ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂತರಾಜರು ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ಪ. ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ಅ.ಪ. ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ 1 ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ 2 ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ 3
--------------
ಸಿರಿಗುರುತಂದೆವರದವಿಠಲರು
ಶತ್ರುಭಯ ಪರಿಹರಿಸೊ ಭೂತರಾಜ ಪ ಭವಕೆ ಭೀಕರ ಭಾವಿ ಭೀಮನ ಭಜಿಪ ಭೋಜಾ ಸುತೇಜಾ ಅ.ಪ. ಇಂದು ನೀನೆ ನಾನೆಂದು ಕಮರಿ ಕೂಪದಿ ನೊಂದೆನೊ ಭಾವಿ ನಂದಿವಾಹನ ಮಂಗಳ ಪ್ರದ ನೀಲಕಂಠಾ 1 ಇಲ್ಲೆಲ್ಲಿ ಸರ್ವಸ್ಥಳದಲ್ಲಿ ವ್ಯಾಪ್ತವಾಗಿಹ ನಿನ್ನ ಲೋಲ ಮೂರುತಿಯ ನೆನೆವೆ ಫಾಲನಯನಾ ಪಾಲಿಗೇ ಪಾಲನೆಂತೆಂದು ಕಾಲಮೀರದೆ ಚಲಿಸದೆಲೆ ಬಾರೊ ಗರಳಧಾರಿ 2 ಶ್ರೀಕೃಷ್ಣದಾಸನೆ ನಿನ್ನ ಇಷ್ಟನೆಂತೆಂದು ಮನಮುಟ್ಟಿ ಭಜಿಸುವೆನೊ ಚಾರುದೇಷ್ಣೆಪಾಲಾ ದಿಟ್ಟ ಗುರು ಕೃಷ್ಣವಂದಿತ ತಂದೆ-ವರದಗೋಪಾಲವಿಠ್ಠಲನ ಸಹಜ ಬಂದು 3
--------------
ತಂದೆವರದಗೋಪಾಲವಿಠಲರು