ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನದೊಳಗಿರು ಹರಿಯೆ ಮೂರ್ಲೋಕ ದೊರೆಯೆ ಪ. ಮನೆದೊಳಿ(?)ಗಿರು ಬಹು ಜನರು ಪೇಳುವ ದೂರು ಎಣಿಸಲು ಶಕ್ತನಾರು ಮುಖಾಬ್ಜ ತೋರು ಅ.ಪ. ಮೂರ್ತಿ ನೀನು ಪ್ರಾಕೃತ ಗುಣಸರ್ಗದಿ ಬರುವುದೇನು ಸರ್ಗರಕ್ಷಣ ಪಾಪವರ್ಗವೆಲ್ಲವನು ನಿಸರ್ಗ ಮೀರದೆ ಮಾಳ್ಪ ದುರ್ಗಮದ್ಭುತಕರ್ಮ ದೀರ್ಘದರ್ಶಿ ಮುನಿವರ್ಗಕೊಲಿದು ನಿಜ ಮಾರ್ಗ ತೋರ್ಪ ಶ್ರೀ ಭಾರ್ಗವೀ ರಮಣಾ 1 ಜಲದೊಳಗಾಡಿದನು ಬೇರನು ಕಿತ್ತಿ ಖಳರನು ಸೀಳಿದನು ನೆಲನನಳೆದು ತಾಯಿ ತಲೆಯ ತರಿದು ನಿಜಲಲನೆಗೋಸುಗ ದೈತ್ಯ ಕುಲವ ಸಂಹರಿಸಿದ ಶಿಲೆಯನು ರಕ್ಷಿಸಿ ಕಳವಳಿಸಿದ ಕಪಿ ತಿಲಕನ ಸ್ನೇಹವ ಬಳಸಿದನೆಂಬುದು 2 ಬಾಗಿಲ ಮುಚ್ಚಿದರೆ ಗೋಡೆಯ ಹಾರಿ ಹೋಗಿ ಮನೆಯ ಒಳಗೆ ಬಾಗಿಲ ಮರೆಯಲಿ ಬಾಗಿನೋಡುತ ಮೆಲ್ಲಗಾಗಿ ಬೆಣ್ಣೆಯ ಮೆದ್ದು ಸಾಗಿ ಬರುತಲಿರೆ ನಾಗವೇಣಿಯರು ಹಿಡಿಯಲು ನೀವಿಯ ನೀಗಿ ಪುರುಷರನು ಕೂಗಿದನೆಂಬರು3 ತೊಟ್ಟಿಲೊಳಗೆ ಮಲಗಿ ನಿದ್ರೆಯಗೈವ ಪುಟ್ಟ ಶಿಶುಗಳನೆಲ್ಲ ತಟ್ಟಿ ಎಬ್ಬಿಸಿ ಕಣ್ಣಾಕಟ್ಟಿ ವಸ್ತ್ರದಿ ತಾನೆ ಚಿಟ್ಟನೆ ಚೀರಿ ಒ- ತ್ತಟ್ಟು ಎಲ್ಲರು ಕೂಡಿ ಕಟ್ಟಿದ ಕರುಗಳ ಬಿಟ್ಟ ಮೊಲೆಗೆ ಒಳ- ಗಿಟ್ಟ ಹಾಲು ಮೊಸರೊಟ್ಟಿಲಿ ಸವಿವುದೆ 4 ವಿದ್ಯೆಯ ಕಲಿಯೆಂದರೆ ಅಮ್ಮಯ್ಯ ಎನಗೆ ನಿದ್ದೆ ಬರುವುದೆಂಬುವಿ ಹೊದ್ದಿಸಿ ತಟ್ಟಿದರೆದ್ದು ಓಡುವಿ ಗೋಪೆರಿದ್ದ ಠಾವಿಗೆ ನಾನಾ ಬದ್ಧವನು ಸುರುವಿ ಸಿದ್ಧವಾಗಿ ಕಾದಿರೆ ಕೈಗೆ ಸಿಕ್ಕದೆ ಉದ್ಧವ ಗೃಹದೊಳು ಬೌದ್ಧನಂತಿರುವಿ 5 ಕುದುರೆಯ ಹತ್ತಿದರೆ ಯಾರಾದರೂ ಕದನವ ಮಾಡಲಿಹರೆ ಹೃದಯ ಮಂಟಪದಿ ನೀ ಸದರವಾಡುತಲಿರೆ ಮದನ ಜನನಿವರ ಮದಮತ್ಸರಗಳ ಒದೆದು ತೀವ್ರದಲಿ ಪದಯುಗ ಪಾಲಿಸುವುದಯ್ಯ ಗಿರೀಶ 6
--------------
ತುಪಾಕಿ ವೆಂಕಟರಮಣಾಚಾರ್ಯ
ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ ವಾಗೀಶಪಿತ ದಯವಾಗೋ ಮೋಹನ ಪ. ಮನವು ನಿನ್ನಯ ಸೇವೆಗನುವಾಗಿ ನಿಲದು ಸ- ಜ್ಜನ ಸಂಗ ಸಲ್ಲಾಪವನು ಮಾಡಗೊಡದು ಘನಮೋಹಕೊಳಗಾದ ತನುವ ಪಿಡಿವುದು ಶ್ರೀ- ವನಿತೆಯರಸ ನಿನ್ನ ನೆನವೆಂತು ಬಹುದೊ 1 ಹಂಚಿ ದುರ್ವಿಷಯಕ್ಕೆ ವಂಚನೆಗೊಳಿಸಿ ಪ್ರಪಂಚದೋಳಿರಿಸಿ ಪಂಚಬಾಣನ ಶುಕಚುಂಚುವೇದದಿ ತ್ವಂಚ ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ 2 ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ ನಿರ್ಗಮಗೊಂಡಪವರ್ಗವೆಂತಹುದೊ 3 ದಿನದಿನದೊಳಗಾಹತನುವ ನೋಡಲು ಮುಂದಿ ನನುಭವವನು ಕಾಂಬದನು ನಾನೇನರಿಯೆ ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ- ದಿನ ಕಾರ್ಯವಹದೆಂತೊ ವನಜಲೋಚನನೆ 4 ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ ಮತಿಹೀನ ಜನಕೆ ದುರ್ಗತಿಯು ತಪ್ಪುವದೆ ಅತುಳ ಮಹಿಮ ಭಕ್ತಹಿತನಾದ ವೆಂಕಟ ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ 5
--------------
ತುಪಾಕಿ ವೆಂಕಟರಮಣಾಚಾರ್ಯ