ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗರುಡಧ್ವಜ ಮಾಧವತ್ವಚ್ಚರಣಾಬ್ಜಕೆ ಶರಣು ಪರಿಭವವೆಂದಿಗು ಬಾರದ ತೆರದಲಿ ಸಲಹಿನ್ನು ಪ. ಸರಸಿಜ ಸಂಭವ ಶಂಕರ ಸುರವರ ವಂದ್ಯ ಮರೆಯದಿರೆಂದಿಗು ಕಿಂಪುರುಷಗಣ ವಂದ್ಯ 1 ಅಸಿಧರ ಶಾಙ್ರ್ಞಗದಾಕರ ವರನಂದನಧಾರಿ ಅರಿಪಕ್ಷದ ಮೂಲವ ಕತ್ತರಿಸು ಸುಧಾಕಾರಿ2 ವರವಾಗೀಶ್ವರನೊಳ್ ಸತ್ಕರುಣಾಮೃತನಿಧಿಯ ನಿರುಪಾಧಿಯೊಳಿರಿಸಹಿಪತಿಗಿರಿರಾಯಧ್ವರ ಸದಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಲಾಲಿ ನಿತ್ಯಾನಂದ ಲಾವಣ್ಯ ಕಂದ ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ. ಆದಿ ಮಧ್ಯಾಂತ ವಿದೂರನಾಗಿಹನ ವೇದಾಂತ ವೇದ್ಯ ವೈಭವ ಪಕ್ಷಿಗಮನ ತಾಪ ಕಳಿವವನ ಮೋದದಿ ಪಾಡಿ ತೂಗುವೆನು ಮಾಧವನ 1 ಈರಾರು ದಿಗ್ಗಜವೆಂಟು ಕಾಲುಗಳು ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು ಧಾರಾರೂಪ ಭಾಗೀರಥಿ ಸರಪಣಿ ಸೇರಿಸಿ ಡೋಲ ಶೃಂಗಾರ ಗೈಯುವೆನು 2 ನಿರ್ಮಲವಾದೇಳು ಹಲಿಗೆಗಳಿರುವ ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ 3 ಸೂರ್ಯ ಚಂದ್ರಮರೆಂಬ ಧಾರಾದೀಪಗಳು ತಾರಕಿಗಳು ಸುತ್ತಲಿರುವ ಚಿನ್ಹೆಗಳು ಭವ ಜಯ ಜಯವೆಂಬ ಭರವು ನೀರಜಾಲಯೆ ಕೂಡಿ ಪಾಡುವ ಸ್ವರವು 4 ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ ಪಾಟಲಾಧರ ಮುಕುರರಾಭ ಕಪೋಲ ನಳಿನ ಪತ್ರ ನೇತ್ರ ಜ- ಚಾಪ ಧಾಟಿ ಭ್ರೂಯುಗಳ 5 ಪೂರ್ಣ ಮಾಲಾನಂತ ಪೌರ್ಣಮಿಯ ವಿಧು ವರ್ಣ ಮುಖಾಬ್ಜಸುಪರ್ಣವರೋಹ ಕರ್ಣ ಹೀನ ಕಶಿಪೂ ಪರಿಶಯನ ದು- ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ 6 ಕಂಬು ಸುಗ್ರೀವ ವಿಲಂಬಿತ ವನಮಾಲ ಅಂಬುಜ ಚಕ್ರ ಗದಾಕರ ಹಸ್ತ ಕೌಸ್ತುಭ ಜಗ- ನಾಭ 7 ವಿತತ ರೇಖಾತ್ರಯಯುತಮೃದುದರ ಮಧ್ಯ ಗತ ಕಿಂಕಿಣೀ ಜಾಲ ಕಾಂಚಿ ಕಲಾಪ ಪೀವರೋರು ಸಂ- ಮೂರ್ತಿ 8 ಸಿಂಜನ ಜೀರ ರಂಜಿತ ಚರಣ ಕಂಜಾಂಕುಶಕೇತು ರೇಖಾಲಂಕರಣ ಮಂಜುಳ ಮೃದು ಪಾದತಳ ಮುಕ್ತಾಭರಣ ಸಂಜೀವನ ರಾಜ ಸಂಪ್ರೀತಿ ಕರಣ 9 ಔತ್ತಾನಪಾದಿಯನಾಧಾರಗೊಂಡು ನಿತ್ಯ ತೂಗಾಡುವ ತೊಟ್ಟಿಲ ಕಂಡು ಹಿಂಡು ಬಹು ತೋಷಗೊಂಡು ಸತ್ಯಭಾಮೆಯ ಕಾಂತನಾಡುವ ಚೆಂಡು 10 ಪತಿತ ಪಾವನ ಪರಮಾನಂದ ರೂಪ ಸತತ ತಾನೆ ಪರಿಹರಿಸುವ ತಾಪ ವಿತತ ಮಹಿಮ ವೆಂಕಟಾಚಲ ಭೂ ಗತಿಯಾಗಿ ತೋರುವ ತನ್ನ ಪ್ರತಾಪ 11
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಸನ್ನವದನ ಹಯಸೂದನ ಪಾಲಿಸು ಹಯವದನ ಪ.ಚಂದ್ರಮಂಡಲ ಗ್ರಹಮಾಲಾನಂದ ವಿಶಾಲಇಂದಿರೆರಮಣ ಖಗಗಮನಸ್ಯಂದನಾಂಗದರರವಿಂದ ಗದಾಕರಸುಂದರಗಾತ್ರಧಿ ವಂದ್ಯವಿಧಾತ್ರ 1ನಿಗಮೋದ್ಧಾರಕಾಘ ವಾರಕ ತ್ರಿಜಗರಕ್ಷಕಮೃಗಮುಖನೃದೇಹಿ ಧಾರ್ಮಿಕದ್ಯುಗಶಶಿ ಸಮತೇಜ ದೃಗಯುತ ಗಜರಾಜನಿಗಡ ಶಿಥಿಲಕಾರಿ ಬಿಗಡರ ಭಾರಿ 2ಗುರುವಿನ ಬಾಲ ಪಾಲನಶೀಲ ಸಾಗರಸುತೆಲೋಲಗುರುವಾದಿರಾಜಾರ್ಚಿತ ಪಾದಾಬ್ಜವರಸೋದೆ ಮಠವಾಸ ಸುರಮುನಿ ಪರಿತೋಷಪರಸನ್ನವೆಂಕಟೇಶಹರಿತುರಗಾಸ್ಯ3
--------------
ಪ್ರಸನ್ನವೆಂಕಟದಾಸರು