ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ವೈಭವವೊ ಶ್ರೀನಿವಾಸ ಧೊರೆಯೆನಿನ್ನದೇನು ವೈಭವವೊ ಪ ಸಿರಿಯು ತಾನೆ ನಿಂತು ನಿನ್ನನಿರುತ ಸೇವೆ ಗೈಯ್ಯುತಿಹಳೊಸರಸಿಜಾಸನಾದಿ ಸುರರುಕರವ ಮುಗಿದು ತುತಿಸುತಿಹರೂ 1 ನಾಗರಾಯ ದಿವ್ಯಾಸನನಾಗಿ ಹೆಡೆಯ ಛತ್ರ ಪಿಡಿವಯೋಗಿ ನಾರದ ತುಂಬುರಾರುರಾಗ ಮಾಡಿ ಹಾಡುತಿಹರೊ 2 ಗರುಡ ವಾಯು ಸುತರು ನಿನ್ನಪರಮ ವಾಹನರಾಗಿ ಬಹರುಸುರಮುನಿಗಳು ಸಕಲ ನರರುನಿರುತನಾಮ ಜಪಿಸುತಿಹರು 3 ಮಂಗಳ ವಾದ್ಯಗಳು ಮೊಳಗಿಮಂಗಳಾರುತಿಯಾಗಿ ಬೆಳಗಿತಿಂಗಳು ನೇಸರರು ದಿವ್ಯಮಂಗಳ ದೀವಟಿಗರಾಗಿ 4 ಅಮೃತ ನಿನ್ನ ಪಾನತೋರ ಭಕುತರಾಳೆ ಗದಗುವೀರನಾರಾಯಣನೆ ನಿನ್ನದೇನು ವೈಭವವೊ 5
--------------
ವೀರನಾರಾಯಣ
ಜಯಮಂಗಳಂ ಪ ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ 1 ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ 2 ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ 3 ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ 4 ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ವೀರನಾರಾಯಣನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ 5
--------------
ವೀರನಾರಾಯಣ
ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿಮೇಲಾದ ಕರವೀರವಾಸಿನಿದೇವಿಪ ಬಡಬಡಿಸಿ ಬಂದಿಹೆ ನಾನಿಲ್ಲಿನೋಡಿಕೊಡುವಿ ವರವೆಂದು ಆಸೆಯ ಮಾಡಿಬಿಡಬೇಡ ಮಗನನು ಕರುಣದಿ ನೋಡಿಕೊಡು ನೀ ವರನನು ಸಿರಿಗಳ ನೀಡಿ 1 ಬಡತನದ ಭೂತವ ಎದುರಿಸುವುದು ತಾಯೆತಡೆಯಲಾರೆನು ಇನ್ನು ಕರುಣಿಸಿ ಕಾಯೆಬಿಡದೆ ಭಜಿಪೆ ನಿನ್ನ ಹೇ ಶುಭಕಾಯೆಕೊಡು ನೀ ವರವನು ಧನಗಳನೀಯೆ 2 ಪನ್ನಗ ವೇಣಿನುಡಿಯೆ ಹರಕೆಗಳ ಹೇ ಶುಭವಾಣಿಒಡೆಯ ಗದಗುವೀರ ನಾರಾಯಣನ ಜಾಣಿಕೊಡು ನೀ ವರವನು ವಿಠಲನ ರಾಣಿ 3
--------------
ವೀರನಾರಾಯಣ
ಸೇವೆ ಮಾಳ್ಪೆ ನಾರಾಯಣಈವುದಯ್ಯ ನಿನ್ನ ಚರಣ ಪ ಸುರಮುನಿಗಳಿಗಿದು ದುರ್ಲಭಸಿರಿದೇವಿಗೆ ಮಾತ್ರ ಸುಲಭಕರುಣಿಸು ಹೇ ಕಮಲನಾಭಇರದೆ ಭೌವ್ಯ ನಿನ್ನ ಚರಣ 1 ತ್ರಿಜಗಂಗಳ ಗೆಲ್ದ ಚರಣಭಜಕ ಗುಹಕಗೊಲಿದ ಚರಣರಜತ ನದಿಯ ಹೆತ್ತ ಚರಣಕಲ್ಲಹಲ್ಯೆ ಪೊರೆದ ಚರಣ2 ಕುರುನೃಪನನು ಕೆಡೆದ ಚರಣಉರಗ ಕಾಳಿ ಹಣಿದ ಚರಣಧರೆಗೆ ಮೆರೆದ ಗದಗು ವೀರನಾರಾಯಣ ನಿನ್ನ ಚರಣ 3
--------------
ವೀರನಾರಾಯಣ
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿಮಿಕ್ಕು ಮೀರಿ ಮೂರಕ್ಕರಗಳಕಂಡುನಕ್ಕು ಪಶ್ಚಿಮಗಿರಿ ಪೊಕ್ಕು ಬೆಳಗಿ ಜನಪಮೂರಕಟ್ಟಿಮೂರನು ಅರಶೀರಗುಟ್ಟಿಆರು ಎಂಟನೆ ಅಟ್ಟಿ ಐದು ಏಳನು ಮೆಟ್ಟಿತೋರುವ ಎರಡು ನಾಲ್ಕನು ತೊಲಗಿಸಿದಾತನ1ಲೋಕದ ಕೂಡ ಕೂಡಿಯೆ ವಿವೇಕ ಬೇಡಏಕವೆಂಬುದು ಬಿಡ ಅನೇಕವೆಂಬುದ ನಾಡಮೂಕ ಪದಗಳೆಂದು ನಿರಾಕರಿಸುತಲಿಹನು2ಅಕ್ಷಯಮುಚ್ಚಿ ತೆರದು ತೆರದಕ್ಷಯ ಮುಚ್ಚಿರಕ್ಷಿಸುತಿಪ್ಪ ಭಾಳೇಕ್ಷಣ ತಾನೆಂದು-ಪೇಕ್ಷೆಮಾಡುತ ಸರ್ವವ ನಿರೀಕ್ಷಿಸುತಿರುವವನ3ಮತಗಳ ನೆನೆದು ಶಾಸ್ತ್ರಗಳ ಗೆಲಿದುಪಾತಾಳಕಿಟ್ಟ ಮತಿ ಮೋಕ್ಷಗಳ ಬಿಟ್ಟ ತಿರುಗಿಸಿ ತಿರುಗಿಸಿ ಹುಟ್ಟಸತತ ಕಾಲದಿ ತನ್ನ ಮತಿ ಹಿಡಿಯೆಂಬನ4ಏನುಪಾಯ ಈ ಯೋಗಿಗೆ ಇನ್ನೇನು ನ್ಯಾಯತಾನಾಗದಗುರುಚಿದಾನಂದನ ತಾ ಕಂಡುತಾನೆ ತಾನಾಗಿ ತೋರುವ ನಿಜ ಯೋಗಿಯ5
--------------
ಚಿದಾನಂದ ಅವಧೂತರು