ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಟವಳಿಗಾರನಮ್ಮ ಪ ನಂದ ಗೋಪ್ಯಮ್ಮ ಕೇಳೆ - ನಿನ್ನ ಮಗ ಎಂಥ ಟವಳಿಗಾರನಮ್ಮ ಅ ಹಣವ ಕೊಟ್ಟೇನೆಂದುಗುಣದಿಂದ ಎನ್ನ ತಂದಹಣವ ಕೇಳಿದರಲ್ಲಿ - ಹಣವೆ ?ತಡೆಯಲಾರದ ತಲ್ಲಣವೆ ?ಕುದುರೆ ಮೇಲಿನ ಪಲ್ಲಣವೆ ?ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? - ಹೋಗೆನುತಾನೆ 1 ಕೊಪ್ಪಾನೆ ಕೊಟ್ಟೇನೆಂದುಒಪ್ಪಿಸಿ ಎನ್ನ ತಂದಕೊಪ್ಪಾನ ಕೇಳಿದರಲ್ಲಿ - ಕೊಪ್ಪ ?ಊರಮುಂದಿನ ತಿಪ್ಪ ?ಕೇರಿಯೊಳಗಿನ ಕೆಪ್ಪ ?ಕೆರೆಯೊಳಗಿನ ಹುಳಿಸೊಪ್ಪ ? - ಹೋಗೆನುತಾನೆ2 ಬಳೆಯ ಕೊಟ್ಟೇನೆಂದುಬಲು ಮಾತಿನಲಿ ತಂದಬಳೆಯ ಕೇಳಿದರಲ್ಲಿ - ಬಳೆಯೆ ?ಊರ ಮುಂದಿನ ಗಳೆಯೆ ?ಗದ್ದೆಯೊಳಗಿನ ಕಳೆಯೆ ?ಕೈಕಾಲ ಹಿಡಿದು ಸೆಳೆಯೆ ? - ಹೋಗೆನುತಾನೆ 3 ವಾಲೆ ?ಕನ್ನಡಿಯ ಕಪೋಲೆ ?ಹೇಳು ಸುವ್ವಿ ಸುವ್ವಾಲೆ ?ನಿನ್ನ ಕಾಲಿಗೆ ಸಂಕೋಲೆ ? - ಹೋಗೆನುತಾನೆ 4 ಕಡಗವ ಕೊಟ್ಟೇನೆಂದುಸಡಗರದಿಂದ ತಂದಕಡಗ ಕೇಳಿದರಲ್ಲಿ - ಕಡಗ ?ಅಂಬರದ ಗುಡುಗ ?ಮುಂಗೈ ಮೇಲಿನ ಗಿಡುಗ ?ಎತ್ತಿನ ಮ್ಯಾಲಿನ ಧಡಗ ? - ಹೋಗೆನುತಾನೆ 5 ಬುಗುಡಿಯ ಕೊಟ್ಟೇನೆಂದುರಗಡು ಕಿವಿಹಿಂಡಿ ತಂದಬುಗುಡಿ ಕೇಳಿದರಲ್ಲಿ - ಬುಗುಡಿ ?ಪಾಂಡವರಾಡಿದ ಪಗಡಿ ?ಮೂಗಿಂದ ಸುರಿವ ನೆಗಡಿ ?ಛಿ ! ನೀನೆಂಥ ಧಗಡಿ ? - ಹೋಗೆನುತಾನೆ 6 ಆದಿಕೇಶವನ ಮೇಲೆಆಣೆಯಿಟ್ಟು ಕರೆತಂದಆಣಿ ಎಲ್ಲಹುದೆಂದು ತೋರ್ದಆನಂದದಿಂದಲಿ ಬೆರೆದಬೀದಿಗೆ ಬಂದು ಕರೆದಹೀಂಗೆ ಧರೆಯೊಳು ಮೆರೆದ - ಶ್ರೀ ಕೃಷ್ಣರಾಯ 7
--------------
ಕನಕದಾಸ
