ಒಟ್ಟು 8 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಹರಿ ನಾಮವ ಭಜಿಪಗೆ ನರಕದ ಭಯವುಂಟೆ ನಾರದ ಸನಕ ಸನಂದನ ಸುರನರ ಪಾಲಿತ ಕರುಣಾಕರನರಹರಿ ಎಂದು ಪ ಖಗರಾಜಗಳುಕದ ಉರಗನುಂಟೆ ದೊಡ್ಡ ಮೃಗರಾಜ ಗಳುಕದ ಆನೆಯುಂಟೆ ನಿತ್ಯ ಜಗದುದರನೆ ಜಗದೊಡೆಯ ಜಾಹ್ನವಿಪಿತ ತ್ರಿಗುಣ ನಿರ್ಗುಣನೆಂದು1 ತ್ರಯಂಬಕ ನುರಿಗಣ್ಣ ಲುಳಿದವರುಂಟೆ ಬಲಿಬಂಧನ ನರಹರಿ ಎಂದು 2 ಕುಳಿಶಕಳುಕದ ಪರ್ವತವುಂಟೆ ಚಲುವ ನಳಿನ ಮಿತ್ರನ ಮುಂದೆ ತಮವುಂಟೆ ಕಾಮ ಚೆಲುವ ಜಲಜಮಿತ್ರ ಕುಲಲಲಾಮನೆ ಎಂದು 3 ಹರಿಯೆ ರಕ್ಷಿಸಲು ಕೊಂದವರುಂಟೆ ಮನ ಮುರಿದು ಕೊಂದರೆ ಕಾವವರುಂಟೆ ಮುರಹರ ನಾರಾಯಣ ನರಹರಿ ಕರಿವರದ ಪಾಲಿತ ಸುರನರರ ಸೇವಿತನೆಂದು 4 ಹುತಾಶನನಿಗಳುಕದ ಕಾನನವುಂಟೆ ವನರುಹಾಂಬಕ ವಾಯುತನಯ ಕೋಣೆಯ ಲಕ್ಷ್ಮಿರಮಣ ಸನಕ ಸುತ ಚಿನುಮಯಾತ್ಮಕನೆಂದು 5
--------------
ಕವಿ ಪರಮದೇವದಾಸರು
ಬಿಟ್ಟೆಯಾ ಸ್ವಾಮಿ ಎನ್ನ ಬಿಟ್ಟೆಯಾ ಬಿಟ್ಟೆಯಾ ಎನ್ನ ಜೀಯ ವ್ಯರ್ಥ ಪ. ಕೊಟ್ಟೆಯಾ ದುರಿತದ ಕಯ್ಯ ಅಹ ಕಟ್ಟ ಕಡೆಗು ಕಾವ ನೀನೆಂದು ನಂಬಿಕೆ ಇಟ್ಟ ದಾಸನ ಇಂಥ ಬಟ್ಟೆಯೊಳಗೆ ದೂಡಿ ಅ.ಪ. ಅನ್ಯರಿಗಳುಕದ ಶೌರ್ಯ ಸ್ವಜನೋನ್ನತವಾದ ಗಾಂಭಿರ್ಯ ಜನ ಸನ್ನುತವಾಗಿಹುದಾರ್ಯ ನಿನ್ನ ಸನ್ನುತಿ ಗೃಹ ಚಾತುರ್ಯಗಳ ತನ್ನಂತೆ ಕರುಣಿಸಿ ತಾವಕನೆನಿಸಿರೆ ಕುನ್ನಿಯ ಮರಿಗಿಂತ ಕಡೆಮಾಡಿ ದಾರಿಯೊಳ್ 1 ತಲ್ಪದಿಂದೆದ್ದವಸರದಿ ಬೊಮ್ಮ- ಕಲ್ಪೇಶ ನೀನಿಟ್ಟ ಕ್ರಮದಿ ಸ್ವಲ್ಪ ಸ್ವಲ್ಪವಾದರು ಕವರ್i ನೆವದಿ ನಾನಾ ಕಲ್ಪ ಪೂಜೆಯಗೈದು ಮುದದಿ ಶೇಷ ಕಲ್ಪೇಶ ನಿನಗೆ ಸಮರ್ಪಿಸಿ ಬಾಳ್ದನ- ನಲ್ಪ ಜನರಿಗೆ ನಿತ್ಯಾಲ್ಪರಿವೊಲ್ಮಾಡಿ 2 ಬಂದ ಸಜ್ಜನರನು ನೋಡಿ ಮಾನ- ದಿಂದ ಕುಳ್ಳಿರಿಸಿ ಮಾತಾಡಿ ಮತ್ತೆ- ನ್ನಿಂದಾದ ಸತ್ಕಾರ ಮಾಡಿ ತಿಳಿ- ದಂದದಿ ನಿನ್ನನು ಪಾಡಿ ಇದೆ ಮುಂದೆ ತಾರಕವೆಂದಾ ನಂದಗೊಡಿರಲೆನ್ನ ಹಂದಿಯಂದದಿ ಮೂಲೆ ಹೊಂದಿಸಿ ಕೆಡ ಹಾಕಿ 3 ಸಂಧ್ಯಾದಿಗಳನೆಲ್ಲ ಬಿಟ್ಟು ಅನ್ನ ತಿಂದು ಬೀಳುವೆ ಲಜ್ಜೆಗೆಟ್ಟು ರೋಗ ಬಂಧಿತ ನರಗಳ ಕಟ್ಟು ಶೂಲ ದಂದದಿ ಬೀಳುವ ಪೆಟ್ಟು ಇನ್ನು ಮೋಚಿಸು ಹಾಗಾ- ದಂದ ಕಾಲಕೆ ಪದ ಹೊಂದಿಸಿಕೊಳದೆನ್ನ 4 ಮರೆಯಲಿಲ್ಲೆಂದಿಗೂ ನಿನ್ನವೆಂಬು- ದರಿಯೆಯ ಲೋಕಪಾವನ್ನ ಇನ್ನು ಕರುಣ ಬಾರದ್ಯಾಕೊ ರನ್ನ ಶೇಷ ನಿತ್ಯ ಪ್ರಸನ್ನ ಬಹು ಕರಗುತ ಕಣ್ಣೀರ ಸುರುವಿದ ಮಾತ ಮರೆವುದುಚಿತವಲ್ಲ ಪರಮ ದಯಾಂಬುಧಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿಶರಣರು ನಮ್ಮವರು ಭವ ಶರಧಿಯ ಜಿಗಿದರು ನಮ್ಮವರು ಪ ಪರಮನ ಚರಣದಿ ಅರಿವಿಟ್ಟುರತರ ದುರಿತದಿಂದುಳಿದರು ನಮ್ಮವರು ಅ.ಪ ನಿತ್ಯತೃಪ್ತರು ನಮ್ಮವರು ಜಗ ಮಿಥ್ಯೆಂದರಿತರು ನಮ್ಮವರು ನಿತ್ಯ ಸರ್ವೋತ್ತಮ ಹರಿಯೆಂಬ ವೃತ್ತಿ ಬಲಿಸಿದರು ನಮ್ಮವರು 1 ಸತ್ತು ಚಿತ್ತರು ನಮ್ಮವರು ಮಹ ನಿತ್ಯ ಮುಕ್ತರು ನಮ್ಮವರು ಮುಕ್ತಿದಾಯಕನಂ ಗುರ್ತಿಟ್ಟರಿಯುವ ಸತ್ವ ಕಾಲಗಳು ನಮ್ಮವರು 2 ನಿರ್ಮಲಾತ್ಮಕರು ನಮ್ಮವರು ನಿಜ ಧರ್ಮ ನಿರತರೈ ನಮ್ಮವರು ಬೊಮ್ಮನಯ್ಯನ ಮರ್ಮ ತಿಳಿದು ದು ಷ್ಕರ್ಮವ ಗೆಲಿದರು ನಮ್ಮವರು 3 ದೋಷದೂರರು ನಮ್ಮವರು ನಿ ರಾಸೆ ತಾರರು ನಮ್ಮವರು ಹೇಸಿದೈವಗಳ ಆಶಿಸಿ ಬೇಡದ ಕೇಶವನ ದಾಸರು ನಮ್ಮವರು 4 ಭಜನಾನಂದರು ನಮ್ಮವರು ಸ್ಥಿರ ನಿಜ ಪದವರಿದರು ನಮ್ಮವರು ಕುಜನ ಕುಹಕಿಗಳ ಗಜಿಬಿಜಿಗಳುಕದೆ ಸುಜನರೆನಿಸಿದರು ನಮ್ಮವರು 5 ಭೂರಿ ಶೀಲರು ನಮ್ಮವರು ದುಷ್ಟ ಕೇರಿಯ ಮೆಟ್ಟರು ನಮ್ಮವರು ಸಾರಸಾಕ್ಷನ ಸವಿಸಾರವರಿದು ಪಾದ ಸೇರಿಕೊಂಡಿರುವರು ನಮ್ಮವರು 6 ಸದಮಲಾನಂದರು ನಮ್ಮವರು ದು ರ್ಮದವ ನೂಕಿದರು ನಮ್ಮವರು ಅಧಮತನದಲಿಂದೊದರುವ ಹೊಲೆಯರ ಎದೆಯ ತುಳಿವರೈ ನಮ್ಮವರು 7 ಮೋಸಕೆ ಸಿಲ್ಕರು ನಮ್ಮವರು ಯಮ ಪಾಶವ ಗೆಲಿದರು ನಮ್ಮವರು ಈಶನ ತಿಳಿದರು ನಮ್ಮವರು 8 ಸುಗಣ ಸಂತರು ನಮ್ಮವರು ಮಹ ಭಗವದ್ಭಕ್ತರು ನಮ್ಮವರು ರಘು ಶ್ರೀರಾಮ ಜಗಸರ್ವೋತ್ತಮೆಂದು ಪೊಗಳುತ ನಲಿವರು ನಮ್ಮವರು 9
--------------
ರಾಮದಾಸರು
ಎಲ್ಲಿ ಪೋಯಿತೊ ಅವಿದ್ಯಾಪಟಲ ಕಾಣೆ ನಾನುಶರಣರ ಪಾದರಜಸ್ಪರುಶ ಸಂಭೂತವಾದಅನಘಒಡನೆ ಮಧ್ವಮುನಿ ಸರೋವರದಿತೇರಿನೊಳಗೆ ನಿನ್ನ ವಿಹಾರ ಮೈ-ಅನಾದಿಯಿಂದ ಬಂದದ್ದುಅದರ ಸಂಬಂಧಿಗಳುಕದನಗ-
--------------
ಗೋಪಾಲದಾಸರು
ಬಣ್ಣಿಸಲಳವೇ ನಿನ್ನ ಪಬಣ್ಣಿಸಲಳವಲ್ಲ ಭಕುತವತ್ಸಲ ದೇವಪನ್ನಗ ಶಯನ ಪಾಲ್ಗಡಲೊಡೆಯನೆ ರಂಗಅ.ಪಅಸಮ ಪರಾಕ್ರಮಿ ತಮನೆಂಬ ದೈತ್ಯನುಶಶಿಧರನ ವರದಿ ಶಕ್ರಾದ್ಯರಿಗಳುಕದೆಬಿಸಜಸಂಭವನ ಠಕ್ಕಿಸಿ ನಿಗಮವ ಕದ್ದುವಿಷಧಿಯೊಳಡಗಿರಲ್ ಒದಗಿ ಬಂದಮರರುವಸುಧೀಶ ಕಾಯಬೇಕೆಂದೆನಲವನ ಮ -ರ್ದಿಸಿ ವೇದಾವಳಿಯ ತಂದು ಮೆರೆದ ದಶದಿಸೆಯೊಳು ಬೊಮ್ಮಗಂದು ವೇದವ ಕರುಣಿಸದೆ ಕಂಜಾಕ್ಷ ಕೇಶವ ದಯಾಸಿಂಧು 1ಇಂದ್ರಾದಿ ಸಕಲ ದೇವತೆಗಳೆಲ್ಲರು ದೈತ್ಯವೃಂದವೊಂದಾಗಿ ಮತ್ಸರವ ಮರೆದು ಕೂಡಿಬಂದು ನೆರೆದುಮುರಹರ ನಿನ್ನ ಮತದಿಂದಮಂದರಾದ್ರಿಯ ಕಡೆಗೋಲ ಗೈಯ್ದತುಳ ಫಣೀಂದ್ರನ ತನು ನೇಣಿನಂದದಿ ಬಂಧಿಸಿ ||ಸಿಂಧು ಮಥಿಸುತಿರಲು ಘನಾಚಲವಂದು ಮುಳುಗಿ ಪೋಗಲು ಬೆನ್ನಾಂತು ಮುಕುಂದ ನೆಗಹಿದೆಸುರರು ಜಯ ಜಯವೆನಲು2ಖಳಶಿರೋಮಣಿ ಕನಕಾಕ್ಷನೆಂಬಸುರ ನಿನ್ನೊಳು ಸೆಣಸುವೆನೆಂಬ ಗರುವದಿಂದಲಿ ಬಹುಬಲದಿಂದುದ್ಧಟನಾಗಿ ದಿವಿಜರನಂಜಿಸಿಇಳೆಯ ಕದ್ದು ರಸಾತಳದೊಳಗಿರೆ ನಿನ್ನಪೊಳೆವ ಕೋರೆಗಳಿಂದ ತಿವಿದು ರಕ್ಕಸನ ಅ ||ಪ್ಪಳಿಸಿ ಕೊಂದವನ ದಿಂಡು ಗೆಡಹಿ ಮಹೀಲಲನೆಯೊಡನೆ ಕೈಕೊಂಡು ಪಾಲಿಸಿದೆ ಪೂಮಳೆಗರೆದರುಅಮರರು ನೆಲೆಗೊಂಡು3ಹಗಲಿರುಳಳಿವಿಲ್ಲದಸುರ ಕಶಿಪು ತನ್ನಮಗನ ಹರಿಯ ತೋರೆಂದಧಿಕ ಬಾಧಿಸುತಿರೆಬಗಿದು ಕಂಬವನೊಡೆದಧಿಕ ರೋಷಾಗ್ನಿ ಕಾರ್ಬೊಗೆ ಸೂಸಿ ಗಗನಮಂಡಲ ಧಗ - ಧಗಧಗಧಗಿಪ ಪ್ರಜ್ವಾಲೆಯನುಗುಳಿ ಹಿರಣ್ಯಕನ ಕುರುಗುರಿಂದೊಡಲ ಸೀಳಿ ಕರುಳಮಾಲೆತೆಗೆದು ಕಂಠದಲಿ ತಾಳಿ ಒಪ್ಪಿದೆನರಮೃಗರೂಪೀ ತ್ರಾಹಿಯೆನಲು ಶಶಿಮೌಳಿ 4ಕುಲಿಶಧರನ ಗೆದ್ದು ಕುವಲಯದೊಳು ಭುಜಬಲವಿಕ್ರಮದಲಿ ಸೌಭಾಗ್ಯದುನ್ನತಿಯಿಂದಬಲಿ ವಾಜಿಮೇಧ ಗೆಯ್ಯಲು ವಟುವೇಷದಿಂದಿಳಿದು ತ್ರಿಪಾದ ಭೂಮಿಯ ದಾನವ ಬೇಡಿಬಲುಹಮ್ಮ ಮುರಿಯಬೇಕೆಂದವನ ಶಿರಮೆಟ್ಟಿ ||ನೆಲನ ಈರಡಿಮಾಡಿದೆ ಚರಣವಿಟ್ಟುಜಲಜಜಾಂಡವನೊಡೆದೆ ಅಂಗುಷ್ಟದಿಸುಲಲಿತಸುಮನಸ ನದಿಯ ನೀ ಪಡೆದೆ5ಪೊಡವಿಪತಿಗಳೊಳಗಧಿಕ ಕಾರ್ತವೀರ್ಯಕಡುಧೀರ ದೇವ ದೈತ್ಯರಿಗಂಜದವನ ಬೆಂಬಿಡದೆ ಸಂಗ್ರಾಮದೊಳಧಿಕ ಸಮರ್ಥನಹೊಡೆದು ತೋಳ್ಗಳ ಕುಟ್ಟಿ ಕೆಡಹಿ ಆಗಸದೊಳುಮೃಢಮುಖ್ಯ ದೇವಸಂತತಿ ನೋಡೆ ಕ್ಷತ್ರಿಯರಪಡೆಯನೆಲ್ಲವ ಸವರಿ ಮಾತೆಯ ಶಿರಕಡಿದು ತತ್ಪತಿಗೆ ತೋರಿ ಪಿಡಿದೆ ಗಂಡುಗೊಡಲಿಯ ಕರದಿಬಲ್ಲಿದ ದನುಜಾರಿ6ದಶರಥರಾಯ ಕೌಸಲ್ಯಾನಂದನನಾಗಿಋಷಿ ವಿಶ್ವಾಮಿತ್ರನಧ್ವರವ ರಕ್ಷಿಸಿಘನವಿಷಕಂಠಧನುವ ಖಂಡಿಸಿ ಜಾನಕಿಯ ತಂದುತ್ರಿಶಿರದೂಷಣ ಖರರಳಿದು ವಾಲಿಯನಂದುನಿತಿ ಶಾಸ್ತ್ರದಿಂದ ಸಂಹರಿಸಿ ಸಾಗರವ ಬಂಧಿಸಿ ರಾವಣನ ಶಿರವ ಕತ್ತರಿಸಿ ರಂಜಿಸುವ ಲಂಕಾಪುರವ ವಿಭೀಷಣಗೆಎಸೆವ ಪಟ್ಟವ ಕಟ್ಟಿದೆಲೆ ದೇವಗರುವ 7ದೇವಕಿ ವಸುದೇವರಲ್ಲಿ ಜನಿಸಿ ಲೋಕಪಾವನಗೆಯ್ದು ಪನ್ನಗನ ಪೆಡೆಯ ಮೆಟ್ಟಿಗೋವಳನಾಗಿ ಗೋವರ್ಧನ ಗಿರಿಯೆತ್ತಿಮಾವ ಮಲ್ಲರ ಕೊಂದು ಪಾರಿಜಾತವ ತಂದುಆ ವಿಪ್ರನಲಿ ಓದಿ ಪೋದಪತ್ಯವನಿತ್ತ ||ತಾವರೆದಳಸುನೇತ್ರ ತ್ರಿಭುವನ ಸಂಜೀವಪರಮ ಪವಿತ್ರ ಶ್ರೀ ರುಕ್ಮಿಣಿದೇವಿ ಮನೋಹರ ಶುಭನೀಲಗಾತ್ರ 8ಸರಸಿಜಾಸನಭವ ಇಂದ್ರಾದಿಗಳುಕದೆದುರುಳ ದಾನವರಿರಲಂದು ಖೇಚರದೊಳುನಿರುಪಮ ನೀನೆ ಒಂದೊಂದು ರೂಪಗಳಿಂದಹರಗೆ ಸಹಾಯವಾಗಿ ದನುಜಸ್ತ್ರೀಯರ ವ್ರತಪರಿಹಾರ ಮಾಡಿ ಆಯಾಸವಿಲ್ಲದಲೆ ಮುಪ್ಪುರವ ಅಳಿದ ನಿಸ್ಸೀಮ ಅಖಿಳಶ್ರುತಿಯರಸೆ ಕಾಣದ ಮಹಿಮ ಹೇಸಾಮಜವರದ ಸುಪರ್ಣವಾಹನ ಸಾರ್ವಭೌಮ 9ಮಣಿಮಯ ಯುಕ್ತ ಆಭರಣದಿಂದೆಸೆವ ಲಕ್ಷಣವುಳ್ಳ ದಿವ್ಯ ವಾಜಿಯನೇರಿಧುರದೊಳುಕುಣಿವ ಮೀಸೆಯ ಘೋರವದನ ಖಡ್ಗ ಚರ್ಮವನು ಕೊಂಡು ದ್ರುಹಿಣಾದಿಗಳು ಪೊಗಳಲುಕಲಿದನುಜರೆಲ್ಲರನೊಂದೆ ದಿನದೊಳು ಸವರಿದ ||ರಣಭಯಂಕರ ಪ್ರಜಂಡ ಮೂಜಗದೊಳುಎಣೆಗಾಣಿನೆಲೊಉದ್ದಂಡ ಕಲ್ಕಿ ದಿನಮಣಿ ಕೋಟಿತೇಜ ದುಷ್ಕøತ ಕುಲ ಖಂಡ10ಚಿತ್ತಜನಯ್ಯನೆ ಚಿನ್ಮಯ ಗಾತ್ರನೆಉತ್ತಮದರ ಚಕ್ರ ಗದೆ ಜಲಜಾಂಕನೆಸುತ್ತಲು ಅರಸಲು ನಿನಗೆಲ್ಲಿ ಸರಿಕಾಣೆಹೊತ್ತು ಹೊತ್ತಿಗಾದಿತ್ಯರಬಿನ್ನಪಕೇಳಿಹತ್ತವತಾರದಿ ಅಸುರರ ಮಡುಹಿದೆನಿತ್ಯ ತ್ರಿಸ್ಥಾನವಾಸ ವಾಗಿಹ ಸರ್ವಭಕ್ತರ ಮನೋವಿಲಾಸ ಸಲಹೋ ಪುರುಷೋತ್ತಮಪುರಂದರ ವಿಠಲ ತಿರುಮಲೇಶ11
--------------
ಪುರಂದರದಾಸರು