ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳಲಾರೆನು ದೇವ ಪಾಪ ತಪ್ಪಿಸಿ ಬೇಗ ಸಂಜೀವ ಕಾಳಭೈರವನಿಗಪ್ಪಣೆಯ ಕೊಡೊ ದೈತ್ಯಕುಲ ಕಾಲ ಬಿಡಿಸುವುದೆನ್ನ ನೋವ ಪ. ನರಹರಿಯೆ ಸರ್ವತ್ರ ಇರುವಂಥ ನಿನಗೆ ನಾ- ನರುಹಲೇನಿಹುದಿನ್ನು ಜೀಯ ಉರಿಯನುಗುಳುವ ಘೋರ ಶರಗಳೋಲ್ ಪ್ರತಿನಿಮಿಷ ವಿರಿವುತಿದೆ ಬಲ್ಲಿ ಮಹರಾಯ ತರಹರಿಸಿ ದಿನದಿನಕೆ ಕರುಗುತಿಹ ಮದ್ದೇಹ ಸ್ಥಿರವಾಗಲೀ ನಿನ್ನ ಪಾಯ ದರ ಚಕ್ರ ಶಾಙ್ರ್ಗನಂದಕ ಚರ್ಮಗದೆಗಳನು ಧರಿಸಿ ವೋಡಿಸು ಶತ್ರುಮಾಯ 1 ಕಾಶೀಶ ಕಳುಹಿಸಿದ ಪೈಶಾಚ ದಕ್ಷಿಣಾಗ್ನಿಯನು ದೋಷವೆಣಿಸದ ಅಂಬರೀಷನಲಿ ಮುನಿದ ದು- ರ್ವಾಸ ಮುನಿಕೃತ ಕೃತ್ರಿಮವನು ನಾಶಗೈದಖಿಳಗುಣ ಭೂಷಣನೆ ನಿನಗೆನ್ನ ಪೋಷಣೆಯು ಬಹು ಭಾರವೇನು 2 ಸರ್ವಶಕ್ತಿಯೆ ನಿನಗೆದುರ್ವಾದ್ಯವುಂಟೆ ಗುರು ಶರ್ವ ಸುರನಾಥ ಮುಖವಂದ್ಯ ಗೀರ್ವಾಣ ಪಕ್ಷಜನ ನಿರ್ವಹಿಸಿ ನೀನೆ ಯೆನ- ಗಿರ್ವೆ ಗತಿಯಾಗಿ ಸುರವಂದ್ಯ ಬರ್ವ ದುರಿತಗಳ ಮಹದೂರ್ವಣೆಗೆ ಪುಡಿಗೈದು ಗರ್ವಿ ವೈರಿಗಳ ಸದೆ ಬಡಿದು ಪೂರ್ವದಿಂದಲಿ ಸೇವೆ ಸ್ವೀಕರಿಸು ಸರ್ಪವರ ಪರ್ವತೇಶನೆ ಬೇಗ ಒಲಿದು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಂಪ್ರದಾಯದ ಹಾಡುಗಳು (ಗುರುವಾರದ ಶುಭದಿನದಂದು) ಅಂಗಿರಾವುತನನ್ನು ನೋಡಿರೊ ನಿತ್ಯ ಮಂಗಳ ಮಹಿಮೆಯ ಪಾಡಿರೊ ಪ. ಗುರುವಾಸರ ಬಂದು ಒದಗಲು ನಾನಾ ಪರಿಯ ಪುಷ್ಪಗಳ ತಂದಿರಿಸಲು ದೊರೆಯು ಗೌರಾಂಗಿಯ ಧರಿಸಲು ನೋಡೆ ದುರಿತ ರಾಶಿಗಳ ಪರಿಹರಿಸಲು 1 ಶಂಖ ಚಕ್ರ ಗದಾಬ್ಜ ಗದೆಗಳನು ನಿಃ- ಶಂಕೆಯಿಂದ ಧರಿಸಿರುವನು ಮಂಕು ಮನುಜರಿಗೆ ದೊರಕುವಾ- ತಂಕಗಳೆಲ್ಲ ಪರಿಹರಿಪನಾ 2 ಇಂದಿರೆಯನು ಮೋಹಗೊಳಿಸುವ ಪೂರ್ಣಾ ನಂದ ವೆಂಕಟರಾಜನಿರುತಿಹ ಚಂದವ ನೆನೆವುತ್ತ ಸ್ತುತಿಸುವ ಭವ ಬಂಧಗಳೆಲ್ಲ ಕತ್ತರಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