ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಸೂರ್ಯನಾರಾಯಣನ ಪ್ರಾರ್ಥನೆ) ಸೂರ್ಯಬಿಂಬಗತ ನಾರಾಯಣನನು ಸೇರಿರುವೆನು ಸತತ ಸಾರಸಜಾಸನ ಹೈರಣ್ಯವಪುಷನ ಪ . ಸರ್ಗಸ್ಥಿತಿಗತಿ ಕಾರಣವ್ಯಾಹೃತಿ ಗರ್ವವೇದ್ಯ ಚರಣಾ ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ ಭಾರ್ಗವಿ ಮುಖ ಸಂಸರ್ಗಾನನ ಮತಿ ವರ್ಗಕೇತ್ವತೈದ ಮಾರ್ಗವ ತೋರಿಸು 1 ಸೂರಿಗಮ್ಯಪದ ವಾರಿಜಸುರಪರಿವಾರ ನಿನ್ನ ಕರುಣಾ ತೋರು ಭೌತಿಕ ಶರೀರ ದಾಢ್ರ್ಯ ಮೂರಾರು ಭಕುತಿ ನವ ನಾರದಾದಿ ಮುನಿವಂದಿತ ನಿನ್ನಾ- ನೀರಜ ಬಾಂಧವ 2 ಈ ಜಗದೊಳು ಬಹು ಸೋಜಿಗದೋರುವ ರಾಜರಾಜ ನೀನೆ ರಾಜಸೂಯಯುತ ವಾಜಿಮೇಧ ಕೃದ್ರಾಜನ ಮೈದುನನೆ ಓಜೋಬಲ ಬಹು ತೇಜದ ಪನ್ನಗ ರಾಜ ಗಿರೀಂದ್ರ ವಿರಾಚಿತ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಪ ಶ್ಲೋಕ - ಘನ ಅನವರತÀ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ನಗರ ನಿಲಯಾ | ಅಮಿತÀ ಆನಂದ ಕಾಯಾ | ನಾಗ ತಲ್ಪೋರು ಗಾಯಾ 1 ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ 1 ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಕಮಲ ನಿನೇತ್ರಾ | 2 ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ 2 ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವÀ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ3 ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ 3 ನವನೀತ ಗೋಪಿ ವಸ್ತ್ರಾಪಹಾರಾ | ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ4 ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ 4
--------------
ವಿಜಯದಾಸ
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