ಪಾಲಿಪರೊಬ್ಬರಿಲ್ಲ ಪ ದಂಡಾದಿ ರಾಜ್ಯವು ಕೆಟ್ಟು ಪೋಕ ಪುಂಡರು ಹೆಚ್ಚಿ ಮಾರ್ಗವತೋರಿ ಕೊಟ್ಟು ಪೆಂಡಾರರಿಗೆ ಸುಲಿಗೆ ಕೊಟ್ಟು ಭೂ ಮಂಡಲದೊಳಗಣ ಜನರೆಲ್ಲ ಕೆಟ್ಟು 1 ಎತ್ತು ಮುಟ್ಟುಗಳೆಲ್ಲ ಹೋಗಿ ಬೀಳು ಬಿದ್ದು ಗದ್ದೆಯ ಪೈರು ನಿಸ್ಥಳವಾಗಿ ತುತ್ತುರಿಗಳು ಸುಟ್ಟು ಹೋಗಿ ದಂಡು ನಿತ್ತು ಪ್ರಜೆಗೆ ಮನೆ ಮುಖವಿಲ್ಲದಾಗಿ 2 ಕರಿದೋ ಬಿಳಿದೋ ಕಾಣೆ ಕ್ಷೀರ ಕೊಡುವ ತರುಗಳಿಲ್ಲವು ಮರ ಒಣಗಿ ಅರಮನೆ ಯತ್ತಣಿಂ ಘೋರ ಕರೆ ಕರೆಯೊಳು ಬಂದಿತಯ್ಯ ಗ್ರಹಚಾರ 3 ಗಂಜಿ ಗಾಸ್ಪದವಿಲ್ಲವಾಯ್ತು ಮೂರು ಸಂಜೆಯ ದೀಪಕೆ ಕೊಳ್ಳಿ ಬೆಳಕಾಯ್ತು ಅಂಜನ ಪಾತ್ರೆ ಹೆಚ್ಚಾಯ್ತು ಬದುಕಲು ನಾಲ್ಕು ವರ್ಣ ಒಂದಾಯ್ತು 4 ಕಾಲಗತಿಯು ಬಲು ಬಿರುಸು ಮುಂದೆ ಬಾಳುವ ಜನರಿಗೆ ನೃಪರಿಂದ ಹೊಲಸು ಶೂಲಿ ಸಾಯುಜ್ಯವ ಬಯಸು ಲಕ್ಷ್ಮೀ ಲೋಲನ ನಾಮವ ಮನದೊಳುಚ್ಚರಿಸು 5
--------------
ಕವಿ ಪರಮದೇವದಾಸರು
ಪ್ರಾಣಕ್ಕೆ ಕಡೆಗಾಲ ಬಂದಿತೋ ಶಿವ ಶಿವ ಇನ್ನೇನಿನ್ನೇನು ಬೋಣನ ಸಗದ್ದೆಯೊಳಿರುತಿದೆ ನಾಡಿನಲಿನ್ನೇನಿನ್ನೇನು ಪ ಬಂತು ಇನ್ನೇನಿನ್ನೇನು ಮನೆಯೊಳು ಸಿಕ್ಕಿದೆ ಜಾರಲಿ ಕಣಿಯಿಲ್ಲವಿನ್ನೇನಿನ್ನೇನು ದನ ಕರುಗಳ ನೊಂದ ನುಳಿಸದೆ ವೈದ್ಯರು ಇನ್ನೇನಿನ್ನೇನು ಜನರೆಲ್ಲ ಕೈಸೆರೆಯನು ಸಿಕ್ಕಿ ಹೋಯಿತು ಇನ್ನೇನಿನ್ನೇನು 1 ಅಂಗಳದೊಳು ಪಾದವಿಕ್ಕೀತು ಜನರಿಗೆ ಇನ್ನೇನಿನ್ನೇನು ಭಂಗಾರವ ತನ್ನಿರೆಂದು ಝಂಕಿಸಿದರು ಇನ್ನೇನಿನ್ನೇನು ಭಂಗಪಡುವ ಕಾಲಬಂತು ಮಾನವರಿಗೆ ಇನ್ನೇನಿನ್ನೇನು ಅಂಗನೆಯ ಹಿಡಿದೆಳೆದು ಸುಲಿದರು ಇನ್ನೇನಿನ್ನೇನು2 ಉಡಿಗೆ ತೊಡಿಗೆಯನ್ನು ಸೆಳೆದರು ಸತಿಯರ ಇನ್ನೇನಿನ್ನೇನು ಕಡಿದರು ಕೆಲರ ತೋಳ್ ತೊಡೆಗಳ ಶಿರಗಳ ಇನ್ನೇನಿನ್ನೇನು ಕಡಲಿಟ್ಟು ಹರಿದುದು ರಕ್ತ ಪ್ರವಾಹವು