ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನೊಡನೆ ಹುಟ್ಟಿದ ಹರಿಯೆ ಪಾಹಿ ಪ ಅನ್ನಂತ ಗುಣವನಧಿ ಎನ್ನಂತೆ ನಟಿಸುವಿ ಅ.ಪ ಸೃಷ್ಟಿಕಾಲದ ಮೊದಲು ಇಷ್ಟು ಪರಿಯಂತರದಿ ಅಷ್ಟು ಕಾಲವು ನಿನ್ನ ನಾಮ ಧರಿಸೆ ತುಷ್ಟಿ ಪೂರ್ಣನೆ ನೀನು ಮಂದಿ ಮೋಹಿಸಿ ಎನ್ನ ಕಷ್ಟಕೆ ಗುರಿಮಾಳ್ಪುದುಚಿತವೇ ನಿನಗೆ 1 ಒಳಗಿದ್ದು ಎನ್ನಲ್ಲಿ ಎಂತೆಂತು ನೀನಾದೆ ತಲೆ ಮಣಿದು ನಾನಂತು ಮಾಡಬೇಕೊ ಮಲಗುವುದು ನಿಲ್ಲುವುದು ನಿದ್ದೆಗೈವುದು ಮತ್ತೆ ತಿಳಿವುದು ತಿನ್ನುವುದು ನಿನ್ನ ಶ್ರೀಯವೊ ದೇವ 2 ಬಿಂಬನೀ ಪ್ರತಿಬಿಂಬ ನಾ ನಿನಗೆ ಎಂದೆಂದು ಸದನ ಜಯೇಶವಿಠಲರಾಯ ಡಿಂಬದಲಿ ನಡೆದ ಶ್ರೇಯ ನಿನ್ನದೆಂಬೊಜ್ಞಾನ ಬೆಂಬಿಡÀದೆ ಪಾಲಿಸಿ ಬಿಂಬ ದರುಶನ ನೀಡೊ 3
--------------
ಜಯೇಶವಿಠಲ
ಪತಿ ವಿಠಲ | ಉದ್ದರಿಸೊ ಇವಳ ಪ ಮೋದದಾಯಕನಾಗಿ | ಶ್ರೀದ ಶ್ರೀಹರಿಯೇ ಅ.ಪ. ದಾಸರಾಯರ ಕರುಣ | ವಾಶ್ರಯಿಸಿ ದಿನದಿನದಿಲೇಸು ಕೊಂಡಾಡುತಲಿ | ಮೇಶ ದಾಸರನೂಭಾಸುರ ಸುಗಾನ ಉ | ಲ್ಲಾಸದಲಿ ಮೈಮರೆದುಕೇಶವನ ಗುಣವನಧಿ | ಈಸುವಂತೆಸಗೋ 1 ವ್ಯಾಜ ಕರುಣೀಮಾಜದಲೆ ವೆಂಕಟನ | ನೈಜ ರೂಪವ ಕಂಡವ್ಯಾಜದಲ್ಲಿಂಕಿತಳು | ವಾಜಿ ಮುಖ ಹರಿಯೇ 2 ವಲ್ಲಭೆಯು ಶ್ರೀ ತುಳಸಿ | ಚೆಲ್ವಶಿಲೆ ಸುತ್ತುತಲಿನಲ್ಲ ಹರಿಪರಿ ಪೂರ್ಣ | ಎಲ್ಲೆಡೆಯಲೆಂಬಾಸೊಲ್ಲನಿವಳಿಗೆ ತೋರಿ | ಸಲ್ಲಿಸಿಹ ಹರಿಸೇವೆಬಲ್ಲವರ ಬಲ್ಲರೋ | ಘುಲ್ಲಕರಿಗಲ್ಲಾ 3 ಹರಿಗುರೂ ಸದ್ಭಕ್ತಿ | ಗುರು ಹಿರಿಯರ ಸೇವೆ ಕರುಣಿಸುತ ಕನ್ಯೆಯನು | ಪೊರೆಯುವುದು ಸತತಗಿರಿಜೆ ದರ್ಶನ ಫಲಕೆ | ಸರುವ ಮಂಗಳವಿತ್ತುನಿರುತ ಸಲಹೆಂದಿವಳ | ಪ್ರಾರ್ಥಿಸುವೆ ಹರಿಯೇ 4 ಮಧ್ವರಾಯರ ಮತದಿ | ಶುದ್ಧ ಬುಧಿಯನಿತ್ತುಮಧ್ವೇಶ ಹರಿಪಾದ | ಹೃದ್ಗುಹದಿಕಾಂಬಅಧ್ಯಾನಲ್ಲಿವಳ | ಬದ್ಧಳನೆ ಮಾಡಿ ಪೊರೆಮಧ್ವಾಂರಾತ್ಮ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಲಕುಮಿ ಸಾಮ್ರಾಜ್ಯ ಶರಧಿಗಮೃತಾಂಶು ನೇತ್ರ ಪ ಸೂತ್ರ ಅ.ಪ. ನಿತ್ಯ ಕಲ್ಯಾಣ ಸಾಗರನೆ ಶಶ್ವದೇಕ ಸಿಂಧು ಕೊಡು ಭಕ್ತಿಪಾಕ ಭಕ್ತವತ್ಸಲನೆ ಕೃಪಾಪೂರ್ಣಾವಲೋಕ ದುರಿತ ತಿಮಿರಾರ್ಕ 1 ನಿರುತ ಪರಿಪೂರ್ಣ ಸೌಲಭ್ಯ ಸುಗುಣವನಧಿ ನಿತ್ಯ ಸ್ವಾನಂದ ಪೂರ್ಣ ಮೋದಿ ಕರೆವ ಭಕ್ತರಾತುರಕೆ ಬರುವನವಸರದಿ ಗರೆವ ಸರ್ವಾರ್ಥ ಸಲಹಿ ಶರಣರನು ಛಲದಿ 2 ವಿಮಲ ಲಾವಣ್ಯ ಶೃಂಗಾರ ಸಿಂಧುಕಾಯ ಅಮಿತ ಉತ್ತಮ ಜಯೇಶವಿಠಲರಾಯ ಕಮಲಭವ ವಾಯು ರುದ್ರಾದಿ ದೇವ ಧÉ್ಯೀಯ ಅಮೃತ ಸೌಭಾಗ್ಯ ಸ್ವೀಯ 3
--------------
ಜಯೇಶವಿಠಲ
ಶೌರಿ ಪ ಕಾಣಿಸದೆ ಖತಿಗೊಳಿಸುವುದುಚಿತಲ್ಲ ಮೊರೆ ಕೇಳು ಅ.ಪ ಕಾಣುವುದು ಕೇಳುವುದು ಗಂಧ ರಸ ಸ್ಪರ್ಶಗಳು ನಾನಾ ಬಗೆ ವಿಷಯಗಳು ನೀನೆ ರಂಗ ಭಾನು ಕೋಟಿ ತೇಜ ಭಾವ ಭಕ್ತಿ ಸುಪ್ರೀಯ ನಾ ನಿನ್ನವರ ಪಾದರಜ ರಕ್ಷಿತನೊ ಸ್ವಾಮಿ 1 ಶ್ರೀ ರಮಣಿ ಆನಂದ ಅಂಬುಧಿಯೆ ಅಬುಜಭವ ಮೃಡ ಪಾದ ವನಜ ಆರು ನಾಲ್ಕು ತತ್ವ ಆದರ್ಶ ಪ್ರತಿಫಲಿತ ಆನಂದ ಚಿತ್ಪ್ರಚುರ ಅನುರೂಪನೆ ಪಾಹೀ 2 ಕಲ್ಯಾಣ ಗುಣವನಧಿ ಜಯೇಶವಿಠಲ ಕಲ್ಯಾಣ ಮಾಡೆನಗೆ ಕಾರುಣ್ಯಸಿಂಧು ಎಲ್ಲ ಗುಣತ್ರಯ ರೂಪ ನಿನ್ನದೆಂಬೊ ಜ್ಞಾನ ಎಲ್ಲ ಕಾಲದಿ ಕೊಟ್ಟು ಶಿಷ್ಟರಲಿ ಇಡು ಎನ್ನ 3
--------------
ಜಯೇಶವಿಠಲ
