ಬರಿದೆ ಕಾಲವ ಕಳೆದೆ ನರಹರಿಯ ಧ್ಯಾನಿಸದೆ ಪ.
ಪರಿಪರಿಯ ಮೋದದಲಿ ಮರುಳನಂದದಿ ಮೆರೆದೇ ಅ.ಪ.
ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ
ಹಿರಿಯರೊಲಿವಂತುಪಚರಿಸಲಿಲ್ಲ | ಪರಮ ಭಾಗವತರ
ಚರಣಕ್ಕೆ ನಾನೊಮ್ಮೆ | ಶಿರಬಾಗಿ ನಮಿಸಿ
ಪರಿಚರಿಸಲಿಲ್ಲವಲ್ಲಾ 1
ಇನ್ನೆನಗೆ ಗತಿಯಾರು - ಮನ್ನಿಸುವರದಾರು
ಇನ್ನದಾರಲ್ಲಿ ಪೇಳುವೆನೆನ್ನ ದೂರು
ನಿನ್ನನೇ ಮೊರೆಹೊಕ್ಕು ನೀನೆ ಗತಿಯೆಂದಿರುವ
ಎನ್ನ ಮನ್ನಿಸಲುಬೇಕು ಪನ್ನಶೇಷಗಿರೀಶ 2