ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತರಂಗದಲಿ ಹರಿಯ ಕಾಣದವನೆಹುಟ್ಟು ಕುರುಡನೋ ಪ ಸಂತತ ಸಿರಿಕೃಷ್ಣ ಚರಿತೆ ಕೇಳದವನೆಜಡಮತಿ ಕಿವುಡನೊ ಎಂದೆಂದಿಗುಅ.ಪ. ಹರುಷದಲಿ ನರಹರಿಯ ಪೂಜೆಯ ಮಾಡದವನೆ ಕೈ ಮುರಿದವನೊಕುರುವರ ಸೂತನ ಮುಂದೆ ಕೃಷ್ಣಾಯೆಂದುಕುಣಿಯದವನೆ ಕುಂಟನೋನರಹರಿ ಚರಣೋದಕ ಧರಿಸದ ಶಿರನಾಯುಂಡ ಹೆಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರ ಭೋಜನವೋ ಎಂದೆಂದಿಗು 1 ಅಮರೇಶ ಕೃಷ್ಣಗರ್ಪಿತವಿಲ್ಲದಾ ಕರ್ಮಅಸತಿಯ ವ್ರತನೇಮವೋರಮೆಯರಸಗೆ ಪ್ರೀತಿಯಿಲ್ಲದ ವಿತರಣೆರಂಡೆ ಕೊರಳ ಸೂತ್ರವೊಕಮಲನಾಭನ ಪಾಡಿ ಪೊಗಳದ ಸಂಗೀತಗಾರ್ಧಭ ರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರಮಾಡದವನೆ ಮೃಗವೊ, ಎಂದೆಂದಿಗು2ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟುಸುರೆಯ ಸೇವಿಸಬೇಡವೊಸುರಧೇನುವಿರಲಾಗಿ ಸೂಕರ ಮೊಲೆಹಾಲುಕರೆದು ಕುಡಿಯಬೇಡವೊಕರಿರಥಾ ತುರಗವಿರಲು ಬಿಟ್ಟು ಕೆಡಹುವಕತ್ತೆಯೇರಲಿಬೇಡವೊಪರಮ ಪದವನೀವ ಸಿರಿಕೃಷ್ಣನಿರಲಾಗಿನರರ ಸೇವಿಸಬೇಡವೊ, ಎಂದೆಂದಿಗು 3
--------------
ವ್ಯಾಸರಾಯರು
ತುರುಕರಿಲ್ಲದ ಮನೆ ದಿರದಿಮ್ಮನೆ ಪ ತುರಕರ ನೋಡದ ಕಣ್ಣು ಶಿಖಿಗರಿಗಣ್ಣು ಕರ್ಣ ತುರಕರುವಿನುಚ್ಛಿಷ್ಟ ಉಣ್ಣ ಬಾಯಿ ವಿಷಗಾಯಿ 1 ಜಿಹ್ವೆ ಅಧಮನ ಗುಂಹೆ ತುರಕರನೊದೆವ ಕಾಲು ಯಮನ ಪಾಲು 2 ತುರಕರ ಪ್ರಸಾದ ಉಣ್ಣದ ಹೊಟ್ಟೆ ಗೂಗಿನ ಮೊಟ್ಟೆ ತುರಕರನ ಚಿಂತಿಸದ ಮನ ಗಾರ್ಧಭ ಗಮನ ತುರಕರ ಕಾಯ್ದ ವಿಜಯವಿಠ್ಠಲರೇಯ ತುರಕರ ಕರುಣ ಪಡೆಯದವನು ಶುದ್ಧ ಶವನು3
--------------
ವಿಜಯದಾಸ
ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ 1 ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ 2 ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ 3 ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ ನಿರಯ ದುರಾತ್ಮಗಿಲ್ಲ ಕರವ ಮುಗಿದು ಒಂದು ವರ ಬೇಡುವೆ 4 ಭಾಗವತರ ಸಹವಾಸ ಭಾಗವತರ ಕಥಾಗುಣ ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ 5 ಕಾಣಿಕಾಣೆ ಙÁ್ಞನವಿಲ್ಲ ತುತಿಪುದಕ್ಕೆ ಧ್ಯಾನವÀರಿಯೆ ನಿನ್ನನೆ ನಿದಾನಿಸಲಿಕ್ಕೆ ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ ನೀನೊಲಿದು ಎನ್ನ ಮನಕೆ ಆನಂದ ತೋರೋ 6 ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ ರಜನಿಚರ ವಿನಾಶಾ ಸುಜನಮಾನಸಹಂಸ ರಜದೂರ ಮಂದಹಾಸಾ ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ 7
--------------
ವಿಜಯದಾಸ
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಹೇಳಲಾಗದು ತತ್ವ ಹೇಳಲಾಗದು ಜ್ಞಾನಖೂಳಮೂಳರಾದ ಕುಹಕಿಗಳಿಗೆಪನಾರುತಿಹ ತೊಗಲನು ಕಡಿದನಾಯಿ ಮುಖದ ಮುಂದೆದಾರವಟ್ಟದಲಿ ತುಪ್ಪವ ನೀಡಲು ಅರಿವುದೆಘೋರಸಂಸಾರ ವಿಷಗಟ್ಟಾಗಿ ಹಿಡಿದವಗೆಸಾರಬೋಧೆಯನರಿಯಲು ತಿಳಿಯುವುದೇ1ಗೊಜ್ಜಲ ತೃಣವನು ತಿಂಬ ಗಾರ್ಧಭನ ಮುಂದೆಸಜ್ಜಿಗೆಯ ತಂದಿಡಲಿಕೆ ಅದನರಿವುದೆಲಜ್ಜೆಯಹ ನಾನಾ ಮೋಹ ಪಾಶಲಿಪ್ಪರಿಗೆಸಜ್ಜನ ಶಾಸ್ತ್ರವನೊರೆಯಲದು ತಿಳಿವುದೇ2ದೊಡ್ಡಕ್ಕಚ್ಚನೆ ಕುಡಿವ ಗೊಡ್ಡೆಮ್ಮೆಯ ಮುಂದಕೆಲಡ್ಡುಗೆಯ ತಂದಿಡಲಿಕೆ ಅದನು ತಿಳಿವುದೇದಡ್ಡ ಬುದ್ಧಿಯು ಬಲಿತು ದೊಡ್ಡನಾದವಗೆದೊಡ್ಡ ಚಿದಾನಂದ ಬ್ರಹ್ಮವು ತಿಳಿವುದೇ3
--------------
ಚಿದಾನಂದ ಅವಧೂತರು