ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ ಕರ ಪಿಡಿವರೈ ತೋರು ಶೌರೇ ವಾರಿಜಾನಾಭ ಭಯ ತೋರುವರೆ ಕರುಣಾಳು ಬಾರದಿರುವಂಥ ಅಪರಾಧವೇನೆಲೊ ಹರೀ ಪ. ಪರಿ ಮನಸಿನೊಳಗೊಂದು ಪರಿ ವನಜನಯನನೆ ಭಯವ ತೋರಿ ತೋರೀ ಪರಿ ಏನೋ ಬಿನಗುದೈವರ ಗಂಡ ಪರಿಹರಿಸು ಗಂಡಾ1 ಕರಿಯ ನೀರೊಳು ಕಾಯ್ದೆ ಪೊರೆದೆ ನೀರೊಳು ಮನುವ ಧರಣಿ ಪ್ರಹ್ಲಾದರನು ಜಲದಿ ಸಲಹೀ ಬಿರುದು ಪೊತ್ತವ ಎನ್ನ ಪರಿಯನರಿಯೆಯೆ ದೇವ ಪೊರೆವರಿನ್ನಾರು ಹೇ ಕರುಣಾಳು ಶರಣೂ 2 ಮುಳುಗಿಹೆನು ಸಂಸಾರ ಗಣಿಸಲಾಗದ ಕರ್ಮ ಕರವ ಪಿಡಿದೂ ಧಣಿಸು ನಿನ ದಾಸತ್ವ ಧರೆಯೆ ಮೇಲ್ ಡಂಗುರದೀ ಘಣಿಶಾಯಿ ಗೋಪಾಲಕೃಷ್ಣವಿಠಲ ಕೈಪಿಡಿದು 3
--------------
ಅಂಬಾಬಾಯಿ
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು