ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಣಿ ಕುಣಿಯೆಲೋ ಹರಿಗಾನದಲಿ ಪ ಅಣಕಿಸುವರೆಂದು ಮನ ಜರಿಯದೆಲೆ ಅ.ಪ ಅನುಗಾಲವು ಮನಕೊರೆಯುವ ಅನುತಾಪಗಳ ಕೊನೆಗಾಣಿಸಲು 1 ಸ್ಥಿರವಲ್ಲವು ನರಜನ್ಮವು ಸರಿಸಮಯವೆಂದು ಅರಿಯುತ್ತ ಮುದದಿ 2 ಒಣ ಭೋಗವ ಉಣಲೋಸುಗ ಹಣಗಳಿಸೆ ಬಲು ದಣಿವುದಕಿಂತ 3 ಗಾನ ಲೋಲನ ನಾಮ ಮಧುರಸ ಸಾನುರಾಗದಿಂದ ವಾಸಮಾಡುತಲಿ 4 ಪನ್ನಗಾರಿವಾಹನ ಹರಿಯು ಪ್ರ ಸನ್ನನಾಗಲೆಂದು ಸನ್ನುತಿಸುವ ಸದಾ 5
--------------
ವಿದ್ಯಾಪ್ರಸನ್ನತೀರ್ಥರು
ಚಂದ್ರಹಾಸನ ಕಥೆ ಸುಜನ ತ್ರೈಭುವನೋದ್ಧಾರ ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1 ಭಕ್ತರ ಭಾಗ್ಯನಿಧಿಯೆ ನುಡಿಸಯ್ಯ ಎನ್ನ ಜಿಹ್ವೆಯಲಿ 2 ಅಜಹರಿಸುರ ವಂದಿತನೆ ನಿಜವಾಗೊ ಮತಿಗೆ ಮಂಗಳವ 3 ಸಂಗೀತಲೋಲೆ ಸುಶೀಲೆ ಹಿಂಗದೆ ನೆಲಸೆನ್ನ ತಾಯೆ 4 ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ ಮುಗಿದು ವಂದಿಸುವೆ 5 ಸೂರ್ಯ ಪತಿಯ ಚರಣವನ್ನು ನೆನೆವೆ ಮಂಗಳವಾಗಲೆಂದು 6 ಒರೆದಂಥ ಜೈಮಿನಿಯೊಳಗೆ ಮಾಡಿ ವರ್ಣಿಸುವೆ 7 ಸಂದೇಹ ಮಾಡುತ್ತಿರಲು ಪೇಳಿದ ಫಲುಗುಣಗೆ 8 ಮುಂದೊತ್ತಿ ರಥವ ಬೆಂಬತ್ತಿ ನಿಂದಿರಿಸಿದ ಚಂದ್ರಹಾಸ 9 ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10 ನ್ನೊಡೆಯಗೆ ಪೇಳಿದರಾಗ ಕಡುಚಿಂತೆಯಲಿ ಪಾರ್ಥನಿದ್ದ 11 ದಿನಕರ ಪ್ರತಿಬಿಂಬದಂತೆ ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12 ಉಟ್ಟಿಹ ಕರದಿ ವೇಣುವನು ಶ್ರೇಷ್ಠÀ ಬಂದನು ಇವರೆಡೆಗೆ 13 ಆನಂದದಿಂದ ಕೇಳಿದರು 14 ಎಲ್ಲ ವೃತ್ತಾಂತವನರುಹಿ ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15 ಪ್ರಮುಖರಿಲ್ಲ್ಯಾರು ಪೇಳೆನುಲು ಸಮಯವಲ್ಲವು ಪೇಳೆನಲು 16 ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17 ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು ಪ್ರಧಾನಿಯನು 18 ಭೂತಮೂಲದಲಿ ಪುಟ್ಟಿದನು ತಾತ ಕಾಲವಾಗಿ ಪೋದ 19 ಸಾಯಲಾದಳು ರಾಜಪತ್ನಿ ಸಿರಿ ಪರರಾಯರು ಬಂದು ಕಟ್ಟಿದರು20 ಬಾಲನಿರಲು ಆ ಶಿಶುವೆತ್ತಿ ನಡೆದಳು 21 ಕುಂತಳಪುರಕಾಗಿ ಬಂದು ಆ ಗ್ರಾಮದಲ್ಲಿ 22 ಎರೆದು ಪೋಷಣೆಯ ಮಾಡುವಳು ಮರುಗುತಿರ್ದಳು ಮನದೊಳಗೆ 23 ಹಾಸುವ ವಸ್ತ್ರಗಳಿಲ್ಲ ಬೇಸತ್ತು ಅಳಲುವಳೊಮ್ಮೆ 24 ನೋಡಿ ಹಿಗ್ಗುವಳು ಆಲಂಬದಲ್ಲಿರುತಿಹಳು 25 ಕಂಗಳ ಕುಡಿನೋಟವೆಸೆಯೆ ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ- ದೊಳಗಾಡುತಿಹನು 26 ಪರಪುಟ್ಟನಾದುದ ಕಂಡು ಮಡಿಯ ಪೊದಿಸುವರು 27 ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ- ರೋಗರವನ್ನು