ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳಗಿರಿಯಲಿ ಬೆಳಗಿಹೆಯ ಕಳವಳಿಸುವ ಮನ ಸುಳಿವದೆನ್ನಮಲ ಕಳೆದಭಯವನಿತ್ತು ನರಹರಿ ಪ. ಅಳಗಿರಿ ಹತ್ತಲು ಝಳ ಝಳ ಮನಸಲಿ ಸುಳಿದು ಭಯವ ಹರಿಸಿ ತೊಳಲಿದ ಭಕ್ತರಘ ಕಳೆದು ಪೊರೆವೆನೆಂದು ಅ.ಪ. ರಂಗನ ಮದುವೆಯೋಳ್ ವೆಂಕಟೇಶನು ಬೊಮ್ಮಗೆ ಮುಂಗಡ ನಿನಗುಣಿಸೆನೆ ಉಂಡನು ಹರೆ ರಂಗನ ಬೆಟ್ಟ ಬಾಷಿಂಗ ನರಸಿಂಗ ಹಿಂಗದೆ ವೆಂಕಟನ ತೋರಿಸೋ ಎನ್ನ ಕಂಗಳಲಿ ನೋಡುವೆ ಮನದಣಿಯೆ 1 ಬಂದ ಭಕ್ತರಿಗಭಯದಿಂದಲೇರಿಸಿ ಮುನ್ನ ತಂದೆ ತೋರಿ ವೆಂಕಟನ್ನ ರನ್ನನ್ನ ನಿಂದು ಶ್ರೀನಿವಾಸ ತಂದೆ ವರಹರಂತೆ ಇಂದೆನ್ನ ಕುಲದೇವತೆ ತಂದು ತೋರಿದೆ ನಿಮ್ಮ ಮೂವರ ರೂಹವ 2 ನಾರದ ವಂದ್ಯನ ನಾರೇರಿಗೊಲಿದನ ಶೂರ ಶ್ರೀ ಶ್ರೀನಿವಾಸನೆಂಬ ಪೆಸರಿನ ನೀ ಸಾರಿರ್ಪೆ ಪೆಸರ್ವ ನಾಮದಲಿ ನಾರಾಯಣನೆಂದ ಬಾಲನಿಗೆ ಒಲಿದನೆ ಆರಿಗು ವಶವÀಲ್ಲ ದಾರುಣನಿನಾಮ ನರಸಿಂಹ3
--------------
ಸರಸ್ವತಿ ಬಾಯಿ
ಜಗನ್ನಾಥದಾಸರು ರಕ್ಷಿಸೋ-ಗುರುವರ-ರಕ್ಷಿಸೋ ಪ ಈಕ್ಷಿಸೊ ಕರುಣ ಕಟಾಕ್ಷದಲಿನ್ನ ಶಿಕ್ಷಿಸು ಮಧ್ವಾಗಮವ ಮುನ್ನ ಉಕ್ಕಿಸು ಭಕ್ತಿ ವಿರಕ್ತಿ ಚೆನ್ನ | ಆಹ ಲಕ್ಷ್ಮೀಕಾಂತನ ಅಪರೋಕ್ಷದಲಿ ಕಂಡು ಪ್ರ- ತ್ಯಕ್ಷ ಔತಣ ಉಂಡ ದಕ್ಷ ಶ್ರೀ ಜಗನಾಥ ವಿಠಲನ ದೂತ ಅ.ಪ. ನರಸಿಂಹದಾಸರ ಕುವರಾ-ಧರಿಸಿದೆ ಶ್ರೀನಿವಾಸನಪೆಸರ ವರಕವಿತಾ ಹುಟ್ಟಿನ ಸಾರ-ಮೆರೆಯಿತು ಕೀರ್ತಿ ಅಪಾರ \ಆಹ ವರದೇಂದ್ರನ್ನ ಅಶುಕವಿತಿಯಲಿಪೊಗಳಿ ವರಶಿಷ್ಯನಾಗುತ ಮೂರೊಂದು ಶಾಸ್ತ್ರದಿ ಕಡುಹುಲಿ ಎನಿಸಿದೆ 1 ನ್ಯಾಯಶಾಸ್ತ್ರದಿ ಜಗಜ್ಜಟ್ಟೀ-ವೇದಾಂತರಸಗಳ ಭಟ್ಟಿ ಮಾಯಾವಶಿರ ಮೆಟ್ಟಿ-ಅಹಂಕಾರ ಶಿರದಲಿಟ್ಟಿ ಆಹ ಶ್ರೇಷ್ಠವಿಜಯದಾಸರು ಮನೆ ಮುಟ್ಟಿ ಕರೆದರು ನಿನ್ನ ಬಹು ಬಹು ಕಂಗೆಟ್ಟೀ ಬತ 2 ಹೋಯಿತು ಕಳೆಮುಖದಿಂದ ಕಚ್ಚಿತು ಭರದಿಂದ ಆಹ ಭರದಿ ಹರಿಯ ಕರುಣ ಜರುಗಿ ಪೋದುದಕಂಡು ಕೊರಗಿ ಕೊರಗುತ ಕ್ಷೇತ್ರ ತಿರುಗುತ ಕೊನೆಗೆ ಗುರು ರಾಘವೇಂದ್ರರ ಪುರವ ಸೇರುತ ಬಹಳ ಕಾಯ ದೆರಗಿ ಸೇವೆಯಗೈದೆ 3 ಕರುಣಾಮಯನು ಸ್ವಪ್ನದಿ ಗುರುವು- ಗುರು ದ್ರೋಹ ಕಾರಣ ವರುಹಿ ಸುರಿಸಿ ಆಶೀರ್ವಾದವ ಶಿರದಿ- ತೆರಳೆಂದ ವಿಜಯದಾಸರ ಬಳಿ ಆಹ ತೆರೆದು ಕಂಗಳು ಒಡನೆ ತರಿದು ಮದಮಾತ್ಸರ್ಯ ಕರೆದು ಕುಡಿಯುತ ಶಿಷ್ಯ- ವರನು ಎನಿಸುತ ಚರಣಸಾರುವ ಬಿಡದೆ ಗೋಪಾಲದಾಸರ 4 ಸ್ವಗುರುಭಾವವತಿಳಿದು ತನ್ನಾಯುವನೆ ಇತ್ತ ಆಹ ಕೊಂಡು ಆಯುರ್ದಾನ ತೊಂಡನೆಂದಡಿಗೆರಗಿ ಕೊಂಡು ಶ್ರೀಹರಿದಾಸ ಗಂಡುದೀಕ್ಷೆಯ ಒಡನೆ ತಾಂಡವಾಡುತ ಪೋಗಿ ಪಾಂಡುರಂಗನ ಪುರದಿ ಮಂಡೆ ಮುಳುಗಿಸೆ ನದಿಲಿ ಕಂಡೆ ಅಂಕಿತ ಶಿರದಿ 5 ಪಂಡಿತನಾನೆಂಬ ಹೆಮ್ಮೆ ಬರಿ-ಪುಂಡತನವಲ್ಲದೆ ಹರಿಯ ನಿಜ ನಿನ್ನ ಚರಿತೆ ಆಹ ತಂಡತಂಡದ ಕವನ ದಂಡೆ ಹಾರಲು ಹರಿಗೆ ಕೊಂಡು ಔಡಣ ನಡಿಸೆ ಉಂಡು ಸಂತಸದಿಂದ ತುಂಡುಗೈಯುವ ಭವವ ಕಂಡೆ ನಾಕವ ಭುವಿಲಿ 6 ದೇಶದೇಶಗಳ ಸಂಚರಿಸಿ-ಹೇಸಿ ಮತಗಳ ನಿರಾಕರಿಸಿ ಪೊರೆದೆ ಹರೆಸಿ ಆಹ ಭಾಷಾದ್ವಯ ಯೋಜನೆ ಮೀಸಲು ನಿನಗೆಂಬೆ ವ್ಯಾಸ ರಾಜಾದಿಗಳ ಆಶೆಯಂದದದಿ ತತ್ವ- ರಾಶಿ ತುಂಬುತ ಗ್ರಂಥರಾಜ ರಚಿಸುತ ಜಗಕೆ ತೋಷ ತಂದಿತ್ತಿಯೊ ದಾಸಜನರುಲ್ಲಾಸ 7 ಶ್ರೀಮದ್ಧರಿಕಥಾಮೃತಸಾರ-ನೇಮ ದಿಂದೋದುವನೆ ಧೀರ ತಾಮಸರಿಗಿದು ಬಹಳದೂರ- ನೀಮಾಡಿದೆ ಮಹೋಪಕಾರ ಆಹ ಕಾಮವರ್ಜಿತವಾಗಿ ಪ್ರೇಮದಿ ನರಹರಿಯ ಭಾಮಸಹ ಸಂತತ ನೇಮದಿಂ ಧ್ಯಾನಿಸುತ ನಿತ್ಯ ಸಕಲೇಂದ್ರಿಯ ವ್ಯಾಪಾರ ಧೂಮಕೇತುವು ಎನಿಸುತ ನಮ್ಮಘಕಾನನಕೆ 8 ಪ್ರಾಣೇಶ ಕರ್ಜಗಿ ದಾಸಾರ್ಯರವೃಂದ- ನೀನಾಗಿ ಪೂರೆದಂತೆ ಘನ ಅಭಿಮಾನದಿಂದ ದೀನರೆಮ್ಮಯವೃಂದ ಕಾಯೆಂಬೆ ಮುದದಿಂದ- ತಾಣ ನಿಮ್ಮದೆ ನಮಗೆ ದಾಸಪಂಥ ಸ್ತಂಭ ಆಹ ಕೃಷ್ಣಾಗ್ರಜ ಶಲ್ಯ ಸಹ್ಲಾದ ಮತ್ತಾ ಪುರಂದರ ದಾಸಾತ್ಮಜನೀನಂತೆ ದೀನಜನೋದ್ಧಾರಗೈಯ್ಯೆ ಮುಂದೇಳುಬಾರಿ ಜನ್ಮಯೆತ್ತು ವಿಯಂತೆ ಶರಣು ಕರುಣಾಮಯ 9 ಕನ್ನಡಕೆ ಮುಳ್ಳು ಕುವರ ನೀಮುದ್ದು ಆಹ ಶರ್ಕರಾಕ್ಷಸಗೋಸ್ಥ ಅನುಸಂಧಾನ ಕ್ರಮ ಸು ನೀಕವಡಗಿಸಿ ಕವನ ಕಡಲೊಳು ಸಾಕಿಹೆ ಹರಿ ಭಕ್ತಸಂಘವ ಹಿರಿಯ ದಾಸರ ಪಥವನನುಸರಿಸಿ ಶಕ್ತನಾವನು ಗುಣಿಸೆ ನಿನ್ನುಪಕಾರ ಜಗಕೆ 10 ಸಣ್ಣವನು ನಾ ನಿನ್ನು ಗುರುವೇ-ನಿನ್ನವ ಸತ್ಯ ಮನ್ಮನ ಪ್ರಭುವೆ ಮನ್ನಿಸಪರಾಧ ಕಲ್ಪ ಧ್ರುಮವೆ-ಚಿಣ್ಣರ ಸಲಹೆ ಪಿತಗೆ ಶ್ರಮವೆ ಆಹ ಘನ್ನ ಜಯತೀರ್ಥ ವಾಯ್ವಂತರ್ಗತ ಶ್ರೀ ಕೃಷ್ಣವಿಠಲ ತದ್ವನನೆಂದು ಭಜಿಸುವ ಭಾಗ್ಯ ಜನ್ಮಜನ್ಮಂತರ ಕೊಟ್ಟು ಕಾಪಾಡುವಂಥ ನಿನ್ನಭಯಕರವೆನ್ನ ಶಿರದಲಿಡುವಲಿ ಸತತ 11
