ಒಟ್ಟು 28 ಕಡೆಗಳಲ್ಲಿ , 9 ದಾಸರು , 28 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಲಲಾಮ | ಶ್ರೀನಿವಾಸ | ಪಾಲಯಾ ಶುಮಾಂ ಹರೇ ನೀಲಮೇಘ ಶ್ಯಾಮ ಸುಂದರ | ಬಾಲ ಭಾಸ್ಕರಾ | ಮುರಾರೆ ಪ ಭಕ್ತ ಜನಾನಂದದಾತ | ಅಮರಕ್ಷೋಣಿ ಸಂಸೇವಿತ ಶಕ್ತ ಸರ್ವಲೋಕ ಖ್ಯಾತ | ವ್ಯಕ್ತರತ್ನ ಶೋಭಿತ ಯುಕ್ತಿ ಶಕ್ತಿ ಸಂಭೂಷಿತ | ವ್ಯಕ್ತ ನಿಗಮ ಮಾನವ ಸಂಪೂಜಿತ | ಸೂಕ್ತ ರೂಪದ ಮಾಂಗಿರಿನಾಥ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಹೆಬ್ಬುರಿ ಶ್ರೀ ಅನಂತಪದ್ಮನಾಭ) ಹೆಬ್ಬುರಿ ಪದ್ಮನಾಭಾ ನಂಬಿದೆನು ಪದಾಬ್ಜವ ಪೂರ್ವಶೋಭಾ ಕೊಬ್ಬಿದ ಶತ್ರು ಪುಂಜಗಳನ್ನು ದೂರದಿ ದಬ್ಬಿ ದಯಾರಸ ಉಬ್ಬಿಪಾಲಿಸು ದೇವಾ ಪ. ಯೋಗಿ ಹೃನ್ಮಂಡಲದಿ ನಿತ್ತಂದದಿ ಸಾಗಿ ಬಂದಿರುವಿಯಲ್ಲಿ ನಾಗಶಯನ ನಿನ್ನ ನೆಲೆಯರಿಯದ ತಪ್ಪ ನೀ ಪಾಲಿಪುದೆಂದು ಬಾಗಿ ಬೇಡುವೆ ನಿಂದು 1 ಈ ಕ್ಷಮೆ ಮೇಲಿಲ್ಲದಾ ಲೋಕೋತ್ತರ- ದಾಶ್ಚರ್ಯ ತೋರುವುದು ಪಕ್ಷಿಧ್ವಜ ನಿನ್ನ ಪಾದಪದ್ಮಗಳಲ್ಲಿ ನಕ್ಷತ್ರ ಮಾಲೆಗಳುರುಳುವದೇನಿದು 2 ಪಾಂಡವ ಸಾರಥಿಯೆ ನಿನ್ನಯ ಮೂರ್ತಿ ಕಂಡೆನು ಶ್ರೀಪತಿಯೆ ಕೌಂಡಿಣ್ಯ ಮುನಿಯನು ಕಾಪಾಡಿದಖಿಳ ಬ್ರ- ಹ್ಮಾಂಡ ನಾಯಕ ನಿನ್ನ ದಾಸ್ಯವ ದಯಮಾಡು 3 ಹೆಬ್ಬುಲಿಯಂತಿರುವ ಹೂಣ ಭೂಪ ನಬ್ಬರವಡಗಿಸುತ ಭಾರ ನಿನ್ನದಯ್ಯ ವಾರಿಧಿ ಕೃಷ್ಣ 4 ನೀನೆ ಸದ್ಗತಿಯೆಂಬರ ಕಾವುದಕನು- ಮಾನವ್ಯಾತಕೊ ಭೂವರ ದೀನ ಬಂಧು ಶೇಷಗಿರಿನಾಥ ದಯದಿಂದ ಮಾನಸ ಫಲವ ಪೂರಣಗೈಸು ಗೋವಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಒಪ್ಪಿಸಿದೆ ಒರೆದು ದೂರ ಮುಂದೆನ್ನ ತಪ್ಪನೆಣಿಸದಿರು ಧೀರ ಅಪ್ಪಳಿಸು ಕಡು ಮೂರ್ಖರ ನಿನಗೆಂದು ತಪ್ಪುವುದೆ ಭಕ್ತಭಾರ ಪ. ದುರ್ಗಾಧಿಪತಿ ಲಾಲಿಸು ಮನಸಿಜನ ಮಾರ್ಗಣಕೆ ಸಿಲುಕಿ ಮನಸು ನಿರ್ಗಮಿಸದೊಳಸರಿದು ಮುಳುಗಿ ಸ- ನ್ಮಾರ್ಗಗಾಣದೆ ಕುಂದಿತು 1 ಪಂಚಾಂಗ ಪಲುಗುತಿರಲು ಮನೆಯ ಮ್ಯಾ- ಲ್ಹಂಚುಗಳಸ್ಥಿರವಾಗಲು ಚಂಚಲದಿ ಮನ ಕೆದರಲೂ ತದಧೀನ ಪಂಚಕರಣವು ಕೆಡುವವು 2 ಹೀಗಾದ ಬಳಿಕ ನಿನ್ನ ಸೇವೆ ಚೆ- ನ್ನಾಗುವದ ಕಾಣೆ ಮುನ್ನ ಶ್ರೀ ಗುರುವೆ ತ್ವರೆಯೊಳೆನನ ಮನವ ಪದ ರಾಗಿಯಾಗಿಸು ರನ್ನ 3 ಮೂರು ಋಣಬಾಧೆಯನು ಸಹಿಸುವದ- ಕಾರಿಂದ ಶಕ್ಯವಿನ್ನು ತೋರು ತ್ವಕ್ಕರುಣವನ್ನು ದಾಸನ್ನ ದೂರ ಬಿಡಲ್ಯಾತಕಿನ್ನು 4 ಸಂದಣಿಸಿಕೊಂಡು ಬರುವ ಸರ್ವ ಪ್ರತಿ ಬಂಧಕಗಳೆಲ್ಲ ತರಿವ ಕರವ ಶಿರದಿ ಭುಜ- ಗೇಂದ್ರ ಗಿರಿನಾಥ ದೇವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಮೃತವ ಸಿರದಿ ಸುರಿಯೊ ವರದ ಧನ್ವಂತರಿಯೆ ಚರಣಯುಗಳ ಕಮಲವನ್ನು ಕರುಣಿಸೆನಗೆ ದೊರೆಯೆ ಪ. ಶ್ರವಣ ನಯನ ಚಿತ್ತ ಜಿಹ್ವೆಗನುಕೂಲವಾಗಿರುವ ಲೀಲಾ ಪ್ರವರ ಕಾಂತಿ ಸ್ಮರಣ ನಾಮಗಳನು ಪಾಲಿಸಿ ಭವಜನೀತ ಭ್ರಮಣ ನಿಲಿಸಿ ಕುವರನಂತೆ ರಕ್ಷಿಸೆನ್ನ ಕವಿಭಿರೀಡ್ಯ ಕಂಜಜಾತಶಿವರ ಸೌಖ್ಯಗೊಳಿಸದವನೆ 1 ಕಲಿಕೃತ ಕಲ್ಮಶಗಳಿಂದ ಬಳಲುವಂಥ ಬಾಧೆಯನ್ನು ನಿಲಿಸಿಕೊಳ್ಳಲು ಅನ್ಯಮಾರ್ಗಂಗಳನು ಕಾಣೆನು ನಳಿನನಾಭ ನಿನ್ನ ಪಾದಗಳನೆ ನಂಬಿಕೊಂಡಿರುವೆನು ಬಲಿಯ ಕಾಯ್ವ ಭೂಮಿಜೇಶ ಘಳಿರನೆ ಬಂದೊದಗಿ ಬೇಗ 2 ನಿಖಿಳ ಭೋಗಗಳನನುಭವಿಸುತ ಶ್ರೀಗುರು ಮಧ್ವಾಂತರಾತ್ಮ ನಾಗಗಿರಿನಾಥ ರಾಗ ರೋಗ ದೋಷಗಳನು ನೀಗಿ ನಿನ್ನ ನಂಬಿ ಸ್ತುತಿಪ ಭಾಗವತರ ಭಕ್ತನೆನಿಪ ಭಾಗ್ಯವಿರಿಸೋ ಭೀಮವರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋಕುಲ ಆನಂದ ಲೀಲಾ | ಘನ ಸುಂದರ ರುಕ್ಮಿಣಿಲೋಲ ಶ್ರೀಕರ ಶುಭದಾಯಕ ವರ | ಗೋಪಾಲ ಬಾಲ ಪ ಮಣಿರಂಜಿತ ಭೋಗರಾಗವಿಮಲ ಶೃಂಗಾರಶೀಲ ಸುರಪಾಲ ಸಂಸೇವ್ಯ ಗಾನಲೋಲ ಅ.