ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಶಂಕರನೆ ಪಾರ್ವತಿ ಪತೆ ಪಾಲಿಸು ಶಂಕರನೆ ಪ. ಹರಚರ್ಮಾಂಬರ ಗೌರಿ ಮನೋಹರ ಸುರನರ ವಂದಿತ ಗರಳಕಂಧರನೆ 1 ಮನದಭಿಮಾನಿಯೆ ಸನುಮತದಲಿ ಎನ್ನ ಮನದಲಿ ಶ್ರೀ ಹರಿ ವನಜ ಪಾದವ ತೊರೋ2 ಪುಟ್ಟ ಮೊಮ್ಮಗ ನೀನೆ ತುಷ್ಟಿಯಿಂದಲಿ ಕಾಯೊ 3
--------------
ಅಂಬಾಬಾಯಿ
ಪೊರೆಯೊ ಶಂಕರಾ | ಕರುಣಾ ಸಾಗರ |ದುರಿತಸಂಹರ | ಶಿವೆ ಮನೋಹರ ಪಕರಿಚರ್ಮಾಂಬರ |ಪೊರೆದಿಗಂಬರ ||ಗರಳಕಂಧರ | ಚಂದ್ರಶೇಖರ 1ನಿಟಿಲನೇತ್ರನೆ | ಜಟಾಧಾರನೆ |ನಟ ಮಹೇಶನೇ | ಸ್ಮರಿಪೆ ನಿನ್ನನೆ 2ವೃಷಭವಾಹನಾ | ಭಸ್ಮಲೇಪನ |ಪಶುಪತೀಶನಾ | ನುತಿಸೋ ಅನುದಿನ3ಉರಗಕುಂಡಲ|ನರರುಂಡಮಾಲ |ಕರದೊಳ್ ತ್ರಿಶೂಲ | ಕೈಲಾಸ ಗಿರಿಪಾಲ 4ಅಂಧಕಗಜಾಸುರ | ರೆಂದೆಂಬ ದುರುಳರ |ಹೊಂದಿಸಿ ತ್ರಿಪುರರ | ಜಗದಿ ಮೆರೆದನೀಶ್ವರ5ದೇವ ದೇವೇಶನಾ | ಸೇವಿಸುತಿರೆ ಮನ |ಕಾಯ್ವನನುದಿನ | ಗೋವಿಂದದಾಸನ 6
--------------
ಗೋವಿಂದದಾಸ
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