ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ - ಗುಣಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ಪ ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲನರನಂತೆ ಬಂಡಿಬೋವನ ಮಾಡಿ ನಿನ್ನ ದುಡಿಸಲಿಲ್ಲಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ 1 ಅನುದಿನ ಚರಿಸಲಿಲ್ಲಬಿನಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ2 ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ3 ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲಭವನಂತೆ ಶ್ಮಶಾನದಿ ಮನೆಮಾಡಿ ಸ್ಮರಿಸಲಿಲ್ಲತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲಿಸಲಿಲ್ಲಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ4
--------------
ಕನಕದಾಸ
ಗುಣವಂತರ ಗುಣವ ಗುಣವಂತನರಿವನುಗುಣಹೀನ ಗುಣವಂತನ ಗುಣವೇನ ಬಲ್ಲನೋ ಪ ಕಮಲಗಳ ಹೃದಯ ಭ್ರಮರಕ್ಕೆ ತಿಳಿಯುವುದುಕಮಲಗಳ ಗುಣ ಕಪ್ಪೆಗೇನು ತಿಳಿವುದೋವಿಮಲರಾ ಹೃದಯ ವ್ಯುತ್ಪನ್ನರಿಗೆ ಹೊಳೆಯುವುದುಕುಮತಿಗಳಿಗೆ ಕೋಮಲರ ಘನತೆಯೆಂತರಿವುದೋ 1 ಕೆಚ್ಚಲೊಳಿರುತಿಹುದು ಕರುವಿಗೆ ದೊರಕುವುದುಕೆಚ್ಚಲ ಕಚ್ಚಿರುವ ಉಣ್ಣೆಗದು ದೊರೆವುದೋಸಚ್ಚರಿತ್ರರ ಬೋಧೆ ಸತ್ಪುರುಷಗಂಟುವುದುಹುಚ್ಚ ತಾ ಬದಿಯಿದ್ದರೆ ಪರಿಣಾಮವೇನಹುದೋ 2 ಸಾಧುಗಳ ಮಹಿಮೆಯ ಸಾಧುಗಳ ಹೃದಯವುಸಾಧುಗಳ ಬೋಧೆಯ ಸಾಧು ಸಹವಾಸಬೋಧ ಚಿದಾನಂದ ಬಗಳೆಯಾದವರಿಗರಿವುವಾದಿಯಾಗಿಹ ಮೂರ್ಖರಿಗೆ ಗುಣವೇನು ತಿಳಿಯುವುದೋ 3
--------------
ಚಿದಾನಂದ ಅವಧೂತರು
ಬೇಡುವುದೂ ಬಲು ಕಷ್ಟ ಪ ನೀಡದಿದ್ದವನೇ ನಷ್ಟ ಅ.ಪ. ನಾಚಿಕೆ ಎಲ್ಲನು ತೊರೆದು ಮಹಾ ನೀಚರಿಗೆ ಬಾಯ್ತೆರದು 1 ಕೊಟ್ಟಾರೆಂಬ ದುರಾಶಾ ಕ್ರಿಯಾ ಭ್ರಷ್ಟರರಿಯರೂ ಕ್ಲೇಶಾ 2 ಚಿತ್ತವೃತ್ತಿಯನು ಕಂಡೂ ಅಧಮರ ಹೊತ್ತುಹೊತ್ತಿಗೆ ಕಾಣಿಸಿಕೊಂಡು 3 ಗುಣಹೀನರ ಕೊಂಡಾಡೀ ಬಂದು ಕ್ಷಣಕ್ಷಣಕವರನು ನೋಡೀ 4 ಶ್ರೀದವಿಠಲನ ಬಿಟ್ಟೂ ಅಧಮಾಧಮರಿಗೆ ದೈನಬಟ್ಟು 5
--------------
ಶ್ರೀದವಿಠಲರು
