ಒಟ್ಟು 9 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಮೀರುವೆ ಮಾಯವಾ ಪ. ಮಾಯಾ ಕಂತು ಕಂತು ಜನಕ ಹರಿಯೆ ಸಂತತ ಗೃಹಧನ ಭ್ರಾಂತಿಗೆ ಸಿಲುಕುತಾ ತಂತ್ರವಾದೆನು ಸರ್ವತಂತ್ರ ನೀ ಕರುಣಿಸು ಅ.ಪ. ದೇಹವೆ ನಾನೆಂಬ ಮೋಹದಿ ಬಹು ವಿಧ ಮೋಹಗೊಂಡನುದಿನವು ಆಹಾರ ನಿದ್ರಾ ಮೈಥುನಗಳೆ ಗತಿ ಎಂಬ ಹಾಹಾಕಾರವು ಬಿಡದು ಇಹಪರಗಳ ಸನ್ನಾಹ ಒಂದನು ಕಾಣೆ ಗೇಹಾಂಧಕೂಪಮಹಾಹಿಮುಖದಿ ಸಿಕ್ಕಿ 1 ವೇದವಿಹಿತ ಕರ್ಮವಾದರು ಮಾಡದೆ ಸಾಧು ಮಾರ್ಗವ ಮೀರಿದೆ ಮಾದಿಗನಂತೆ ಮನಸಿನಲಿ ಬಹು ವಿಧ ಕಪಟ ತಾಳಿದೆ ವ್ಯಾಧಿ ಪೀಡಿತ ದೇಹ ಬಾಧೆಯ ಸಹಿಸದೆ ಶ್ರೀದ ನಿನ್ನಯ ಪದ್ಮ ಪಾದವೆ ಗತಿಯೆಂಬೆ 2 ಮತಿವಂತ ಜನರ ರಕ್ಷಿಪುದು ದುರ್ಘಟವೆ ಶ್ರೀ- ಪತಿ ನಿನಗುಸುರುವದೆ ಶತಕೋಟಿ ಮಿತ ಜನ್ಮಾರ್ಜಿತ ಪಾಪ ತತಿ ನೀ ಸಂ- ಸೃತನಾಗೆ ನಿಲುವುಂಟೆ ಪತಿತ ಪಾವನನೆಂಬ ಪರಮಾತ್ಮ ಶೇಷಾದ್ರಿ ಪತಿ ನೀನೆ ಗತಿಯೆಂದು ಸತತ ನಂಬಿದೆ ದೇವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯ ಪ ದಾನವಾರಣ್ಯಪಾವಕ ವೀತಶೋಕ ಅ.ಪ. ಆನತೇಷ್ಟ ಪ್ರದಾಯಕ ನಮಿಸುವೆನು ಸದಾ ಮೈನಾಕಿಧರ ಬಿಂಬ ಸುರಮುನಿಕದಂಬ ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ 1 ಶ್ರವಣ ಮಂಗಳನಾಮಧೇಯ ನಿರ್ಜಿತಕಾಮ ಸವನ ದ್ವಿತಿಯರೂಪ ವಿಗತಕೋಪ ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯವಜ್ರನಖ ಪವಿ ದಂಷ್ಟ್ರದರ್ಶ ಭಾರ್ಗವಿರಮಣಗಶನಾ 2 ಆದಿದೇವಾನಂತ ಮಹಿಮನೇ ನಿಶ್ಚಿಂತಾ ಕಾದುಕೋ ನಿನ್ನವರ ವಿಬುಧ ಪ್ರವರಾ ಮೋದಮಯ ಶ್ರೀ ಜಗನ್ನಾಥವಿಠಲರೇಯ ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು 3
--------------
ಜಗನ್ನಾಥದಾಸರು
