ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಖಿಲಾತ್ಮ ನಿಖಿಲಾತ್ಮ ಅಖಿಲಬ್ರಹ್ಮಾಂಡಪತಿ ಸಲಹು ಸರ್ವೋತ್ತಮ ಪ ಮಂದರಧರ ಎನ್ನ ಮಂದಮತ್ಯಳಿದಾ ನಂದ ಮತಿಯಿತ್ತು ಚೆಂದದಿಂ ರಕ್ಷಿಸು 1 ನಿತ್ಯನಿರುಪಮ ಸತ್ತು ಚಿತ್ತ ನಿಮ್ಮ ಭಕ್ತಿ ಭಜನೆ ಎನ್ನ ಚಿತ್ತಕ್ಕೆ ದಯಮಾಡು 2 ಬಗೆದು ಎನ್ನಂತರಂಗzಗಲದೆ ನಿಂತು ನಿಜ ಸುಗುಣವಿತ್ತು ಪೊರೆ ಸುಗುಣಾಂಬುಧಿ 3 ಕಾಮಿತಜನಕಲ್ಪ ಕಾಮಧೇನು ಎನ್ನ ಕಾಮ ಪೂರೈಸಿ ನಿನ್ನ ನಾಮವಿತ್ತು ಕಾಯೊ 4 ಭಕ್ತಿದಾಯಕ ನಿನ್ನ ಭಕ್ತಿಯಿಂ ಭಜಿಸುವೆ ಸತ್ಯ ಶ್ರೀರಾಮ ನಿತ್ಯಮುಕ್ತಿಯಿತ್ತು ಪೊರೆ 5
--------------
ರಾಮದಾಸರು
ನ್ಯಾಯತಂದಿಹೆನೊ ಹರಿ ನಿನ್ನ ಸಭೆಗೆ ತೀರ್ಪುಮಾಡಿದನು ನ್ಯಾಯತಂದಿಹೆ ಪ ನ್ಯಾಯ ತಂದಿಹೆ ನೋಯದೆ ಉ ಪಾಯದಿಂದ ತೀರ್ಪುಮಾಡುವ ನ್ಯಾಯಾಧೀಶ ದಯಾಳು ಎನ್ನ ನ್ಯಾಯ ತೀರಿಸಿ ಕಾಯ್ವನೆಂದು ಅ.ಪ ಕೊಟ್ಟ ಒಡೆಯರೋ ಬೆನ್ನಟ್ಟಿ ಎನ್ನನು ಕಟ್ಟಿ ಕಾದ್ವರು ಭ್ರಷ್ಟನೆ ಮುಂದಕೆ ಕೊಟ್ಟ್ಹ್ಹೋಗೆನ್ವರು ನಿಷ್ಠುರಾಡ್ವರು ಕೊಟ್ಟು ಮುಕ್ತನಾಗ್ವೆನೆನ್ನಲು ಖೊಟ್ಟಿಕಾಸು ಕೈಯೊಳಿಲ್ಲವು ಭವ ಬೆನ್ನಟ್ಟಿ ಬಿಡದ ಕ ನಿಷ್ಟರಿಣಸೂತಕವ ಕಡಿಯೆಂದು 1 ಅನ್ನ ಕೊಟ್ಟವಗೆ ಅನ್ಯಾಯ ಯೋಚಿಸಿ ಬನ್ನ ಬಡಿಸಿದೆನೊ ಇನ್ನುಳಿಯದೆನೆಂದು ನಿನ್ನ ಸೇರಿದೆನೊ ಪನ್ನಂಗಶಯನ ಮುನ್ನ ಮಾಡಿದ ಎನ್ನ ಅವಗುಣ ಭಿನ್ನವಿಲ್ಲದೆ ನಿನ್ನೊಳ್ಪೇಳುವೆ ಸನ್ನುತಾಂಗನೆ ಮನ್ನಿಸಿ ಇದ ನಿನ್ನು ಎನ್ನಯ ಬನ್ನಬಿಡಿಸಿದೆಂದು 2 ಆಸೆಗೊಳಿಸಿದೆನೋ ಪುಸಿಯನ್ಹೇಳಿನಿ ರಾಸೆಮಾಡಿದೆನೋ ಶಾಶ್ವತದಿ ಕೊಟ್ಟ ಭಾಷೆ ತಪ್ಪಿದೆನೋ ವಸುಧೆಯೊಳು ನಾನು ಈಸುದಿನದಿಂ ಮೋಸಕೃತ್ಯದಿ ಘಾಸಿಯಾದೆನು ಧ್ಯಾಸಮರದು ಶ್ರೀಶ ಶ್ರೀನಿವಾಸ ಶ್ರೀರಾಮ ಪೋಷಿಸೆನ್ನ ಸುಶೀಲ ಗುಣವಿತ್ತು 3
--------------
ರಾಮದಾಸರು
ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ಮಹದಾದಿ ದೇವ ವಂದ್ಯ | ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು ರಹಸ್ಯಮತಿ ಕೊಡುವುದು ಸ್ವಾಮಿ ಪ ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ ಅನಂತ ಜನುಮವಾಗೆ ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು ಜ್ಞಾನಿಗಳಿಗರಿವಾಗಿದೆ ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ ಮಾನವನ ಕ್ಲೇಶಕೆಣಿಯೆ ಆನಂದ ನಂದನನೆ ತೃಣವ ಪಿಡಿದು ರುತುನ ವನು ಮಾಡಿ ತೋರುವ ಸ್ವಾಮಿ 1 ನಿನ್ನಧೀನ ಕರ್ಮಸ್ವಭಾವ ಮೊದಲಾಗಿ ಅನ್ಯಥಾ ಯಲ್ಲಿ ಕಾಣೆ ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ ಬಿನ್ನಪವ ಬರಿದೆನಿಸದೆ ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ ನಿನ್ನ ದಾಸನ ದಾಸನು ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ ಸನ್ನನಾಗೋ ಪಾವನ್ನರನ್ನ 2 ನರರಿಗೆ ಸಾಧನ ಸತ್ಕೀರ್ತನೆ ಎಂದು ಪರಮೇಷ್ಠಿ ಒರೆದನಿದಕೊ ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ ದುರಿತ ಬೆಮ್ಮೊಗವಾಗವು ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ ಶರಣರೊಳಗಿಟ್ಟು ಕಾಪಾಡು ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ ಪರಿಪೂರ್ಣವಾಗಿ ಇರಲಿ ಸ್ವಾಮಿ3
--------------
ವಿಜಯದಾಸ
ವಾದೀಂದ್ರ ಗುರುರಾಜ ನಿನ್ನ ಪಾದವ ತೋರಿಸಯ್ಯಾ ವಾದೀಂದ್ರ ಗುರು ನಿನ್ನ ಪಾದವ ನಂಬಿದೆ ಮೋದವÀ ಕೊಡುವುದು ಮದಗಳೋಡಿಸಿ ಪ ಉಪೇಂದ್ರ ಕರಕಮಲಜಾತ ಪಾಪಗಳೋಡಿಸಯ್ಯ ಪಾಪರಾಶಿಯ ಸುಟ್ಟು ದ್ರೌಪದೀವರದನ ಕೃಪೆಯಾಗುವಂತೆ ಮಾಡೋ ಶ್ರೀಪತಿ ಪ್ರಿಯನೆ 1 ಮೂಲರಾಮರ ಪಾದಪದುಮದಿ ಅಳಿಯಂತಿಪ್ಪ ಧೀರ ಶೀಲಾದಿ ಗುಣವಿತ್ತು ಶ್ರೀ ಲೋಲನಂಘ್ರಿಯ ಮಲಿನ ಮನವ ಕಳದು ಪೊಳೆಯುವಂತೆ ಮಾಡೋ2 ನಿತ್ಯ ಭಂಗಗಳೋಡಿಸುವಿ ಶೃಂಗಾರ ತುಳಸಿಯ ಮಂಗಳ್ಹಾರವ ಧರಿಸಿ ತುಂಗಮಹಿಮ ನರಸಿಂಗ ಮೂರುತಿ ತೋರೊ 3
--------------
ಪ್ರದ್ಯುಮ್ನತೀರ್ಥರು