ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರೆ ಮುಕ್ತಕದಾರತಿ ಹರಿಗೆ ಕಮಲ ಮುಖಿ ಗಿರಿಧರಗೆ ಪ ಕ್ರೋಢ ನರಮೃಗಗೆ ಮಾಣವಕನಿಗೆ ವೀರಭಾರ್ಗವಗೆ ಸ್ಥಾಣು ಬಾಣವ ತುರಗವಾಹನಗೆ 1 ಮಂದರೋದ್ಧರ ಮಾತುಳಾಂತಕಗೆ ಶಿಂಧು ಮಂದಿರ ಸಾರಸಾಂಬಕಗೆ ವಂದಿಸುತ ಗೋವೃಂದ ಗೋಪಾಲಗೆ 2 ಸಾಮಗಾನವಿಲೋಲ ರಂಗನಿಗೆ ಶ್ರೀಮಹಿ ರಮಣ ವೆಂಕಟಗೆ ಕಾಮಿತಾರ್ಥವ ಕೊಡುವ ಕೋಮಲಾಂಗಗೆ ಶ್ರೀ ಶಾಮಸುಂದರವಿಠಲ ಮೂರುತಿಗೆ 3
--------------
ಶಾಮಸುಂದರ ವಿಠಲ
ನಿತ್ಯ ಕರ್ಮೇಂದ್ರಿಯ ಸೇವಿತನಿಗೆಮಂಗಳಂ ಉಡುಪಿನ ಶ್ರೀಕೃಷ್ಣನಿಗೆಪ. ನಂದನ ಕಂದನಿಗೆ ವೃಂದಾರಕೇಂದ್ರನಿಗೆಮಂದರ ಗಿರಿಧರಗೆ ಇಂದಿರಾಕಾಂತನಿಗೆನಂದ ಸುರವ್ರಾತನಿಗೆ ನಂದ ತೀ-ರ್ಥೇಂದ್ರ ಗೋವಿಂದ ಹರಿಗೆ1 ಮಕರ ಕುಂಡಲಧರ ರುಕುಮಿಣಿ ರಮಣನಿಗೆಅಕಳಂಕ ಮಹಿಮಗೆ ಅಕುಟಿಲನಿಗೆಶುಕವಾಹನನ ಪಿತಗೆ ಭಕುತವತ್ಸಲಗೆ ಅ-ಧಿಕ ಕೋಟಿರವಿತೇಜ ಮಕುಟ ದಿಟ್ಟನಿಗೆ 2 ಸರಸ ಮಂದಹಾಸನಿಗೆ ನರಹರಿ ರೂಪನಿಗೆವರ ಕೌಸ್ತುಭಹಾರ ಧರಿಸಿದವಗೆಕರುಣದಿ ಗೋಪಿಯರ ಧುರದಿ ರಕ್ಷಿಪನಿಗೆಸಿರಿಮುದ್ದು ಹಯವದನ ಮುರಹರನಿಗೆ 3
--------------
ವಾದಿರಾಜ
ನಿತ್ಯ ಶುಭ ಮಂಗಳಂ ಭಯ ವಿನಾಶನದೇವ ಶ್ರೀನಿವಾಸನಿಗೆ ಪ. ಮಂಗಳಂ ಜಲಚರಗೆ ಮಂಗಳಂ ಗಿರಿಧರಗೆ ಮಂಗಳಂ ಭೂದೇವಿ ರಕ್ಷಕನಿಗೆ ಮಂಗಳಂ ನರಹರಿಗೆ ಮಂಗಳಂ ಮಾಣವಗೆ ಮಂಗಳಂ ಭಾರ್ಗವಗೆ ದಾಶರಥಿಗೆ 1 ಮಂಗಳಂ ಗೋಪಾಂಗನೆಯರ ಕಾಯ್ದವನಿಗೆ ಮಂಗಳಂ ತ್ರಿಪುರ ಸುರರಳಿದ ಹರಿಗೆ ಮಂಗಳಂ ಹಯವೇರಿ ಕಲಿಮುಖರ ಗೆಲಿದವಗೆ ಮಂಗಳಂ ಶ್ರೀಕೃಷ್ಣ ಶ್ರೀನಿವಾಸನಿಗೆ 2 ಆಪಾದಮೌಳಿ ಪಾವನರೂಪನಿಗೆ ಆಪನ್ನ ರಕ್ಷಕಗೆ ಆದಿರೂಪನಿಗೆ ಆಪದ್ಭಾಂಧವ ಶ್ರೀಗುರುಗಳಂತರ್ಗತಗೆ ಗೋಪಾಲಕೃಷ್ಣವಿಠ್ಠಲಮೂರ್ತಿಗೆ 3
--------------
ಅಂಬಾಬಾಯಿ