--------------
ಕೃಷ್ಣವಿಠಲದಾಸರು
ಮುನಿಯು ನೀನಾದದ್ದು ಮನದೊಳು ನಾಬಲ್ಲೆಮುನಿ ಜನ ಮನ ಮಂದಿರಾ - ಸುರೇಂದ್ರಾ ಪ ಅನುಮಾನ ತೀರ್ಥರ ಮಾನ ಮೇಯದ ಸಾರಘನವಾಗಿ ತಿಳಿಸಿದುದಾರಾ - ಸುರೇಂದ್ರಾ ಅ.ಪ. ಗಜ ವೈರಿ ಮಧ್ಯದಭುಜಗ ವೇಣಿಯರ ಕೂಡೀ - ಸುರೇಂದ್ರಾ ||ಅಜನೀನೇ ಎನ್ನುತ | ಭುಜಿಸೆ ಅನ್ನವ ನೀಡಿಯಜನಾದಿಗಳ ಮಾಡಲೂ - ಸುರೇಂದ್ರಾ ||ಗಜ ವರದನು ಬಂದು | ಭುಜಿಸಲು ಅನ್ನವತ್ಯಜಿಸಿ ಬಂದೆಯೊ ಸುರಪುರವಾ - ಸುರೇಂದ್ರಾ 1 ವ್ರಜ || ಸುರರನೆಲ್ಲರ ಕಾಯ್ದಹರಿಯ ಮೊಗವ ನೋಡೆ ನಾಚುತಲೀ - ಸುರೇಂದ್ರಾ 2 ವಾಸುಕಿ | ಅಂದ ನೇಣನ ಮಾಡಿಮಂಥಿಸಿ ಶರಧಿಯನ್ನಾ - ಸುರೇಂದ್ರಾ ||ಅಂದು ನೀನಮೃತವ ನುಂಡ ಕಾರಣದಿಂದಇಂದಿಲ್ಲಿ ಸುರರಿಗುಣಿಸೆ ಬಂದ್ಯೋ - ಸುರೇಂದ್ರಾ 3 ಮಧ್ವ ಶಾಸ್ತ್ರವೆಂಬ | ದುಗ್ದಾಬ್ದಿಯನೆ ನೀನುಶ್ರದ್ಧೆಯಿಂದಲಿ ಮಥಿಸೇ - ಸುರೇಂದ್ರಾ ||ಉದುಭವಿಸಿದ ನ್ಯಾಯ | ಸುಧೆ ಎಂಬ ಅಮೃತವವಿದ್ವಜ್ಜನಕೆ ಉಣಿಸೇ - ಸುರೇಂದ್ರಾ ||ತ್ರಿದಶ ಲೋಕವ ತ್ಯಜಿಸಿ | ಉದಿಸಿದೆ ಧರೆಯೊಳುಸಾಧು ವೇಷವನ್ನೆ ಧರಿಸೀ - ಸುರೇಂದ್ರಾ 4 ನಾಕಪತಿಯೆ ನಿನ್ನಾ | ನೇಕ ಚರಿತೆಯಲ್ಲಿನಾಕೇಳಿ ಪೊಗಳಲಳವೇ - ಸುರೇಂದ್ರಾ ||ಲೋಕಾ ಲೋಕದೊಳು | ಟೀಕಾರ್ಯರೆಂಬವಾಕು ಕೇಳೀ ಬಲ್ಲೆನೋ - ಸುರೇಂದ್ರಾ ||ನಾಕಜ ಪಿತ ಗುರು ಗೋವಿಂದ ವಿಠಲನನೇಕ ಬಗೆಯಿಂದ ಸ್ತುತಿಸಿದೆಯೋ - ಸುರೇಂದ್ರಾ 5
--------------
ಗುರುಗೋವಿಂದವಿಠಲರು