ಶೌರಿ ಪ ಸರ್ವಮಂಗಳಮಯನೆ ವಿಧಿತಾತ ಮುದವೀತೊ ಅ.ಪ. ಉದ್ಧವನ ಗುರುವರ್ಯ ನಿರ್ದೋಷ ಗುಣವನಧಿ ನಿದ್ದೆ ಮಾಡುವಗೊಲಿದು ಮುಕ್ತಿ ಇತ್ತೆ ಹದ್ದುಮೀರಿ ಭವದಿ ಬಿದ್ದು ಮೊರೆ ಇಡುತಿಹೆನೊ ಹೃದ್ಧಾಮದಲಿ ನಿನ್ನ ದರುಶನವ ನೀಡೆಯ್ಯ 1 ಮನದಲ್ಲಿ ಮಹಪೂಜೆಕೊಳ್ಳಯ್ಯ ಎನ್ನಿಂದ ಪ್ರಣೀತಪಾಲಕ ಕೃಷ್ಣಪೂರ್ಣ ಪುರುಷ ತೃಣಮೊದಲು ಬ್ರಹ್ಮಾಂಡ ಸರ್ವರಲಿ ಸ್ವಾತಂತ್ರ್ಯ ಅನಿಲಾತ್ಮ ಆನಂದ ಖಣಿ ಕರುಣ ಮಾಡಯ್ಯ 2 ಕೆಸರು ಕಲ್ಕಿದಜ್ಞಾನಕಳವಡುವುದೇ ನಿನ್ನ ಅಸಮ ಮಂಗಳ ಸುಗುಣ ಶ್ರುತಿ ವಿನುತನೆ ದಶಮತಿಯ ಮನದೈವ ನೀ ಕೂತು ಮನದಲ್ಲಿ ವಿಶದ ತಿಳಿಮತಿಯಿತ್ತು ವೈಭವವ ತೋರೆನಗೆ 3 ಜೀವಜಡರಲಿ ಪೊಕ್ಕಾಡುವೆ ಬಹುಲೀಲೆ ಭಾವಸೂತ್ರದಿ ನಮ್ಮ ಕಟ್ಟಿ ಕುಣಿಸಿ ಈ ವಿಧವ ಬಲ್ಲವರ ಮೇಲಾಗಿ ಪಾಲಿಸುವಿ ತಾವೀಶರೆಂಬುವರು ಮುಳುಗುವರು ದುಃಖದಲಿ 4 ದುಷ್ಟಜನ ಸಹವಾಸ ಅಷ್ಟತತ್ವಗಳಲ್ಲಿ ವೃಷ್ಣೀಶ ಬಿಡಿಸಯ್ಯ ಬಂಧ ಕಡಿದು ಇಷ್ಟಾನಿಷ್ಟ ಜೀವರಲಿ ನಿಂತು ನಟಿಸುವ ಗುಟ್ಟುತೋರಿ ಜಯೇಶವಿಠಲನೆ ಕೃಪೆಮಾಡು 5
--------------
ಜಯೇಶವಿಠಲ
ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ಪ ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ಅ.ಪ. `ಆ' ಎನಲು ಶಕ್ತರೇ ಅಜಭವಾದಿಗಳಿನ್ನು `ನೀ'ಯಾದರದಲ್ಲಿ ಚೇತನರು ಅವರು `ನಾ'ಯಾತರವನಯ್ಯಾ ನಿನ್ನ ಮಾಯವ ಗೆಲಲು ಆಯಾಸ ಮೀರಿದುದು ಶ್ರೀ ವರನೆ ದಯೆ ತೋರು 1 ನಿನ್ನ ಚಿತ್ತಕೆ ಬಂದುದೇ ಹಿತವೆಂಬ ಉನ್ನತ ಮತಿ ನೀಡು ಶರ್ವ ಬಿಂಬ ಭಿನ್ನ ಭಾವಗಳೊಲ್ಲೆ ಅನಂತಗುಣವನಧಿ ಮನದಲ್ಲಿ ನೀ ನಿಂದು ವಿಸ್ಮøತಿಯ ಪರಿಹರಿಸು 2 ತವರೂಪ ಧ್ಯಾನಲವ ಬಿಡದೆ ಪೊಂದಿರಲಿ ನವಭಕ್ತಿ ನಿನ್ನಲ್ಲಿ ಅಚ್ಛಿನ್ನವಾಗಿ ಪವಮಾನ ಪೂಜಿತ ಜಯೇಶವಿಠಲ ಭವ ಕಡಲ ದಾಟಿಸೊ ನಿನ್ನವನೆಂದು 3
--------------
ಜಯೇಶವಿಠಲ