ಉಣಿಸುವರು ರಾಗಗಾನದಲಿ ಪಾಡುವರು 28 ಎಣ್ಣೂರಿಗೆಯನು ಕೊಡಿಸುವರು ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29 ತಮ್ಮಾಲಯದೊಳು ಕರೆದೊಯ್ದು ಮಾಲೆಯನವಗೆ ಹಾಕುವರು 30 ಮಾವಿನ ಫಲಗಳನು ಮದನನಯ್ಯನ ಕಿಂಕರಗೆ 31 ಸಾಲಿಗ್ರಾಮ ಶಿಲೆಯ ಅಷ್ಟು ಜನರಿಗೆ ತೋರಿಸಿದ 32 ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು ಲಕ್ಷ್ಮಿನಾರಾಯಣ ಮೂರುತಿಯ 33 ಕೂಡಿದ ಗೆಳೆಯರ ಕೂಡೆ ದೌಡೆಯೊಳಿಟ್ಟು ಕೊಂಡಿಹನು 34 ಮಂಡೆಗಳನು ತಗ್ಗಿಸುವನು 35 ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು ಬಾಯೊಳಗಿಡುವ 36 ಮಂದಿರದಲಿ ವಿಪ್ರರಿಗೆ ಆ- ಬಂದರು ಬುಧಜನರೆಲ್ಲ 37 ಶ್ರೇಷ್ಠರೆಲ್ಲರ ಕುಳ್ಳಿರಿಸಿ 38 ಮಂತ್ರಾಕ್ಷತೆಯನು ಮಂತ್ರಿಗಿತ್ತು ಲಕ್ಷಣವನ್ನೆ ನೋಡಿದರು 39
--------------
ಹೆಳವನಕಟ್ಟೆ ಗಿರಿಯಮ್ಮ
ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ. ಅನುದಿನದಿ ಧನವನಿತೆ _ ಎಂತೆಂಬ ಕಾನನದಿ ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ 1 ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ ಹಂಸರೂಪಿಯ ಮರೆತ _ ಸಂಶಯಾತತಜನಕೆ ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು ಶೌರಿ _ ದಾಸನೆನ್ನನು ಮಾಡಿ2 ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ 3
--------------
ಕೃಷ್ಣವಿಠಲದಾಸರು
ಮುರಳಿ ವಿನೋದ ವಿಠಲ | ಪೊರೆಯ ಬೇಕಿವನಾ ಪ ದುರಿತ ದುಷ್ಕøತವೆಲ್ಲ | ದೂರ ಸಾಗಿಸುತಾ ಅ.ಪ. ಚಾರು ಯೌವನದಲ್ಲಿ | ಪರಿಪರಿಯ ಲೌಕಿಕದಿಮಾರಮಣ ಸ್ಮøತಿ ರಹಿತ | ಕರ್ಮವೆಸಗೀಜಾರಿ ಪೋಗಲು ಆಯು | ಆರಾಧ್ಯ ದೇವತೆಯಚಾರುತರ ಪೂಜಿಸಲು | ಸಾರಿ ಬಂದಿಹನಾ 1 ಹಿಂದೆ ಮಾಡಿರುವ ಬಹು | ಮಂದಿ ಜನಗಳ ಸೇವೆಇಂದಿರೇಶನೆ ನಿನ್ನ | ಸೇವೆ ಎಂದೆನಿಸೀಇಂದಿರಾರಾಧ್ಯ ಪದ | ಚೆಂದದಿಂ ಪೊರೆ ಇವನಮಂದರೋದ್ಧಾರಿ ಹರಿ | ಕಂದರ್ಪಪಿತನೇ2 ಧ್ಯಾನ ಯೋಗದಿ ಮನವ | ಸಾನುಕೂಲಿಸು ಇವಗೆಮಾನನಿಧಿ ಮಧ್ವಪದ | ರೇಣುನಾಶ್ರಯಿಸೀಗಾನದಲಿ ತವ ಮಹಿಮೆ | ಪೊಗಳಿಕೆಯನೆ ಇತ್ತು ಪ್ರಾಣಾಂತರಾತ್ಮಕನೆ | ಪಾಲಿಸೈ ಹರಿಯೆ 3 ದೇವಧನ್ವಂತರಿಯೆ | ಪಾವನಾತ್ಮಕ ನಿನ್ನಸೇವೆ ಗಯ್ಯುವವಗಿ | ನ್ನಾವ ದುರಿತಗಳೋಭಾವದಲಿ ಮೈದೋರಿ | ನೀವೊಲಿದು ತೋದರಂತೆದೇವ ತವ ದಾಸ್ಯವನು | ಇತ್ತಿಹೆನು ಹರಿಯೇ 4 ನಾರಸಿಂಹಾತ್ಮಕನೆ | ಕಾರುಣ್ಯದಲಿ ಹೃದಯವಾರಿರುಹ ಮಧ್ಯದಲಿ | ತೋರಿ ತವ ರೂಪ |ಪಾರುಗೈ ಭವವ ಗುರು | ಗೋವಿಂದ ವಿಠಲನೆಸಾರಿ ತವ ಪಾದವನು | ಪ್ರಾರ್ಥಿಸುವೆ ಹರಿಯೇ5
--------------
ಗುರುಗೋವಿಂದವಿಠಲರು