ಪ ಪದ್ಮಲೋಚನ ಪರಿವೃತ ಶರಣವತ್ಸಲ ಸರ್ವಜ್ಞ ಸುಭಾಷಿತ ಸದ್ಭಾವ ವಿನಯಾದಿ ಭೂಷಿತ ಚಿತ್ರ ವಿಚಿತ್ರ ಕರ್ಷಿತ ಸೂತ್ರಾ ಮನಸಿಜ ಗಾತ್ರಾ | ಸುವಿನೀತ ಗೋಪೀನಂದನ 1 ಮಣಿಪೀಠ ಮಂಡಿತಾ | ಕಿರೀಟ ಮಣಿಮಯ ರಾರಾಜಿತ | ಗೋಪಿಕಾನತ ಪಾಂಡವಪಕ್ಷ ದನುಜವಿಪಕ್ಷ |ಕಮಲದಳಾಕ್ಷ ದಾನವಶಿಕ್ಷ ಶ್ರೀವನಮಾಲಿಕಾವಕ್ಷ | ಮಾಂಗಿರಿನಾಥಾ ದೀನರಕ್ಷ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಯವಾಗು ದೀನ ಬಂಧು ನಿಜ ಭಕ್ತ ಭಯ ಹರ ಸ್ಮಯ ಮುಖೇಂದು ಸಿಂಧು ನಿನ್ನಡಿಯ ಬಯಸುವೆನು ಭಕ್ತನೆಂದು ಪ. ಶ್ರೀ ಭೂಮಿಯರಸ ನೀನು ದಯವಾಗೆ ಭಾಗವತರುದಯವಹುದು ಯೋಗ ಭೋಗಗಳೆಂಬುದು ಮಿತಿರಹಿತ- ವಾಗಿ ತಾನೇರಿ ಬಹುದು 1 ತಾಪಾಗ್ನಿ ಶಮನಕಾರಿಯೆ ನಿ:ಶೇಷ ಭೂಪಾಲ ಮೌಳಿಸಿರಿಯೆ ಶ್ರೀಪತಿಯೆ ನಿನ್ನ ಮರೆಯೆ ಎನ್ನಲ್ಲಿ ಕೋಪಿಸದೆ ಸಲಹು ದೊರೆಯೆ 2 ಪೂರ್ವ ಗಿರಿನಾಥ ನಿನ್ನ ಸಂಸ್ಮರಣೆ ಸರ್ವ ದುರಿತೌಘವನ್ನ ಪರ್ವತ ಶೃಂಗವನ್ನು ನಿಶಿತ ಶತ- ಪರ್ವದೊಲ್ ತರಿವರನ್ನ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ ನಿನ್ನ ಯೌವನಭಂಗದ ಭೀತಿಯ ಕಂಡು ವಿಘ್ನೇಶನನು ಪುಟ್ಟಿಸಿ ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ ಕೃತಕೃತ್ಯನಾದ ನಿನ್ನರಸ ಕಾಣಮ್ಮ 1 ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು ನೀನು ಅಂಜಲಿಕಾಸ್ತ್ರವನು ಪ್ರೇಮದಿ ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್ ಪಾರ್ಥಸೂತನ ದಯವೆಷ್ಟೆಂಬೆ 2 ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ ವಿಷವ ಜೀರ್ಣಿಸಿಕೊಂಡನು ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3
--------------
ವಿಶ್ವೇಂದ್ರತೀರ್ಥ
ನಿರುಪಮ ಚರಿತಾ ಮಾಂಗಿರಿನಾಥಾ ಈಪ್ಸಿತ ವರದಾತಾ ಪ ಸರಸಿಜ ಸಂಭವ ನುತ ಗಂಗಾಪಿತ ಪಂಕಜಾಕ್ಷ ಮೋಕ್ಷದಾತ ನಾರದ ಮುನಿ ವಿನುತಾ ಅ.ಪ ಭೀಕರ ರಾಕ್ಷಸ ವಂಶ ಭಯಂಕರ ಕಿಂಕರ ಶಂಕರಗಾನಸು ಧಾಕರ ಲೋಕಪಾಲ ಪರಮ ಚತುರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀರಜನೇತ್ರ ನೀಲಾಂಬುದ ಗಾತ್ರ ವಾರಿಜಸಂಭವ ಸನ್ನುತಿ ಪಾತ್ರ ಪ ನಾರದ ವಂದಿತ ಭೂಸುರ ಗಾತ್ರ ಸೂತ್ರ ಅ.ಪ ಮಂಗಳದಾತಾ ಧನಂಜಯ ಸೂತ್ರ ಅಂಗಜತಾತ ವಿಹಂಗಮ ರುಂದ್ರ ಮಾಂಗಿರಿನಾಥ | ಚರಾಚರ ಭರಿತ ತುಂಗ ಕೃಪಾಯುತ | ಪಾವನ ಚರಿತಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸುಗಣನಾಯಕಾ ವಿನಾಯಕ ಪ ಶೂಲಪಾಶಾಂಕುಶಧೃತ ವರದಾಯಕ ಅ.ಪ ಲಂಬೋದರಾಂಕಿತ ಜಂಭಾರಿವಂದಿತ ಕುಂಭೋದ್ಭವಾನತ ಅಂಬಾಸುತ ಅಂಭೋಜ ಸಖನುತ ಗಂಭೀರ ಗುಣಯುತ ಸಾರ ಸಂತೋಷಿತ 1 ಆತಂಕಪರಿಹಾರ ಮಾತಂಗಮುಖವೀರ ಶೀತಾಂಶುಶೃಂಗಾರ ಶ್ವೇತಾಂಬರ ಭೂತಾಳಿಪರಿವಾರ ಖ್ಯಾತಾವಿಘ್ನೇಶ್ವರ ದಾತಾರ ಮಾಂಗಿರಿನಾಥಾ ಕೃಪಾಧರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪುಂಡರೀಕಾಕ್ಷನ ನಾ ಕಂಡೆ ಪಾಂಡುರಂಗೇಶನ ಪಾಂಡವಪಕ್ಷನ ಪ ಅಂಡಜವಾಹನೋದ್ದಂಡ ಪರಾಕ್ರಮ ಶುಂಡಲವರದ ಭೂಮಂಡಲ ಭರಿತನಅ.ಪ ದೇವದೇವೇಶನ ಭಾವಜಜನಕನ ಪಾವನಚರಿತನ ಭಾವುಕವರದನ ಶ್ರೀವನಮಾಲನ ಲಾವಣ್ಯಾಂಗನ ದೇವತರಂಗಿಣಿ ಪಾವನ ಪದನ1 ಪಾತಕ ಹರಣನ ಜ್ಯೋತಿಸ್ವರೂಪನ ಭೂತಳವಳೆದನ ಪಾತಕ ಹರ ಜೀಮೂತ ನೀಲಾಂಗನ [ಪ್ರೀತ] ಮಾಂಗಿರಿನಾಥ ಸುಂದರನ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೋ ವೆಂಕಟಗಿರಿನಾಥ| ದಯ- ದೋರೈ ಭಕುತರ ಪ್ರೀತ ಪ. ಮಾರಪಿತ ಗುಣಹಾರ ಮಂದರ- ಧಾರ ದೈತ್ಯಸಂಹಾರ ಸುಜನೋ ದ್ಧಾರ ಮಮಹೃದಯಾರವಿಂದಕೆ ಬಾರೋ ಕೃಪೆದೋರೋ ವೆಂಕಟ ಅ.