ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಹೊನ್ನು ಹೂವುಗಳ ತಾರತಮ್ಯ ಪ ಇದು ಬಾಹ್ಯ ಅದು ಅಂತರಂಗಿಗೆ ರಮ್ಯ ಅ.ಪ ಹೊನ್ನಿನಿಂದಾಗುವುದು ಹೂವಿನಿಂದಾಗುವುದು ಹೊನ್ನು ಹೂವೆರಡಯ್ಯ ಬಣ್ಣ ಒಂದೇ ಹೊನ್ನು ಹೂವೆರಡಕ್ಕು ಬಣ್ಣ ಒಂದಾಗವೋ ನಿನ್ನ ಕೃಪೆಯೆಂಬ ರೇಕುಗಳಾಗಬೇಕೋ 1 ಹೊನ್ನು ಭೂಲೋಕಕ್ಕೆ ಹೂವು ಪರಲೋಕಕ್ಕೆ ಹೊನ್ನಿನಾ ಹೂವುಗಳು ಇಹಪರಕೆ ದಾನ ಹೊನ್ನುಳ್ಳವರಿಗೆಲ್ಲ ಹೂ ಹೊನ್ನುವಿಲ್ಲ ತಾನಿಲ್ಲ ಹೊನ್ನ ಹೊರುವುದಸಾಧ್ಯ 2 ಹೊನ್ನ ಕಾವುದಸಾಧ್ಯ | ಹೊನ್ನುಳ್ಳ ನರರಿಗೆ [ಮ] ಗಳಿಲ್ಲ ಹೊನ್ನುಳ್ಳ ಮನುಜ ಪಾತಕಗಳನು ಕಲಿಯುವ ಹೊನ್ನಿಲ್ಲದಾತರಿಗೆ ಹೂವೊಂದು ದೊರಕಿದೊಡೆ ಅನ್ನ ನಿದ್ರಾ ಪಾನ ಸೌಖ್ಯಂಗಳುಂಟಯ್ಯ 3 [ಹೊನ್ನುಳ್ಳವಸದಾ ಹೊನ್ನಿ ನೊಡನೆಕಲ್ಳ್ವೆ] ಹೊನ್ನಿಲ್ಲದಾತ ಶ್ರೀರಾಮಕೃಷ್ಣರ ಕಲೆವ ಹೊನ್ನಿಂದ ಬೆಣ್ಣೆತಾಂ ಸುಣ್ಣವೆನಿಪುದು ಜಗದಿ ಹೊನ್ನಿಲ್ಲದಾತಂಗೆ ಸುಣ್ಣವೇ ಬೆಣ್ಣೆ 4 ಹೊನ್ನಕೇಳನು ನಮ್ಮ ಮಾಂಗಿರಿಪುರವಾಸ ಹೊನ್ನಿಂಗೆ ಬದಲು ಭಕ್ತಿಯಹೂವ ಕೇಳ್ವುದು ಹೊನ್ನ ದಾನವಮಾಡಿ ಹೂವ ಹರಿಗರ್ಪಿಸಿರಿ ಇನ್ನಾವ ವರಗಳನ್ನು ಬೇಡ ಬೇಡಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡೆ ಕೇಶವರಾಯನ ನಂಮಾ ಪುಂಡರೀಕಾಕ್ಷನನ್ನಾ ಪ ನೀರಜಾಸನ ಪಿತನಾ ನಂಮಾ ಶ್ರೀ ರಂಗ ಶ್ರೀಹರಿಯಾ ಮಾರನ ಪಡೆದವನಾ ನಂಮಾ ಶೂರ ವಿಶ್ವಂಭರನಾ 1 ಕಾಮಿತ ಫಲದಾತನಾ ಭಕ್ತರ ಪ್ರೇಮದಿ ಪೊರೆವವನಾ ಭೀಮ ಪರಾಕ್ರಮನಾ ತುಲಸೀ ಧಾಮ ವಿಭೂಷಣನಾ 2 ಶರಣರ ಸಲಹುವನಾ ದಾಸರ ಮರುಸವತರಿವವನಾ ಗಿರಿಪುರ ಮಾಧವನಾ ದೂರ್ವಾ ಪುರದ ಶ್ರೀ ಕೇಶವನಾ 3
--------------
ಕರ್ಕಿ ಕೇಶವದಾಸ
ಗುರುವೇ ನೀ ಕರುಣಿಸದಿರಲಿನ್ಯಾರು ಕರುಣಿಪರೋ ಪ ಕರಿಗಿರಿಪುರ ತಂದೆ ಮುದ್ದು ಮೋಹನ್ನ ಅ.ಪ. ಮೊರೆಹೊಕ್ಕ ಜನರ ಕೈ ಬಿಡುವರೇನೋಚರಣ ಯುಗ್ಮಕೆ ನಿನ್ನ ನಮಿಸುವೆನೋ |ಭಾರ ವಹಿಸಿ ಬೇಗ ಸಲಹಬೇಕೋ |ಜರೆಯು ನುಂಗುವ ಮುನ್ನ ಪೊರೆಯ ಬೇಕೋ 1 ಭವ ರೋಗವ ಕಳೆಯೋಉನ್ನತ ಪದವಿಗೇರುವ ದಾರಿ ತೋರೋ |ಘನ್ನ ಮಹಿಮ ನಿನ್ನ ಹೊರತು ಮತ್ಯಾರೋಎನ್ನ ಅಂಕಿತ ನಾಮ ಹರಿಯನ್ನ ತೋರೋ 2 ಹಂಬಲ ಕೊಡು ಎನಗೆ ಹರಿಪಾದದಲ್ಲೀನಂಬಿ ತುತಿಪೆನಯ್ಯ ತವ ಪಾದದಲ್ಲೀ |ಬಿಂಬ ಗುರು ಗೋವಿಂದ ವಿಠ್ಠಲನಲ್ಲಿಹಂಬಲ ಸ್ಥಿರವಾಗಿ ನಿಲಿಸೋ ನೀನಲ್ಲೀ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಯೇ ನೀನೇ ಗತಿ ಕೇಶವನೇ ಹರಿಯೇ ನೀನೇ ಗತಿ ಪ ಸುರನರ ವಂದ್ಯನೆ ಪರಮ ಪಾವನನೇ ಗಿರಿಪುರವಾಸನೇ ವಸುಮತಿ ಪತಿಯೇ 1 ಅಂಬುಜಲೋಚನ ವಸುದೇವ ಸುತನೇ ತುಂಬೂರ ನಾರದ ಗಾನ ಸೇವಿತನೇ 2 ವಾಸುಕಿಶಯನನೇ ಚನ್ನ ಕೇಶವನೇ 3
--------------
ಕರ್ಕಿ ಕೇಶವದಾಸ