ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯಾ ಪಾಲಿಸಮ ರೇಂದ್ರ ನಿನ್ನಡಿಗೆ ಶರಣೆಂಬೆ 1 327ನಂದಿವಾಹನ ವಿಮಲ ಮಂದಾಕಿನೀಧರನೆ ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ ಎನ್ನ ಮನ ಮಂದಿರದಿ ನೆಲೆಸಿ ಸುಖವೀಯೊ 2 328ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ ನ್ನತ್ತ ನೋಡಯ್ಯ ಶುಭಕಾಯ ಭಕ್ತರಪ ಮೃತ್ಯು ಪರಿಹರಿಸಿ ಸಲಹಯ್ಯ 3 329 ನೀಲಕಂಧರ ರುಂಡಮಾಲಿ ಮೃಗವರಪಾಣಿ ಶೈಲಜಾರಮಣ ಶಿವರೂಪಿ | ಶಿವರೂಪಿ ನಿನ್ನವರ ನಿತ್ಯ ಪರಮಾಪ್ತ 4 330ತ್ರಿಪುರಾರಿ ನಿತ್ಯವೆನ್ನಪರಾಧಗಳ ನೋಡಿ ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ ಕೃಪಣವತ್ಸಲನೆ ಕೃಪೆಯಿಂದ 5 331ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ ಸಂಚಿತಾಗಾಮಿ ಪ್ರಾರಬ್ಧ | ಪ್ರಾರಬ್ಧ ದಾಟಸು ವಿ ರಿಂಚಿಸಂಭವನೆ ಕೃತಯೋಗ 6 332 ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ ಅನುದಿನ | ಅನುದಿನದಿ ನಾ ನಿನ್ನ ಧೀನದವನಯ್ಯ ಪ್ರಮಥೇಶ 7 333 ಅಷ್ಟಮೂತ್ರ್ಯಾತ್ಮಕನೆ ವೃಷ್ಟಿವರ್ಯನ ಹೃದಯಾ ಧಿಷ್ಠಾನದಲ್ಲಿ ಇರದೋರು | ಇರದೋರು ನೀ ದಯಾ ದೃಷ್ಟಿಯಲಿ ನೋಡೊ ಮಹದೇವ 8 334 ಪಾರ್ವತಿರಮಣ ಶುಕ ದೂರ್ವಾಸ ರೂಪದಲ್ಲಿ ಉರ್ವಿಯೊಳಗುಳ್ಳ ಭಕುತರ | ಭಕುತರ ಸಲಹು ಸುರ ಸಾರ್ವಭೌಮತ್ವ ವೈದಿದೆ 9 335 ಭಾಗಿಥಿಧರನೆ ಭಾಗವತ ಜನರ ಹೃ ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ ನ್ನಾಗಿ ಕೊಡು ಎನಗೆ ಮರೆಯಾದೆ 10 336 ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನೆನ್ನ ಮನ ದೃಢವಾಗಿ ಇರಲಿ ಹರಿಯಲ್ಲಿ 11 337 ವ್ಯೋಮ ಕೇಶನೆ ತ್ರಿಗುಣನಾಮ ದೇವೋತ್ತಮ ಉ ವಿರುಪಾಕ್ಷ ಮಮ ಗುರು ಸ್ವಾಮಿ ಎಮಗೆ ದಯವಾಗೊ 12 338 ಅಷ್ಟ ಪ್ರಕೃತಿಗನೆ ಸರ್ವೇಷ್ಟ ದಾಯಕನೆ ಪರ ಮೇಷ್ಟಿ ಸಂಭವನೆ ಪಂಮಾಪ್ತ | ಪರಮಾಪ್ತ ಎನ್ನದಯ ದೃಷ್ಟಿಯಿಂದ ನೋಡಿ ಸಲಹಯ್ಯ 13 339ಪಂಚಾಸ್ಯ ದೈತ್ಯಕುಲ ವಂಚಕನೆ ಭಾವಿ ವಿ ರಿಂಚಿ ಶೇಷನಲಿ ಜನಿಸಿದೆ | ಜನಿಸಿದೆ ಲೋಕತ್ರಯದಿ ಸಂಚಾರ ಮಾಳ್ಪೆ ಸಲಹಯ್ಯ 14 340 ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ ಸಂತೈಸಿ ಇಂದ್ರಿಯವ ನಿಗ್ರಹಿಪ ಶಕ್ತಿ ಕರುಣೀಸೊ 15 341 ಲೋಚನತ್ರಯ ನಿನ್ನ ಯಾಚಿಸುವೆ ಸಂತತವು ಗುಣರೂಪ ಕ್ರಿಯೆಗಳಾ ಲೋಚನೆಯ ಕೊಟ್ಟು ಸಲಹಯ್ಯ16 342ಮಾತಂಗ ಷಣ್ಮುಖರ ತಾತ ಸಂತತ ಜಗ ನ್ನಾಥ ವಿಠ್ಠಲನ ಮಹಿಮೆಯ | ಮಹಿಮೆಯನು ತಿಳಿಸು ಪ್ರೀತಿಯಿಂದಲೆಮಗೆ ಅಮರೇಶ 17 343 ಭೂತನಾಥನ ಗುಣ ಪ್ರಭಾತ ಕಾಲದಲೆದ್ದು ಪ್ರೀತಿಪೂರ್ವಕದಿ ಪಠಿಸುವ | ಪಠಿಸುವರ ಜಗ ನ್ನಾಥವಿಠಲನು ಸಲಹುವ 18
--------------
ಜಗನ್ನಾಥದಾಸರು
ಏನೆಂದರು ಸರಿ ಬೀಳ್ವದು ನಮ್ಮ ಶ್ರೀನಿವಾಸನ ಮಹಿಮಾನುಸಂಧಾನದಿಂ ಪ. ಶಯ್ಯದಿಂದೇಳುತ ಶಾರೀರದಾಲಸ್ಯದಿಂ- ದಯ್ಯ ಅಪ್ಪ ಅಮ್ಮನೆಂಬುವರಾ- ಜೀಯನ ಗುಣನಾಮಕನುವಾಗಿ ತಿಳಿದರೆ ಕಯ್ಯ ಪಿಡಿದು ಕಾವ ಕರುಣಾಳು ರಾಜಗೆ 1 ಅಪತತ್ವದಲಿ ನಿಂತು ಅಪ್ಯಾಯನ ಮಾಳ್ಪ ತಪ್ಪನೆಂಬುದಕಿದು ಕಾರಣವು ಮುಪ್ಪುರಹರನಯ್ಯನು ಪೆತ್ತ ದೊರೆಯನು ಒಪ್ಪಲಾರದೆ ಅಮ್ಮ ಅಯ್ಯನೆಂಬುವ ನಾಮ 2 ಕುರಿಯೊ ಮರಿಯೊ ಎಂಬ ದಾತಗೆ ಭಿನ್ನ ಹ- ವರವುದು ಹರಿಗೆ ಮೂಜನವೆಲ್ಲವು ಕುರಿಯಂತೆ ವಶ್ಯವಾಗಿರುವುದು ಭವಬಂಧ ಹರಿದ ಜ್ಞಾನದ ಮುಳ್ಳಮುರಿಯೆಂಬ ಭಾವದಿಂ 3 ಮೂರಾರು ಪುರಾಣ ಮೂಲ ರಾಮಾಯಣ ಭಾರತ ಪಂಚರಾತ್ರಾದಿಗಳು ಸೇರಿ ಪೇಳುವುದೆಲ್ಲ ಸಿರಿಯರಸನ ನಾಮ ವಾರಿಧಿಯೊಳಗಿನ ತೆರೆಗಳಂದದಿ ತೋರ್ಪ 4 ನಾದ ಬಿಂದು ವರ್ಣದಾತನುದಾತ್ತ ಸ್ವ ರಾದಿ ಸಕಲ ಶಬ್ದ ವಾಚ್ಯ- ನಾದ ಶ್ರೀದೇವಿಯರಸ ವೆಂಕಟರಾಜನರಿವಂಥ ಹಾದಿಯ ತಿಳಿದರಗಾಧ ಮಹಿಮಾ ನಿನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ ಶ್ರೀ ರಮೇಶನೆ ನಾನಾ ಗುಣನಾಮ ಮಾಲೆ ಪ. ವಾರಿಜಾಂಬಕನೆ ಶ್ರೀ ಗುರುಗಳ ರಚಿಸುತಲಿ ಹಾರಹಾಕಿಹರೊ ನಿನಗೆ ಹರಿಯೆ ಅ.ಪ. ಮೋಹನವಿಠ್ಠಲನೆಂಬಾ ಒದ್ದು ತಾಪತ್ರಯವನು ತಿದ್ದಿ ತಿಳಿಸುತಲಿ ಜ್ಞಾನ ಕರ್ಮ ತಿದ್ದಿ ತಿಳಿಸಿದ ಗುರುಗಳು ಇವರು 1 ಇಂದಿರಾಪತಿ ರಂಗನಾಥ ರಘುರಾಮ ಇಂದಿರೇಶ ದಯಾಪೂರ್ಣ ಸೀತಾಪತೇ ವೇದೇಶ ಯಾದವೇಂದ್ರ ಸ್ವಾಮಿ 2 ಇಂದಿರಾರಮಣ ಜಯ ಗೋಪಾಲನೆ ವರದೇಶ ಪ್ರಾಣನಾಥಾ ಪದ್ಮನಾಭ ಶ್ರೀನಾಥ ಜಗದೀಶನೆ ವರದ ಮೋಹನದೇವಾ 3 ಶ್ರೀಕಾಂತ ಪುರುಷೋತ್ತಮ ಪರಮಾನಂದ ಶ್ರೀ ಸುರೇಂದ್ರ ಕರುಣಾಕರ ವೆಂಕಟ ದಯಾಮಯನೆ ಭವತಾರಕ ಹರಿಯೆ 4 ವಸುದೇವ ಪಾರ್ಥಸಾರಥಿಯೆ ಪ್ರಾಣಪ್ರಿಯ ಪರಿಪೂರ್ಣ ಮಧ್ವವಲ್ಲಭಮುಕ್ತಿ ದಾಯಕ ಸತ್ಯೇಶನೆ ಪರಮಪಾವನ ರಮೇಶ ಕರುಣಾನಿಧೆ ಪುಂಡರೀಕಾಕ್ಷ ಸ್ವಾಮಿ 5 ಕಲ್ಯಾಣಗುಣಪೂರ್ಣ ಚಂದ್ರಹಾಸವರದ ಮಾಯಾಪತಿ ಉಪೇಂದ್ರ ಚಕ್ರಪಾಣಿ ಮುಕ್ತೇಶ ಬದರಿನಾಥಾ ಜಯಪ್ರದ ನಿರ್ಜರೇಶ ಜಾನಕೀಪತಿ ವಿಶ್ವನಾಥಾ ಸ್ವಾಮಿ 6 ಭುವನೇಶ ಗಜರಾಜವರದ ಜನಾರ್ಧನ ಮಧ್ವನಾಥ ಆನಂದ ಅರವಿಂದಾಕ್ಷ ಪುಂಡರೀಕವರದ ಶ್ರೀ ಕೃಷ್ಣಸ್ವಾಮಿ 7 ಮಾಧವ ಕಮಲಾನಾಥ ಕಮಲನಾಭ ಸದಮಲಾನಂದ ವೈಕುಂಠವಾಸ ಪದ್ಮೇಶ ಗುರು ಮಧ್ವೇಶ ಇಂದಿರಾಪತಿ ರಮೇಶ ಶ್ರೀಶÀ 8 ನಿಗಮ ಸಿರಿರಮಣ ಕಮಲಾಕಾಂತನೆ ಸರವ ಪೋಣಿಸಿ ಹಾಕುತ ಪರಮ ಪ್ರಿಯ ಶ್ರೀ ಗುರುಗಳು ಉಳಿದ ನಾಮಾ ಪೊರೆಯೋ 9
--------------
ಅಂಬಾಬಾಯಿ