ಪ. ವೃಷಭಾಸುರನೊಳು ಕಾದಿ ಸಾ- ಹಸವ ಮೆರೆಸಿದ ವಿನೋದಿ ವಶಗೈದು ದೈತ್ಯನ ಶಿರವ ಕತ್ತ- ರಿಸುತಲಿ ನೀನಿತ್ತೆ ವರವ ವಸುಧೆಯೊಳಗಿಹ ಸುಜನರನು ಮ- ನ್ನಿಸುತಲಿಷ್ಟವನಿತ್ತು ಕರುಣಾ- ರಸದಿ ಸಲಹುವ ಬಿಸಜನಾಭ ಶ್ರೀ- ವೃಷಭಾಚಲವೊಡೆಯ ವೆಂಕಟ 1 ಅಂಜನೆಯೆಂಬಳ ತಪಕೆ ಭಕ್ತ- ಸಂಜೀವನೆಂಬ ಶಪಥಕೆ ರಂಜಿಪ ಪದವಿತ್ತೆ ಮುದದಿ ಖಿಲ- ಭಂಜನಮೂರ್ತಿ ಕರುಣದಿ| ಮಂಜುಳಾಂಗ ಶ್ರೀರಂಗ ಸುರವರ ಕಂಜಭವವಿನುತಾದಿ ಮಾಯಾ- ರಂಜಿತಾಂಘ್ರಿ ಸರೋರುಹದ್ವಯ ಅಂಜನಾಚಲವೊಡೆಯ ವೆಂಕಟ 2 ಶೇಷನ ಮೊರೆಯ ತಾ ಕೇಳಿ ಬಲು ತೋಷವ ಮನಸಿನೊಳ್ತಾಳಿ ದೋಷರಹಿತನೆಂದೆನಿಸಿ ಕರು- ಣಾಶರಧಿಯ ತಾನೆ ಧರಿಸಿ ಶ್ರೀಶ ಹರಿ ಸರ್ವೇಶ ನತಜನ- ಪೋಷ ದುರ್ಜನನಾಶ ರವಿಶತ- ಭಾಸ ಕೌಸ್ತುಭಭೂಷ ವರ ಶ್ರೀ- ಶೇಷಾಚಲವಾಸ ವೆಂಕಟ 3 ಮಾಧವವಿಪ್ರ ವಿರಹದಿ ಭ್ರಷ್ಟ ಹೊಲತಿಗಳನು ಸೇರ್ದ ಮುದದಿ ಸಾದರದಲಿ ನಿನ್ನ ಬಳಿಗೆ ಬರೆ ನೀ ದಯಾನಿಧಿ ಕಂಡು ಅವಗೆ ಶೋಧಿಸುತ ಪಾಪಗಳೆಲ್ಲವ ಛೇದಿ ಬಿಸುಡುತ ನಿಂದು ವೆಂಕಟ- ಭೂಧರದ ನೆಲೆಯಾದ ನಾದವಿ- ಭೇದಬಿಂದು ಕಲಾದಿಮೂರುತಿ 4 ಧನಪತಿಯೊಳು ತಾನು ಸಾಲ ಕೊಂಡ ಘನಕೀರ್ತಿಯಿಂದ ಶ್ರೀಲೋಲ ವನಿತೆ ಪದ್ಮಾವತಿಪ್ರೀತ ಭಕ್ತ- ಜನಸುರಧೇನು ಶ್ರೀನಾಥ ವನಧಿಶಯನ ಮುರಾರಿ ಹರಿ ಚಿ- ಧ್ವನಿನಿಭಾಂಗ ಸುಶೀಲ ಕೋಮಲ ವನಜನಾಭ ನೀಯೆನ್ನ ಕೃಪೆಯೊಳ- ಗನುದಿನದಿ ಕಾಯೊ ಕೃಪಾಕರ 5 ಛಪ್ಪನ್ನೈವತ್ತಾರು ದೇಶದಿಂದ ಕಪ್ಪವಗೊಂಬ ಸರ್ವೇಶ ಅಪ್ಪ ಹೋಳಿಗೆಯನ್ನು ಮಾರಿ ಹಣ- ಒಪ್ಪಿಸಿಕೊಂಬ ಉದಾರಿ ಸರ್ಪಶಯನ ಕಂದರ್ಪಪಿತ ಭಜಿ- ಸಿರ್ಪವರ ಸಲಹಿರ್ಪ ಕುಜನರ ದರ್ಪಹರಿಸುತ ಕಪ್ಪಕಾಣಿಕೆ ಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6 