ಒಟ್ಟು 6 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಡಿಗುಡಿಯನು ಸೇದಿ ನೋಡೋ ನಿನ್ನ ಒಡಲೋಳಗಿರುವ ರೋಗಗಳನೀಗಾಡೋ ಪ ಬುರುಡೆ ಎಂಬುದು ಈ ಶರೀರಪಡೆ ದಿರುವ ಸುಕೃತವೆ ಕೊಳವೆಯಾಕಾರಾ ಹರಿನಾರಾಯಣನೆಂಬ ನೀರಾ ಇದ ನರಿತು ನೀ ಸೇದಿಕೊ ಬಲು ಮೋಜುಗಾರಾ ಗುಡುಗುಡಿ1 ಮನವೆಂಬ ಸಂಚಿಯ ಬಚ್ಚಿ ದಿನ ದಿನದಿ ಪತಾಕವೆಂಬ ಭಂಗಿಯ ಕೊಚ್ಚಿ ತನುವಿನ ಚಿಲುಮೆಯೊಳ್ಬೆಚ್ಚಿ ಗುರು ಧ್ಯಾನದ ಕೆಂಡದುರಿಯ ತಂದ್ಹಚ್ಚಿ ಗುಡುಗುಡಿ2 ಸದ್ಯದಿ ಅಮಲೇರುವುದು ದಾರ್ರಿದ್ರ್ಯ ದುಃಖವ ಸುಟ್ಟು ಹೊಗೆ ಏಳುವುದು ತೋರುವುದು ಗುರು ಬುದ್ಧಿಗೆ ಮಾರ್ಗ ಸಿದ್ಧ ವಿಮಲಾನಂದ ಪದಕೆ ಕೊಡುವುದು ಗುಡುಗುಡಿ 3
--------------
ಭಟಕಳ ಅಪ್ಪಯ್ಯ
ಗುಡುಗುಡಿ ಭಾರಿ ಗುಡುಗುಡಿಗುಡುಗುಡಿ ಪಡೆಯಿರಿ ಗುರುಪುತ್ರರಾದವರು ಪ ಕಾಯ ಮಾಡಿಭಾಸುರ ಭಕ್ತಿ ಎಂದೆಂಬ ನೀರನೆ ಹೊಯ್ದುಸುಷುಮ್ನವೆಂಬ ಸೂಲಂಗಿಯನೆ ಹಾಕಿ 1 ತ್ರಿವಿಧ ಮೂಲೆಯ ಚೊಂಗೆಭೂತಲದ ಹಮ್ಮೆಂಬ ತೊಪ್ಪಲುಸಾಕಾರ ಗುರುವೆಂಬ ಬೆಂಕಿಯನೆ ಹಾಕಿಏಕಚಿತ್ತವೆಂಬ ಮುಚ್ಚಳವನೆ ಮುಚ್ಚಿ 2 ಸೋಹಂ ಎಂದೆಂಬ ಕೊಳವೆಯನೆ ಹಚ್ಚಿಬಹ ಪೂರಕ ಸೂರಿಯನೆ ಸೇದುತಆಹ ರೇಚಕವೆಂಬ ಹೊಗೆಯನೆ ಬಿಡುತಮಹಾ ಕುಂಭಕವೆಂಬ ಉಸುರನೆ ಹಿಡಿಯುತ 3 ಘುಡು ಘುಡು ಎಂದೆಂಬ ಮೇಘದ ನಾದವನು ನುಡಿಸೆಸುಡು ಮಾಯೆಯೆಂದು ಥೂ ಎಂದು ಉಗುಳುತಬಿಡಬಾರದು ಇದು ನಿತ್ಯವೆಂದೆನುತಅಡಿಗಡಿಗೆ ಊದುತ್ತ ಉರಿಯ ಎಬ್ಬಿಸುತ 4 ಹಾರಿತು ಬ್ರಹ್ಮಾನಂದವೆಂದೆಂಬ ಹರಳುಏರಿತು ಪೂರ್ಣಾನಂದದ ಲಹರಿಜಾರಿತು ತನುಮನವೆಲ್ಲ ಮರೆತು ಚಿತ್ತಸೇರಿತು ಚಿದಾನಂದನೊಳಗೆ ಲಯಿಸಿ ಕೂಡಿ5
--------------
ಚಿದಾನಂದ ಅವಧೂತರು
ಆರೆನ್ನ ಉಳುಹುವರೈ ರಂಗಘೋರಾರಣ್ಯ ಭವದಿ ಸಿಕ್ಕಿದೆ ರಂಗ ಪ.ಎಂಟು ಕಾಡಾನೆ ಎಂಟು ಕಡೆಯಲಿ ನಿಂತಿವೆಗಂಟನಿಕ್ಕಿವೆ ಮೂರು ದಳ್ಳುರಿಯಸುಂಟರಗಾಳ್ಯೆಬ್ಬರಿಸಲು ಗಿಡಗಂಟಿಲಿ ಬಿದ್ದೆ ನೀನಲ್ಲದೆನ್ನ 1ಹುಲಿಯೊಂದು ಗುಡುಗುಡಿಸುತಿದೆ ಭಯಂಕರಬಲು ತೋಳೆರಡು ಕೆಕ್ಕರಿಸುತಿವೆಸಲುಗೆಯ ಕೋತಿಯೊಂದಣಕಾಡುತಲಿದೆಮೇಲೆ ಕರಡಿಯು ಹತ್ತೆಳವುತಿದೆ 2ಕಾಳುರಗನ ಕಟ್ಟು ಮೈತುಂಬ ನನ್ನನಾಲಿಗೇಳದು ನಿನ್ನ ಕರೆಯಲಿಕೆ ನಿನ್ನಾಳಟ್ಟಿ ಕರೆಸಿಕೊಳ್ಳೆಲೆ ತಂದೆ ನಾಗೋಳಿಟ್ಟೆ ಪ್ರಸನ್ನವೆಂಕಟ ಬಂಧು 3
--------------
ಪ್ರಸನ್ನವೆಂಕಟದಾಸರು