ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣವೇಕೆ ಬಾರದಯ್ಯಾ ಕರಿವರದನೆ ಪ ಶರಣ ರಕ್ಷಕನೆಂದು ನಿನ್ನ ಮೊರೆಯ ಹೊಕ್ಕೆನೊ ಸರಸಿಜಾಕ್ಷ ಮರಣ ಕಾಲದಿ ಮಗನ ಕರೆದ ಪುರುಷ ಪುಣ್ಯ ಶರಧಿಯೇನೊ ಅ.ಪ. ತುತಿಸಸಲಿಲ್ಲವೆಂದು ಎನ್ನ ಹಿತವಗೈಯದೆ ಜರಿಪರೇನೊ ತುತಿಸಲಾಪವೇ ಶ್ರುತಿಗಳನ್ನು ಮಿತಿಗೆ ಸಿಲ್ಕದ ನಿನ್ನ ಮಹಿಮೆ 1 ಏನು ಸಾಧನವವÀ ಮಾಡಲಿಲ್ಲವೆಂದು ಕೈಬಿಡುವೆಯೇನೊ ನೀನು ದಯಮಾಡಿದಲ್ಲದೆ ಏನು ಸಾಧನ ಮಾಡಲಾಪೆನೊ 2 ಪಾಪಪುಣ್ಯ ಕರ್ಮಗಳಿಗೆ ನೀನೆ ಪ್ರೇರಕನಲ್ಲವೇನೊ ಶ್ರೀ ಪರಾತ್ಪರ ನೀ ಸ್ವತಂತ್ರ ನಾ ಪರಾಧೀನನಲ್ಲವೆ 3 ಪುಣ್ಯಗೈದವರಲಿ ಕರುಣವನು ಗೈವುದೇನು ಮಹಿಮೆ ಘನ್ನ ಪಾಪಿಗಳಲಿ ನೀ ಪ್ರಸನ್ನನಾಗಲು ಖ್ಯಾತಿಯಲ್ಲವೆ 4 ಪತಿತಪಾವನ ದೀನರಕ್ಷಕ ಶ್ರಿತ ಜನಮಂದಾರನೆಂಬ ವಿತತ ಬಿರುದು ಬರಿದೆ ಪೇಳೋ ಗತಿ ಪ್ರದಾಯಕನಲ್ಲವೇನೊ 5 ದುರಿತ ರಾಶಿ ನೋಡಿ ಬೆದರಿ ನಿಂತೆಯೇನೊ ನೀನು ದುರಿತ ದೂರನಲ್ಲವೇ ನಿನ್ನ ಸ್ಮರಣೆ ನೋಡದ ದುರಿತವಿಹುದಿ 6 ತರಳತನದ ಸಲಿಗೆಯಿಂದ ಪರಿಪರಿಯಲ್ಲಿ ನುಡಿದೆನಯ್ಯಾ ಪರಮ ತತ್ವವರಿಯೆ ನಾನು ಪೊರೆಯೊ ಎನ್ನ ಕರಿಗೀರೀಶ 7
--------------
ವರಾವಾಣಿರಾಮರಾಯದಾಸರು
ಪಾಪಿಯೆಂದೆನಲು ನಾ ತಗ್ಗೆ ಪುಣ್ಯ ರೂಪಿಯೆಂದೆನಲು ನಾ ಹಿಗ್ಗೆ ವ್ಯಾಪಿಸಿ ನೀ ಎನ್ನ ಕುಣಿಸಿದ ಮೇಲೆ ನಿ ಪರಿ ಜನರೆನ್ನ ಪ ನಡೆಸಿದಂತೆ ನಾ ನಡೆವೆ ಉಡಿಸಿದಂತೆ ನಾನುಡುವೆ ನೀ ತೊಡಿಸಿದಂತೆ ನಾ ತೊಡುವೆ ಎ ನ್ನೊಡೆಯ ಸೂತ್ರಧಾರ ನೀನೆಂದರಿಯದೆ ಪೊಡವಿ ಜನರು ಬಾಯಿ ಬಡಿಕ ತನದೊಳೆನ್ನ 1 ಬಿಂಬಕ್ಕೆ ಸ್ವತಂತ್ರವೇನು ತುತ್ತು ಗೊಂಬಾತ ಉಂಬಾತ ನೀನು ಗೊಂಬೆಯಂತಿರಲದಕೇನು ಬರಿಯ ಹಂಬಲಿಪರು ಬರಿ ಕುಂಭಿನಿ ಜನರೆನ್ನ 2 ಭಾಗ್ಯವುಂಟೆಂದು ನಾ ಮೆರೆಯೆ ವೈ ರಾಗ್ಯವುಂಟೆಂದು ನಾ ಜರಿಯೆ ಯೋಗಿಗಳಿಗೆ ನಾ ಸರಿಯೇ ಯಾ ವಾಗಲು ನಡಿಸಿದ ಪರಿಯೆ ಈಗ ಕಾಯದ ಬರಿಯ ಡಂಬವ ಕಂಡು ಭಾಗ್ಯವಂತನೆಂದು ಜನರು ಕೊಂಡಾಡಲು 3 ಬರಿಯ ಸುಖವ ನಾ ತೊಟ್ಟೆ ಸರ್ವ ಸಿರಿಯ ಹೆಡತಲೆಯೊಳಿಟ್ಟೆ ಅರಿತರಿತು ಮಾಯದ ಲೊಟ್ಟೆ ಕಂಡು ಬೆರಗಾಗಿ ನಂಬಿ ನಾ ಕೆಟ್ಟೆ ಗುರು ವಿಮಲಾನಂದವರ ಮಾಂಗೀರೀಶನು ಇರಿಸಿದ್ಹಾಗೆ ನಾನಿರಬೇಕಲ್ಲದೆ4
--------------
ಭಟಕಳ ಅಪ್ಪಯ್ಯ
ಶೇಷ ಗೀರೀಶ ವಿಠಲ | ಪೋಷಿಸೊ ಇವಳಾ ಪ ಕಾಸು ವೀಸಕ್ಕೆ ಮನ | ಕ್ಲೇಶಗೊಳಿಸದಂತೆ ಅ.ಪ. ಪಥ ಮಾರ್ಗಕ್ಕೆ | ಸದ್ಗುರು ಕಟಾಕ್ಷವೆಉತ್ತಮೋತ್ತಮ ಹಾದಿ | ಎಂದು ಪೇಳಿದರೂ 1 ಹರಿಗುರೂ ಸದ್ಭಕ್ತಿ | ತರತಮ ಜ್ಞಾನವನುಕರುಣಿಸೀ ಕಾಪಾಡೊ | ಕರಿವರದ ಹರಿಯೇಕರುಣಾಳು ನಿನ್ಹೊರತು | ಆರಿಯೆ ನಾ ಅನ್ಯರನುಮರುತಾಂತರಾತ್ಮಕನೆ | ಆನಂದ ನಿಲಯಾ2 ಎರಡು ಮೂರರಿಗಳನು | ಪರಿಹರಿಸಿ ವೈರಾಗ್ಯವರಜ್ಞಾನ ಸಂಪದವ | ಕರುಣಿಸುತ ಹರಿಯೇಕರಪಿಡಿದು ಉದ್ಧರಿಸೊ | ಶರಣ ಜನ ಕಾರುಣ್ಯಮರುತಾಂತರಾತ್ಮ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು