ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ನೀ ಕರುಣದಿ ಥಟ್ಟನೆ ಸಲಹೊ ದುಷ್ಟಮರ್ದನ ಸಕಲೇಷ್ಟದಾಯಕ ರಾಮ ಪ. ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆಂದು ಶಿಷ್ಟ ನುಡಿವುದ ನಂಬಿಹೆನು ಮೆಟ್ಟಿ ಬಾಧಿಸುವಂಥ ದಟ್ಟ ದಾರಿದ್ರ್ಯದ ಬಟ್ಟೆ ಒಂದನು ಕಾಣೆ 1 ಊರ ಜನರ ಮುಂದೆ ಸೇರಿದ ಪದವನ್ನು ದೂರಗೊಳಿಸಿ ಬಹು ಗಾರಾದೆನು ಮಾರಮಣ ನೀನ್ನುದಾರ ಗುಣವ ನಂಬಿ ಚೀರುವ ಎನಗೆ ಬೇರಾರು ರಕ್ಷಕರಿನ್ನು 2 ವಿಶ್ವಕುಟುಂಬಿ ಸರ್ವೇಶ್ವರ ನೀನಿಂದು ವಿಶ್ವಾಸದಿಂದ ನಾನಿರುವದನು ತೈಜಸ ಪ್ರಾಜ್ಞ ತುರ್ಯರೂಪಗಳಿಂದ ವಿಶ್ವವ್ಯಾಪಕನಾದ ನಿನಗರುಪುವುದೇನೊ 3 ಖುಲ್ಲ ಮಾನವರೆಂಬ ಕ್ಷುಲ್ಲ ನುಡಿಗಳಿಂದ ತಲ್ಲಣಗೊಳಿಸುವುದುಚಿತವೇನೊ ಮಲ್ಲ ಚಾಣೂರ ಮುಷ್ಟಿಕರನ್ನ ಗೆಲಿÉದರಿ- ದಲ್ಲಣಯನಗೆ ಬೆಂಬಲನಾಗಿ ಸಲಹಿನ್ನು 4 ಇಂದ್ರಾದಿ ದಿವಿಜರ ಪದಗಳನವರಿಗೆ ಪೊಂದಿಸಿ ಪಾಲಿಪ ಕರುಣಿ ನೀನು ಇಂದಿರೆ ಸಹಿತಾಗಿ ಬಂದೆನ್ನ ಮನಸಿಗಾ ನಂದ ತೋರಿಸೊ ಭುಜಗೇಂದ್ರಾದಿ ಒಡೆಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ಭಕ್ತಾಧೀನಹರೇ ಭಕ್ತಾಧೀನ ವಿರಕ್ತ ವಿನೋದನ ಭುಕ್ತಿಮುಕ್ತಿದ ಸರ್ವಶಕ್ತಿ ನೀ ದಯವಾಗು ಪ. ಚಂಚಲ ಮನದಿ ಪ್ರಾಪಂಚಿಕ ಸುಖದಾಸೆ ಮಿಂಚಿ ಸಂಸ್ಕøತಿಯಲಿ ಸಂಚರಿಸಿ ಮುಂಚಿನ ಭವಗತ ಸಂಚಿತವರಿಯದೆ ಹಂಚಿಗು ಕಡೆಯಾದೆ ಪಂಚಾತ್ಮನ ನೆನೆಯದೆ 1 ಘೋರ ಸಂಸ್ಕøತಿ ಪಾರ ವಾರುಧಿ ಮುಳುಗ್ಯಾಡಿ ಪಾರುಗಾಣದೆ ಬಹು ಗಾರಾದೆನು ಶ್ರೀರಮಣನೆ ನಿನ್ನಾಧಾರವಲ್ಲದೆ ಮುಂದೆ ಕಂಸಾರಿ ನೀ ಕೃಪೆದೋರು 2 ಭವ ವಾಯು ಗಿರೀಶಾದಿ ದಿವಿಜರ ನಿರತ ಪ್ರೇರಿಸುವಂಥ ದೊರೆಯೆ ನಿನ್ನ ಸ್ಮರಿಸುವೆ ಪರಿವೃತಾಂತರ ನಿಯಾಮಕ ಲಕ್ಷ್ಮೀ- ವರ ವೆಂಕಟಾದ್ರೀಶ ನಿರುಪಧಿ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