ನಾ ನಿನ್ನ ಮರೆತರೆ ನೀ ಯನ್ನ ಮರೆವರೆ ದೀನ ವತ್ಸಲ ರಂಗ ದಾನವಾಂತಕ ಕೃಷ್ಣ ಪ ಜ್ಞಾನಗಮ್ಯನೆ ನಿನ್ನ ಧ್ಯಾನ ದೊಳಿಟ್ಟೆನ್ನ ಮಾನದಿಂದಲಿ ಕಾಯೋ ಶ್ರೀನಿವಾಸ ಪ್ರಭುವೆ ಅ.ಪ. ದಿನಕರನ ಜನರು ನೆನೆಯದೆ ಬಿಟ್ಟರೆÉ ಜನರನ್ನು ಬೆಳಗದೆ ದಿನಕರ ಬಿಡುವನೆ ಹೀನವಿಷಯದಿ ಮುಳುಗಿ ತೇಲುವ ಎನ್ನ ನೀನಾಗಿ ಪೊರೆದರೆ ಘನತೆಯಲ್ಲವೆ ದೇವಾ 1 ಪೆತ್ತ ಮಕ್ಕಳು ಬಲು ಕತ್ತೆಗಳಾದರು ಹೆತ್ತ ತಾಯಿಯು ತಾನು ಎತ್ತದೆ ಬಿಡುವಳೆ ಮತ್ತನಾನಾದರು ಉತ್ತಮೋತ್ತಮಸ್ವಾಮಿ ವಾತ್ಸಲ್ಯತೋರಯ್ಯ ಹಸ್ತಿವರದ ಧೊರೆಯೇ 2 ಗೋವತ್ಸಹಾಲಿಗೆ ಗೋವಿನಗುದ್ದಲು ತವಕದಿ ಉಣಿಸದೆ ಗೋವು ಬಿಡುವುದೇ ತವಪಾದ ಕಮಲದಿ ಅವಿನೀತನಾದರೆ ಸುವಿವೇಕ ಜ್ಞಾನವ ಈಯದಿರುವರೇನೋ 3 ಕರಿ ಧೃವ ಭಕ್ತರ ಪೊರೆಯಲಿಲ್ಲವೆ ನೀನು ಘೋರಪಾಪಗಳ ತರಿದೆ ಅಜಾಮಿಳಗೇ ವರವಿತ್ತು ವ್ಯಾಧಗೆ ವರಕವಿಯೆನಿಸಿದೇ ಭಾರವೆ ನಾನಿನಗೆ ಕರುಣಾಸಾಗರ ರಂಗ 4 ಜಯಮುನಿ ಅಂತರ ವಾಯುವಿನೊಳಗಿಪ್ಪ ರಾಯ ಶ್ರೀಕೃಷ್ಣವಿಠಲನೆ ನಂಬಿದೆ ಕಾಯವಚ ಮನದಿ ಜೀಯನೆ ಗತಿಯೆಂಬೆ ನೋಯಿಸದೆ ಭವದಿ ದಯಮಾಡಿ ಸಲಹಯ್ಯ 5
--------------
ಕೃಷ್ಣವಿಠಲದಾಸರು
ನಾನಾಗಿ ನನಗಾಗಿ ನಮಿಸುವೆನು ಬಾಗಿ ನೀನಾಗಿ ಕೃಪೆಮಾಡೋ ದೀನಾನುರಾಗಿ ಪ ನಾನಿನ್ನ ಕೈಗೊಂಬೆ ನೀನೆಗತಿಯೆಂಬೆ ನೀನನ್ನ ಕರೆತಂದೆ ಶ್ರೀನಾಥ ನಾ ಬಂದೆ ಅ.ಪ ತರಳನ ಕರೆತಂದೆ ತರುಣಿಕೂಗಿ [ದರಿಕೆಬಿಡಿಸಿ ಮಾನಿನಿಯ ರಕ್ಷಿಸಿದೆ] ಹರಿಯೊಂದು ಜಲದಲಿ ನರಳಿದಕರೆಗೆ ಕರುಣದೊಳೋಡಿ ಬಂದು ಪೊರೆದೆ ನೀತಂದೆ 1 ಜ್ಞಾನಿಯು ನಾನಲ್ಲ ಮಾನಿಯುಮಲ್ಲ ಧ್ಯಾನದ ರೀತಿಯ ನಾನರಿತಿಲ್ಲ ನಾನಾ ಶಾಸ್ತ್ರಂಗಳ ಕಲಿತವನಲ್ಲ ನೀನೆ ಶರಣೆಂಬೆ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮ ನಿನ್ನಯ ದಿವ್ಯ ನಾಮವೇ ಗತಿಯೆಂಬೆ ಪಾಮರನೆಂದೆನ್ನ ಪಾಲಿಸು ತಂದೆ ಪ. ಸುರರಾಜನಂಗಸಂಗವಗೈದು ಶಿಲೆಯಾದ ವರಮುನಿ ಗೌತಮನರಸಿಯು ನಿನ್ನ ಚರಣಾರವಿಂದ ಸಂಸ್ಪರ್ಶಮಾತ್ರದಿ ದಿವ್ಯ ತರುಣಿಯಾಗಿಹಳೆಂಬ ಪರಿಯ ನಂಬಿದೆನು 1 ಪ್ರಥಮ ವರ್ಣವು ಪಾಪ ತತಿಗಳ ತರಿವುದು ಜತನ ಮಾಡುವುದನ್ಯ ವರ್ಣವೆಂದೆನುತ ನಿತ್ಯ ಸಂಸ್ತುತಿಮಾಳ್ಪವದರಿಂದಾ- ಶ್ರಿತ ಕಲ್ಪತರು ನೀನೆ ಗತಿಯೆಂಬೆ ನಿರತಾ 2 ನಿತ್ಯ ನಿರ್ನಾಮಗೊಳಿಸು ಪನ್ನಗಾಚಲನಾಥ ಪರಿಪೂರ್ಣ ಕೃಪೆಯಿಂದ ಮನ್ನಿಸಿ ಮನಸನ್ನು ನಿನ್ನಲ್ಲಿ ಇರಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ 1 ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ 2 ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ 3 ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು 4 ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ 5 ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ6 ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ 7
--------------
ವ್ಯಾಸರಾಯರು
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5
--------------
ಪ್ರಸನ್ನವೆಂಕಟದಾಸರು
ಯಾಕೆ ಕೈ ಬಿಡುವೆ ದೇವಾ |ತ್ರಿಜಗವನು ಸಾಕುವ ನೀನಭವ ||ಏಕೋ ಮೂರುತಿ ಶ್ರೀ ವೆಂಕಟಪತಿನಿನಗೆ ನಾ ಬೇಕಾದವನಲ್ಲವೆ ಸ್ವಾಮಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಬಾಲನ ಪತಿಕರಿಸಿ ಹಿರಣ್ಯಕನ | ಸೀಳಿ ರಕ್ಷಿಸಿದಂತೆ |ಶ್ರೀ ಲೋಲಾ ಗತಿಯೆಂಬೆ ||ಬ್ರಹ್ಮಸುತನಿಗೆಪಾಲನಮುದ್ರೆಯನಿತ್ತೆ ಸ್ವಾಮಿ |ಸಭೆಯೊಳು ದ್ರೌಪದಿ ಸ್ತುತಿಸೆ ನಿನ್ನ | ಅಭಿಮಾನ ಕಾಯ್ದೆ |ಗಂಡಇಭನಕ್ರನೊಳ .....................................ಧ್ರುವ ಅಂಬರೀಷಅಂಗದವಿಭೀಷಣ |ಪವನಜರುಕ್ಮಾಂಗದ |ಅವರಪಾಲಿಸಿದಂತೆ ರಕ್ಷಿಸು ಬಿಡದೆ ಎನ್ನ ||ಭವಹರಾ ಶ್ರೀ ಶಂಕರನಾತ್ಮಸಖಾ ||
--------------
ಜಕ್ಕಪ್ಪಯ್ಯನವರು