ಮಧ್ವಮತ ಪೊಂದದೆ ಬದುಕಿದವನೂ ಹದ್ದು ಕಾಗಿ ಬದುಕಿ ಕಾಲವನು ಕಳೆದಂತೆ ಪ ಸಕಲೇಂದ್ರಿಯಗಳು ಇದ್ದು ನಯನೇಂದ್ರಿಯ ಇಲ್ಲದಂಅ.ಪ. ಫಲಪುಷ್ಪಯಿಲ್ಲದಾ ಗಿಡಬಳ್ಳಿ ಇದ್ದಂತೆ ಮಳೆಯಿಲ್ಲದಾ ಬೆಳಸು ನೋಡಿದಂತೆ ಚಲುವನಾದಡೆ ಏನು ಗುಣಹೀನನಾದಂತೆ ಖಳರು ನಿತ್ಯಾಕರ್ಮ ಚರಿಸಿದಂತೆ 1 ಉತ್ತಮರ ಕೂಡದಾ ಯಾತ್ರೆ ಮಾಡಿದಂತೆ ಕತ್ತೆ ಪರಿಮಳ ಪೊತ್ತು ತಿರುಗಿದಂತೆ ಮೃತ್ತಿಕೆ ಶೌಚ ಇಲ್ಲದೆ ಆಚಾರ ಮಾಡಿದಂತೆ ಸತ್ತ ಹೆಣಕ್ಕೆ ವಸ್ತ್ರ ಶೃಂಗರಿಸಿದಂತೆ2 ನಿಶಿಕರ ಇಲ್ಲದಾ ತಾರೆಗಳು ಇದ್ದಂತೆ ವಸುಧಿಪತಿಯಿಲ್ಲದಾ ರಾಜ್ಯದಂತೆ ಹಸಿವೆ ಇಲ್ಲದವನು ಮಧುರನ್ನ ಉಂಡಂತೆ ಹಸುಗಳಿಲ್ಲದ ಮನೆ ವೊಪ್ಪಿದಂತೆ 3 ತಾರತಮ್ಯಗಳಿಲ್ಲದ ವೇದ ಓದಿದಂತೆ ಪುರಂದರದಾಸರು ಪೇಳಿದಂತೆ ಸಿರಿ ವಿಜಯವಿಠ್ಠಲನ ಕಾರುಣ್ಯ ಪಡಿಯದವ ಅಧಮನಂತೆ 4
--------------
ವಿಜಯದಾಸ
ಮಾಯಾ ಭ್ರಮಿತನಾದ ಮೂಢನಪರಾಧ ಶತವನು ಪಗುಣ ಮೂರರೊಳು ಬದ್ಧನಾಗಿ ಮತ್ತೆಗುಣಕಾರ್ಯ ವಿಷಯಂಗಳೊಳು ಸಕ್ತನಾಗಿಗುಣ ಹತ್ತರಭಿಮಾನಿಯಾಗಿ ುಪ್ಪಗುಣಹೀನನಿಗೆ ಜ್ಞಾನ ದೊರಕೊಳ್ಳದಾಗಿ 1ಪುಣ್ಯ ಪಾಪ ಮಿಶ್ರವೆಂಬ ಕರ್ಮಜನ್ಯವಾದ ಸ್ಥೂಲದೇಹ ತಾನೆಂಬಭಿನ್ನಮತಿಗೆ ದೊರಕೊಂಬ ಜ್ಞಾನವಿನ್ನುಂಟೆ ನಿರ್ಣೈಸೆ ಸುಗುಣ ಕದಂಬ 2ಚಂಚಲವಾಗಿಪ್ಪ ಮನವು ಅಲ್ಲಿವಂಚನೆುಂ ಮಾಳ್ಪ ಸ್ತುತಿ ಪೂಜೆ ಜಪವುಸಂಚಿತವಾುತಘ ವ್ರಜವು ಹೀಗೆವಂಚಿಪ ಮಾಯೆಯ ಗೆಲಲಾರಿಗಳವು 3ಕರ್ಮಕಲಾಪವ ಕಳಿದು ಚಿತ್ತನಿರ್ಮಲನಾಗಿ ಬ್ರಹ್ಮವ ನೆರೆ ತಿಳಿದುಹಂಮಳಿದುಳಿವದೆಲ್ಲಿಯದು ನೀನುಸುಮ್ಮನಿರದೆ ಕಾಯೆ ಸುಲಭವಾಗಿಹುದು 4ಬಂಧನವಿದ ಪರಿಹರಿಸು ಕೃಪೆುಂದಲಿ ಭವದಿಂದಲೆನ್ನನುದ್ಧರಿಸು ತಂದೆ ನೀ ತಿರುಪತಿಯರಸು ಲೋಕಬಂಧು ಶ್ರೀ ವೆಂಕಟರಮಣ ನಿರೀಕ್ಷಿಸು 5ಓಂ ವಿಶ್ವರೂಪ ಪ್ರದರ್ಶಕಾಯ ನಮಃ
--------------
ತಿಮ್ಮಪ್ಪದಾಸರು
ಶ್ರೀ ಪುರಂದರದಾಸರು132ಶರಣುಪುರಂದರದಾಸರಾಯರೆ ಶರಣು ಶರಣು ದಯಾನಿಧೆಶರಣು ವ್ಯಾಸಮುನೀಂದ್ರ ಪ್ರಿಯತಮ ಶರಣು ಮನ್ಮನೋಭೀಷ್ಟದ ಪ.ಜ್ಞಾನಭಕ್ತಿವೈರಾಗ್ಯ ಶಮದಮಗುಣಗಣಾದಿ ಸಂಪನ್ನ ನೀಹೀನ ವಿಷಯಗಳಲ್ಲಿ ರತನುಬೂಟಕನು ಗುಣಹೀನ ನಾ 1ನಿನ್ನ ಸುಸ್ವಭಾವವಾದ ಔದಾರ್ಯಗುಣದಿಂದ ಎನ್ನನ್ನುಇನ್ನು ಮುಂದೆ ಕೊರತೆ ಸರ್ವವಪರಿಹರಿಸಿ ಪಾಲಿಸೋ 2ಶ್ರೀಪುರಂದರವಿಜಯವಿಠ್ಠಲಗೋಪಾಲ ಕಪಿಲ ಶ್ರೀಶಗೆಪುಷ್ಪ ಜನಪಿತÀ ಶ್ರೀ ಪ್ರಸನ್ನಶ್ರೀನಿವಾಸಗೆ ಪ್ರಿಯತಮ 3
--------------
ಪ್ರಸನ್ನ ಶ್ರೀನಿವಾಸದಾಸರು