ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ. ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು ಸುಸ್ವಭಾವದ ಸರಳ ಹೃದಯಾನ್ವಿತಳು ನೀನು ಕಪಟ ಕಿರಾತನವನು 1 ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು ಕಪಟ ವೇಷದೊಳು ಬಂದ ವಿಷಕಂಠನವನು ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2 ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು ಮೂಜಗವು ಮೋಹಿಸುವ ಕೋಮಲಾಂಗಿಯು ನೀನು ಈ ಜಗವರಿಯೆ ಸರ್ವದ ಭಸ್ಮಾಂಗನವನು 3 ಕನಕ ಮಣಿಮಯದಂತಃಪುರವಾಸಿಯು ನೀನು ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4 ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು ಕೋರಿ ಗಜಚರ್ಮಧರಿಸುವ ಭಿಕಾರಿಯವನು ಭೂರಿ ಸುಖಭೋಗಂಗಳನನುಭವಿಸುವೆ ನೀನು ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5 ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು ಕರುಣವಿಲ್ಲದೆ ಮೂಜಗವನುರುಹುವನವನು ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು ನರನಾದ ಭಕ್ತನೊಳು ಹೋರಾಡಿದವನು 6 ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ ಗಂಗಾಜನಕನ ಪ್ರಿಯತಮ ಸೋದರಿಯು ನೀನು ರಂಗೇಶವಿಠಲನ ಚರಣ ಸೇವಕನವನು 7
--------------
ರಂಗೇಶವಿಠಲದಾಸರು
ಪೂಜೆಯನು ಮಾಡಿರೊ ಪಾಪಿಪುರುಷನಿಗೆಕಾಯಮಲತೋಯದ ಸ್ನಾನವನೆ ಮಾಡಿಸಿನಯನ ನಾಸಿಕದ ಮಲ ಗಂಧಲೇಪನ ಮಾಡಿಗುಪಿತದಲಿ ಗುದಮಲ ಹಸ್ತೋದಕವ ಕೊಟ್ಟುಅಷ್ಟಮದ ದರಿದ್ರ ಅಲ್ಪಬಲನೆ ಕ್ರೂರನವವಿಧ ದ್ವೇಷಕೆ ನೀನೆ ಅಧಿಕಾರಿಯು
--------------
ಗೋಪಾಲದಾಸರು
ವೃಂದಾವನದೇವಿ ನಮೋನಮೋ-ಚೆಲ್ವ-|ಮಂದರಧರನ ಮನಃ ಪ್ರಿಯಳೆ ಪನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
--------------
ಪುರಂದರದಾಸರು