ಇನ್ನೇನಿನ್ನೇನು ಕಡುಪಿಂದೆ ಕಾಲ್‍ಕೈಗೆ ಮುರವಾಳವಿಕ್ಕಿದರಿನ್ನೇನಿನ್ನೇನು 3 ಸುಲಿದರು ಚಿನ್ನ ಚಿಗುರು ಬೆಳ್ಳಿ ವಸ್ತುವ ನಿನ್ನೇನಿನ್ನೇನು ಹೊಳಲಿಗೆ ಬೆಂಕಿಯ ನಿಕ್ಕಿದರಲ್ಲಲ್ಲಿ ಇನ್ನೇನಿನ್ನೇನು ಉಳಿದೆನು ಇನ್ನೇನಿನ್ನೇನು ಜಲಜಾಕ್ಷ ನಿನ್ನಯ ಕರುಣ ಕಟಾಕ್ಷದಲಿನ್ನೇನಿನ್ನೇನು 4 ಹಿಂದಂಬರೀಶ ಗಜೇಂದ್ರನ ಕಾಯ್ದಂತೆ ಇನ್ನೇನಿನ್ನೇನು ಇಂದಿನ ದುರಿತವ ಪರಿಹರಿಸಿದೆ ನೀನು ಇನ್ನೇನಿನ್ನೇನು ಬಂಧಿಸಿ ಹೊಡೆದ ಗೋಕುಲವನು ತಂದಿತ್ತೆ ಇನ್ನೇನಿನ್ನೇನು ಮಂದ ಮಾರುತ ನಣುಗನ ಕೋಣೆ ಲಕ್ಷ್ಮೀಶ ಇನ್ನೇನಿನ್ನೇನು 5
--------------
ಕವಿ ಪರಮದೇವದಾಸರು
ತಲ್ಲಿಕಾರರು ನಿನ್ನ ಬಂಟರು ರಂಗನಿಲ್ಲಲೀಸರು ಸಂಸಾರಿಗಳನು ಕೃಷ್ಣ ಪ.ಮಳ್ಳಿದರಾಗಿ ಮಾತಾಡಿ ಬಲುಂಡುಟ್ಟುಇಲ್ಲದ ತಪ್ಪನೆಣಿಸಿ ಹೊರಿಸಿಸುಳ್ಳುಕಳವು ಹಾದರದ ಪಾಪಭವಬಳ್ಳಿಯ ಹರಿದು ಮೊಳೆಯನೊತ್ತಗೊಡರು 1ಕಾಂಚನವಿಡಿದು ಕಕ್ಕಸಬಟ್ಟು ಪೂರ್ವದಸಂಚಿತದಿ ನರಪಶುಗ್ರಾಸದಮುಂಚುವ ಬಣವೆಗೆ ಕಿಚ್ಚಿಕ್ಕಿ ಹುಡಿದೂರಿಪಂಚಾನನಂತೆ ಖೋ ಇಟ್ಟು ಕೂಗುವರು 2ಇದಿರೆದ್ದು ಕರೆದು ಮನ್ನಿಸಿ ಪೂಜಿಸಿಪಾದೋದಕ ಪ್ರೋಕ್ಷಿಸಿಕೊಂಡು ಮರೆಹೊಕ್ಕರೆಬದಿಯ ಸಂಪದ ಬಂದ ಕಬ್ಬು ಬಾಳೆÉ ನೆಲ್ಲುಗದ್ದೆಯ ಸಂಹರಿಸುವರುಪಕಾರಿಗಳು 3ಛಲದಿ ಮಂದಿರ ಹೊಕ್ಕು ಹರಿಸೇವೆ ಗೊಂದಣಗಳಲಿ ಬೇಡಿ ಚಾಮುಂಡೆರೋಡಿಸಿಹೊಲ ಮನೆ ಮಧ್ಯದ ಪಾಮರರ ಹಿಡಿ ತಂದುಬಲು ಕಾಸಿಸಿ ಮುದ್ರೆಯೊತ್ತದೆ ಬಿಡರು 4ಈಪರಿಭವಸುಖಸೂರ್ಯಾಡಿಎಳೆದೊಯ್ದುಶ್ರೀಪದಪುರದಿ ಸೆರೆಯಿಕ್ಕುವರುಶ್ರೀಪ್ರಸನ್ವೆಂಕಟಪತಿ ಮುಖ್ಯ ಪ್ರಾಣೇಶಈ ಪುಂಡರಿಗೆ ಹೇಳೊ ಇವರ ಸಾಕೆಂದು 5
--------------
ಪ್ರಸನ್ನವೆಂಕಟದಾಸರು