ಚಾರುಚರಣತೀರ್ಥವೀಂಟಿ ನಿನ್ನೊ- ಳ್ಸಾರಿ ಬರುವ ಪುಣ್ಯಕೋಟಿ ಸೇರಿದೆ ಕೊಡು ಮನೋರಥವ ಲಕ್ಷ್ಮೀ- ನಾರಾಯಣನೆನ್ನೊಳ್ದಯವ ತೋರು ನಿರತ ಸಮೀರಭವ ವರ- ದಾರವಿಂದದಳಾಕ್ಷ ತಿರುಪತಿ ವೀರ ವೆಂಕಟರಮಣ ಮದ್ಬಹು-ಭಾರ ನಿನ್ನದು ಪಾಲಿಸೆನ್ನನು 7
--------------
ತುಪಾಕಿ ವೆಂಕಟರಮಣಾಚಾರ್ಯ
ಬೃಂದಾವನಾನಂದ ಬಾ | ಬೃಂದಾರಕಾನಂದ ಬಾ ಪ ಮಂದಾಕಿನೀಪಾದ ಗೋಪೀಜನಾನಂದ ನಂದಾತ್ಮ ಗೋವಿಂದ ಬಾ ಅ.ಪ ನಂದನ ವನದಲ್ಲಿ ಬೆಳೆದ ಮಂದಾರಾ ಸುಂದರಿಯ ತಲೆಯ ಜಡೆಯ ಬಂಗಾರ ಮಂದಮಾರುತನಿಂದ ನಲಿವು ಶೃಂಗಾರ ಸಾರ 1 ಕತ್ತಲೆಯಲಿ ಹೊಳೆವ ರನ್ನದ ದೀಪ ಮತ್ತಗಾಮಿನಿಯರ ಸರಸ ಸಲ್ಲಾಪ ಎತ್ತೆತ್ತ ಸಡಗರ ಸೊಗದ ಪ್ರತಾಪ ತಾಪ 2 ಗೋಪಾಲ ಘನಲೀಲ ಬಾ ಮುರಹರ ತಾಪತ್ರಯಕಾಲ ಬಾ ಪರಂಧಾಮ ದಿತಿಸುತಭೀಮಾ ಆಪತ್ಸಖಾ ಭಕ್ತಪಾಲಾ ಮಾಂಗಿರಿನಾಥ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭರಿತ ದಯಾಸಾರ ವಿಹಾರಾ | ಭರಿತ ದಯಾಸಾರಾ ಪ ನಿರುಪಮ ಲೀಲಾ ಗೋಕುಲ ಬಾಲಾ ತ್ರಿಭುವನ ಪಾಲಾ ದಾನವ ಕಾಲಾ ಸುಮನಸ ಪಾಲಾ | ತುಳಸೀಮಾಲಾ 1 ಶುಭಕರ ಚರಿತಾ | ಮುನಿಗಣ ವಿನುತಾ ಸುರಗಣ ಸನ್ನುತಾ | ಸುಭವ ನಮಿತಾ ಶರಣ ಜನಾನತ ಸಕಲಾಧಿತಾ ಕಾಮಿತ ದಾತ-ಮಾಂಗಿರಿನಾಥಾ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭೀಮ ಪರಾಕ್ರಮ ನಿರುಪಮ ಪ್ರೇಮ ಪ ದಾನವಭೀಮ ಕುವಲಯ ಶ್ಯಾಮ ಅ.ಪ ಕೋಸಲಪುರಪಾಲ ದಶರಥ ಬಾಲ ದುರುಳ ಕುಲಾನಲ ಘನಗುಣಶೀಲ ಕನಕದುಕೂಲ ಮಣಿಮಯ ಮಾಲಾ ಕರುಣಾಲವಾಲ 1 ಪವನಸುತಾನತ ಸುಗುಣಗಣಾನ್ವಿತ ಭರತ ಸಂಶೋಭಿತ ಮುನಿಗಣ ಸೇವಿತ ಕಮಲದಳಾಯತ ಲೋಚನ ಸುಲಲಿತ ಕುಂಭಜಪೂಜಿತ ಮಾಂಗಿರಿನಾಥ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್