹನುಮಂತನೆಂದೆನುತ ಎಣಿಸಲಳವಲ್ಲವೋ ಘನಪರಾಕ್ರಮಿ ಮುಖ್ಯ 3
--------------
ನಿಡಗುರುಕಿ ಜೀವೂಬಾಯಿ
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ ಧ್ಯಾನ ಮಾಡುತ ಎನ್ನ ಸ್ಥಿತಿಯ ದೀನಭಾವನೆಯಿಂದಲೊರೆವೆನು ಗುರುಪವ ಮಾನ ಪಾಲಿಸಲಿ ಸನ್ಮತಿಯ ಪ. ತಾನು ತನ್ನದೆಂಬ ಹೀನ ಭಾವನೆಯಿಂದ ನಾನಾ ಯೋನಿಗಳಲ್ಲಿ ಚರಿಸಿ ಮಾನವ ಜನ್ಮವನೆತ್ತಲು ಮುಂದಾದ- ದೇನೆಂಬೆ ಗರ್ಭದೊಳುದಿಸಿ 1 ಮಾತಾಪಿತರುಗಳು ಮೋಹದಿ ರಮಿಸಲು ಕೇತ ತತಿಗೆ ಸರಿಯಾಗಿ ಆತು ಬಂದಿಹೆನು ಗರ್ಭದಿ ಮೆಲು ನರ ವ್ರಾತ ಬಂಧಕೆ ಗುರಿಯಾಗಿ 2 ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ ಚೀರಲಾದರು ಶಕ್ತಿಯಿರದೆ ಭಾರ ವಸ್ತುವು ಕಣ್ಣಸಾರವು ತಡೆಯದೆ ಗಾರುಗೊಂಡೆನು ಗರ್ಭದೊಳಗೆ 3 ಮೂರರಾ ಮೇಲೆ ಮತ್ತಾರುಮಾಸಗಳಿಂತು ಭಾರಿ ಭವಣೆಗೊಂಡು ಕಡೆಗೆ ಭೋರನೆ ಭೂಮಿಗೆ ದೂರಿ ಬಂದೆನು ಮಲ ಧಾರೆಯಾ ಕೂಡಿ ಮೈಯೊಳಗೆ 4 ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು- ರ್ವಾಸನೆ ಬರುವ ಗೆರಸಿಯ ಹಾಸಿಗೆ ಒಳಗೆ ಹಾಕಿರುತಿರೆ ದೇಹದ ಲೇಶ ಸ್ವಾತಂತ್ರ್ಯವೇನಿರದೆ 5 ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ ಘಾಸಿಗೊಳುತ ಬಾಯ ತೆರದೆ ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ ಬಾಸಲೆಯುನು ತಾಳ್ದೆ ಬರಿದೆ 6 ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ ಸೋಕಿದೆ ಸರ್ವತ್ರ ತಿರುಗಿ ಸಾಕುವ ಜನರೆಡಬಲಗಾಲ ತುದಿಯಿಂದ ದೂಕಿದರಲ್ಲಿಯೆ ಸುಳಿದೆ 7 ವಾಕುಗಳೆಂಬ ಕೂರಂಬನು ಸಹಿಸಿ ಪ- ರಾಕೆಂದು ಪರರ ಸೇವಿಸಿದೆ ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ- ಹಾಕಾರ ಮಡುವಿನೊಳಿಳಿದೆ 8 ಈಗಲಾದರು ದೇಹ ಭೋಗವೆ ಬಯಸುತ ನೀಗಿದೆ ವ್ರತ ನೇಮಾದಿಗಳ ಸಾಗದ ಫಲ ತನಗಾಗಬೇಕೆಂಬ ಮ- ನೋಗತಿಯಿಂದ ಕರ್ಮಗಳ 9 ಮೂಗಭಾವನೆಯನ್ನು ನೀಗದೆನಿಸಿ ಮುಂ- ದಾಗಿಯಾಡುವೆ ಮಥನಗಳ ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ- ಡಾಗಿ ಕೊಂಡೆನು ಝಗಳಗಳ 10 ಕಂತುಜನಕ ಕಂಜನಾಭ ವೆಂಕಟರಾಜ ಚಿಂತಾಮಣಿ ಸುರತರುವೆ ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ ಇಂತುಪೇಕ್ಷಿಸುವುದು ಥರವೆ 11 ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ ಕಾಂತ ಕಾರುಣ್ಯ ವಾರುಧಿಯೆ ಚಿಂತಿತದಾಯಿ ಎನ್ನಂತರಂಗದಿ ಬೇಗ ನಿತ್ಯ ವಿಧಿಯೆ 12
--------------
ತುಪಾಕಿ ವೆಂಕಟರಮಣಾಚಾರ್ಯ