ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾನ ಹರಿನಾಮ ಕೀರ್ತನೆಯ ಗಾನ ಪರಮಾದರವಿದ್ದರೆ ಗಾನ ಪ ಗಾನದಿಂದ ಹರಿಯುವ ಬಾಷ್ಪಾಂಜಲಿ ಭಾನುವಂಶ ಶೇಖರಿನಿಗುಪಾಯನ ಅ.ಪ ಗಾನರಸದ ಮಜ್ಜನದಿಂದಲಿ ಮನ ಕಾಣಲು ಶಮದಮ ಸುಖಗಳನು ಕೂರ್ಮ ಮೊದಲಾದ ರಮೇಶನ ನಾನಾ ಲೀಲೆಗಳನ್ನು ಪೊಗಳುವುದೇ 1 ನಾರಿಯ ಸೌಂದರ್ಯಕೆ ಮಾಂಗಲ್ಯವು ಕಾರಣವಾಗುವ ತೆರದಲ್ಲಿ ಹೇರಳ ಗಾಂಭೀರ್ಯವ ರಸಪುಂಜಕೆ ಬೀರುವ ಶೌರಿಯ ಮಧುರನಾಮಗಳೆ2 ಆದಿವ್ಯಾಧಿ ಜನನಾದಿ ವಿರೋಧದ ಬಾಧೆಯ ಕಳೆಯುವ ಔಷಧಿಯು ಮಾಧವ ಮಧುಸೂಧನ ಶ್ರೀಧರಪರ ಬೋಧ ಪ್ರಸನ್ನನ ಮಧುರ ನಾಮಗಳೇ 3
--------------
ವಿದ್ಯಾಪ್ರಸನ್ನತೀರ್ಥರು
ಮನಸಿನ ಮಲಿನವ ಮನಸೀಜನೈಯನೆ ಹನನ ವೈದಿಸದಿರೆ ಬದುಕುವ ದೆಂತೊ ಪ ವನಜ ಸಂಭವ ಜನಕ ತನುಮನ ಪ್ರೇರಕ ಮಾನವ ನಾನು ಶರಣುಹೊಕ್ಕೆನೈಯ ಅ.ಪ ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ ದೀನಜನಮಂದಾರ ಕರುಣೋದಾರ ಮಹಿಮನೆ ಮಾನಮತ್ತವಮಾನ ನಿನ್ನಾಧೀನ ವಲ್ಲವೆ ತನುಮನೇಂದ್ರಿಯ ನಾಥ ನಾಯಕ ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1 ನೋಡಬಾರದ ನೋಟ ನೋಡಿ ಆಯಿತು ಜೀಯ ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2 ಮುಂದು ಮಾಡುತ ಹಿಂದೆ ಇಂದು ಕಂದನಲ್ಲವೆ ನಾನು ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ ಎಂದಿಗಾದರು ಸಾಧ್ಯವಾಹುದೆ ನನಗೆ ತಂದೆ ಜಯಮುನಿವಾಯು ಹೃದಯಗ ನಂದಮಯ ಶ್ರೀ ಕೃಷ್ಣವಿಠಲ ನಿಖಿಳ ವಿಶ್ವಕೆ ಕುಂದುಮಯ ಅಭಿಮಾನ ಮನಸಿಗೆ ತಂದಿಡದೆಯೆಂದೆಂದು ಸಲಹುತ ಕುಂದು ಗೈದವನೆಂದು ನುಡಿಯದೆ ಪಥ 3
--------------
ಕೃಷ್ಣವಿಠಲದಾಸರು
ಲಾಲಿ ರಘುಕುಲತಿಲಕ ಲಾವಣ್ಯ ಗುಣಧಾಮ ಪ. ವಿನುತ ಲಾಲಿ ಸುಜನರ ಪಾಲ ಅ.ಪ. ಅಸುರ ಕುಲ ಬಾಧಿಸಲು ವಸುದೇವ ಸುತ ರಕ್ಷ ಹಸನಾಗಿ ಪ್ರಾರ್ಥಿಸಲು ನಿನ್ನ ದೇವತೆಗಳಾಗ ವಸುಧೆ ಭಾರವ ಇಳುಹೆ ಶಿಶುವಾಗಿ ದಶರಥಗೆ ದಶ ದಿಗ್ವಲಯ ಬೆಳಗೆ ದಶಮ ಬಲರಾಮ 1 ಶಿವನ ಧನುವನು ಮುರಿಯೆ ಅವನಿಜೆಯು ಹಾರವನು ಜವದಿ ಹಾಕಲು ಪರಶುರಾಮನ ಗರ್ವ ತವಕದಲಿ ಮುರಿದಯೋಧ್ಯೆಯ ಪಾವನ ಮಾಡೆಂ ದವನಿ ಜಾಲವು ಕೂಗೆ ಸವಿಗಾನದಿಂದ 2 ಮಾತೆ ವಾಕ್ಯವ ಕೇಳಿ ಸೀತೆ ಸಹಿತಲೆ ವನಕೆ ಆತ ಲಕ್ಷ್ಮಣನೊಡನೆನೀತನೀ ತೆರಳೆ ದೂತ ರಾವಣನ ಹತವಾತಸುತ ದೂತ ಸಹ ಖ್ಯಾತಿಲಯೋಧ್ಯೆಗೆ ಬಂದ ಶ್ರೀನಾಥ ಶ್ರೀ ಶ್ರೀನಿವಾಸಾ ಲಾಲಿ 3
--------------
ಸರಸ್ವತಿ ಬಾಯಿ