ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಶಿಲೆಯಲ್ಲಿ ಮಮತೆಯೇ ಸಿದ್ಧ ಪುರುಷ ಇಳೆಮೂರು ವ್ಯಾಪಕಗೆ ಈ ಮುನಿಯ ಬಳಿಯಾ ಪ. ದಶರಥಾತ್ಮಜ ಸೇತು ಬಂಧನವ ಗೈಯಲೂ ಅಸಮ ಸಾಹಸದಿ ಗಿರಿಗಳನೆ ತಂದೇ ಹಸನಾದ ಶಿಲೆಯೊಂದರಲಿ ರೂಪ ಮೂಡುವಡೆ ವಸುಧಿ ಸುತೆಪತಿ ಬೇಡವೆನುತಿರ್ದನೇನೈ 1 ನಡುಗೆ ಹುಲಿ ಘರ್ಜನೆಗೆ ಪಡೆದವಳ ಕೈ ಜಾರೆ ವಡೆದು ಶತವಾಗಲಾ ಗಿರಿಯಲ್ಲಿ ಮಮತೇ ವಡಮೂಡದವಗೆ ಈ ವಡೆದ ಪ್ರತೀಕದಲಿ ಇಡುತ ಅಭಿಮಾನವನು ಕಡು ಪೂಜೆಗೊಂಬೇ 2 ಧರೆಯಲ್ಲಿ ಚರಿಸಿ ಸದ್ಭಕ್ತರ ಜ್ಞಾನವನು ಹರಿಸಿ ಸಧ್ಗ್ರಂಥ ಕನ್ನಡಿಯ ತೋರಿ ಗಿರಿ ಏರುವಾಗ ಬೇಕೆನಲು ಶಿಲೆ ಇರಲಿಲ್ಲೆ ಬಿರುಕಾದ ಕಲ್ಲಿನಲ್ಲಿ ನೆಲಸಿರುವದೇನೈ 3 ಶಿಲೆಯೆ ನೀನೆನ್ನಲು ಅಜ್ಞಾನಿ ನುಡಿಯಹುದು ಶಿಲೆಯಲ್ಲಿ ನೀನೆಲು ಮತ್ತೊಂದು ಶಿಗದೇ ಬಲು ಛಿದ್ರ ತಂತಿಯಲಿ ಬಿಗಿಸಿ ಪೂಜೆಯಗೊಂಬ ಬಲವಂತದಾ ಮಹಿಮೆ ತಿಳಿಯಲಳವಲ್ಲಾ 4 ತಾಪಸರ ಪೂಜೆ ಸತ್ವವ ತೋರ್ವ ವೈಭವವೋ ಆಪನ್ನರನೆ ಕಾಯ್ವ ಆನಂದವೋ ಶ್ರೀ ಪರಮಹಂಸ ಪ್ರದ್ಯುಮ್ನತೀರ್ಥರಿಗೊಲಿದೆ ಗೋಪಾಲಕೃಷ್ಣವಿಠ್ಠಲನ ನಿಜದಾಸ 5
--------------
ಅಂಬಾಬಾಯಿ
ಕುಳಿತೆಯ ಕೃಷ್ಣ ಕುಳ್ಳಿರ ಕಲಿತೆಯ |ಕುಳಿತೆಯ ಎನ್ನೊಡೆಯ ಪಇಳೆಯೊಳು ಭಕುತರ ಹೃದಯ ಕಮಲದೊಳು |ಕುಳಿತೆಯ ಎನ್ನೊಡೆಯ ಅ.ಪಜಲಚರರೂಪದಿ ನಿಗಮಗಳೆಣಿಸುತ ಕುಳಿತೆಯ ಎನ್ನೊಡೆಯ |ಕುಲಗಿರಿಗಳನೆಲ್ಲ ನೆಗಹಿಕೂರ್ಮನಾಗಿ ಕುಳಿತೆಯ ಎನ್ನೊಡೆಯ ||ಛಲದಿ ವರಾಹನಾಗಿ ಭೂಮಿದೇವಿಯ ತಂದುಕುಳಿತೆಯ ಎನ್ನೊಡೆಯಖಳಹಿರಣ್ಯಾಖ್ಯನ ಕರುಳಬಗಿವೆನೆಂದುಕುಳಿತೆಯ ಎನ್ನೊಡೆಯ 1ತೊಡೆ ವಟುವೇಷವ ಸುರರ ರಕ್ಷಿಪೆನೆಂದು ಕುಳಿತೆಯ ಎನ್ನೊಡೆಯ |ಪೊಡವಿಯ ಕ್ಷತ್ರಿಯ ವಂಶ ಸವರುವೆನೆಂದು ಕುಳಿತೆಯ ಎನ್ನೊಡೆಯ ||ಮಡದಿಯ ಒಯ್ದನ ಕೆಡಹಿ ಲಂಕೆಯಲಿಕುಳಿತೆಯ ಎನ್ನೊಡೆಯ |ಕಡುಮೂರ್ಖ ಕೌರವನನ್ನು ಕೊಲುವೆನೆಂದು ಕುಳಿತೆಯ ಎನ್ನೊಡೆಯ 2ತ್ರಿಪುರರ ಸತಿಯರ ವ್ರತವ ಕೆಡಿಪೆನೆಂದು ಕುಳಿತೆಯ ಎನ್ನೊಡೆಯ |ಉಪಸನಿಷದ್ವಾಹನ ತೇಜಿಯ ಬೆನ್ನಲಿ ಕುಳಿತೆಯ ಎನ್ನೊಡೆಯ |ಕೃಪೆಯಿಂದಲಿ ಮನದೊಳು ನೆನೆವವರಲಿಕುಳಿತೆಯ ಎನ್ನೊಡೆಯ |ಕಪಟನಾಟಕಸಿರಿ ಪುರಂದರವಿಠಲ ಕುಳಿತೆಯ ಎನ್ನೊಡೆಯ3
--------------
ಪುರಂದರದಾಸರು