ಭೂತೇಶನುತ ವಿಠಲ | ಕಾಪಾಡೊ ಇವನಾ ಪ ಓತ ಪ್ರೋತನು ಆಗಿ | ದಾತನೀನಿರುವೇ ಅ.ಪ. ಪಾದ | ದಾಸ್ಯವನೆ ಕಾಂಕ್ಷಿಸುವವಾಲಿಭಂಜನ ರಾಮ | ಪಾಲಿಸೋ ಇವನಾ 1 ತೈಜಸನೆ ನೀನು ಗುರು | ರಾಜರೂಪಿಲಿ ತೋರಿನೈಜೋಪದೇಶವನು | ಪೊಂದುವುದು ಎನುತಾ |ಮಾಜದಲೆ ಪೇಳಿರಲು | ವಾಜಿವದನನೆ ನಿನ್ನಬ್ರಾಜಿಷ್ಣು ನಾಮದಲಿ | ಅಂಕನವ ಗೈದೇ 2 ದಾಸ ದಾಸರ ಗುಣಾ | ದಾಸನೆಂದೆನಿಸುತ್ತಕೇಶವನ ಗುಣನಾಮ | ಸೂಸಿಕೊಂಡಾಡಿ |ಲೇಸಾದ ಆನಂದ | ಭಾಸಿಸುತ್ತಲಿ ಗುಹಾ ವಾಸನನು ಕಾಂಬಂಥ | ಮಾರ್ಗದನು ಆಗೋ 3 ಮಧ್ವಮತ ತತ್ವಗಳು | ಬುದ್ಧಿಯಲ್ಲಿ ಸ್ಛುರಿಸುತ್ತಶುದ್ಧಭಾವದಿ ಮನನ | ಸಿದ್ಧಿಸುತಲಿವಗೇ |ಅದ್ವೈತ ತ್ರಯಜ್ಞಾನ | ಶ್ರದ್ಧೆ ಭಕ್ತಿಯ ಉದಿಸೆಮಧ್ವರಮಣನೆ ಹರಿಯೆ | ಉದ್ಧಾರ ಮಾಡೋ4 ಸರ್ವಜ್ಞಾ ಸರ್ವೇಶ | ಸರ್ವಾಂತರಾತ್ಮಕನೆದರ್ಪಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೇ |ದುರ್ವಿ ಭಾವ್ಯನೆ ಗುರು | ಗೋವಿಂದ ವಿಠ್ಠಲನೆಅವ್ಯಾಜ ಕರುಣನಿಧಿ | ಭಿನ್ನಪವ ಸಲಿಸೋ5
--------------
ಗುರುಗೋವಿಂದವಿಠಲರು
ಮನುಷ್ಯನಾದ ಫಲವೇನುಶ್ರೀನಿವಾಸನ ಕಂಡು ಸುಖಿಯಾಗದನಕ ಪ.ಭಾನುಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿಸ್ನಾನಸಂಧ್ಯಾನಜಪಗಳನೆ ಮಾಡಿಸಾನುರಾಗದಿ ಶ್ರೀವರಹಗೆ ನಮಿಸಿತಾನಖಿಳ ಪುಣ್ಯವನು ಸೂರೆಗೊಳದನಕ 1ಹಸ್ತದಲಿ ವೈಕುಂಠವೆಂದು ತೋರುವ ವಿಮಾನಸ್ಥಾಚ್ಯುತನ ಕರ್ಮಗುಣನಾಮವಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾವಿಸ್ತರದಕೈವಲ್ಯಪಡೆಯದನಕ2ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನುಅಲಸದೆ ಸೇವಿಸಿ ಕೃತಾರ್ಥನಾಗಿಹಲವು ದುರಿತಾರಿ ಪ್ರಸನ್ವೆಂಕಟಗಿರಿಯನಿಲಯನೆ ಗತಿಯೆಂದು ಭಜಿಸದನಕ 3
--------------
ಪ್ರಸನ್ನವೆಂಕಟದಾಸರು