ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆನಿಸಿ ಅಜಭವರ ತಂದೇ ಪ ಹೊರೆಯ ಲೈತರಲು ಹಂಬಲಿಪ ಪ್ರಲ್ಹಾದಿಲ್ಲ | ಹಿರಣ್ಯ ಕಾಸುರನಿಲ್ಲ | ಸುರರಿಗುಪಟಳವೇನು ಇಲ್ಲ ಸ್ತಂಭ | ಬಿರಿದು ದೋರುವ ಅಹೋಬಲದ ಸ್ಥಳವಲ್ಲ 1 ಸಿರಿಯ ಮೋಹನ ನಿಮ್ಮ ರೂಪವನೆ ಆವರಿಸಿ | ಮರದ ಪೇರ್ಗಳೆಪಾದ ಕೊಂಬುಗಳ ಕರಧರಿಸಿ | ಸಿರಸಾಗ್ರ ಮಧ್ಯುದರ ವೆರಸೀ ಪರ್ಣ| ದಿರುವ ಅವಯವ ಮಾಡಿ ಪಾದರ್ಪೆದ್ರನಿಸೀ2 ಧರೆಗಧಿಕ ಸುಕ್ಷೇತ್ರ ಶೂರ್ಪಾಲಯವೆ ನೋಡಿ | ಮೆರೆಯುತಿಹ ಕೃಷ್ಣ ವೇಣಿಯ ತೀರದಲಿ ಮೂಡಿ | ಹರಗರುಡ ಗಣಪರೋಡಗೂಡಿ ನಲಿವ | ಗುರುಮಹಿಪತಿ ಸ್ವಾಮಿ ಕಾಯೋದಯ ಮಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೌರೀದೇವಿ ಮಾತಾಡೇ ಎನ್ನ ಮೌನದ ಗೌರೀ ಯಾತಕಚಲಮನ ಸೋತವನೊಡನೆ ಮಾತಾಡೇ ಗೌರಿ ಮಾತಾಡೇ ಪ ನಸುನಗೆ ಮುಖವಿದು ಬಾಡಿ ಕೆಂದುಟಿಯು ಎಸೆದಿರಲು ನಾನೋಡಿ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತÀು ಅರಗಿಣಿ 1 ಕ್ಷಣ ಬಿಟ್ಟಿರಲಾರೆ ಅಮ್ಮ ಷಣ್ಮುಖ ಗಣಪರ ತಾಯೆ ನೀ ಬಾರೇ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತು ಅರಗಿಣಿ 2 ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ- ರಾಧವು ಇದ್ದರು ತಾಳೇ ಪಾದ ಕಿಂಕಿಣಿಯೇ ಆದರಿಸುವೆ ನಾ ಆದರಿಸುವೆನೇ 3
--------------
ಶ್ರೀದವಿಠಲರು
ತಿಳಿವುದನ್ನಮಯ ಕೋಶಗಳನು ಇಳೆಯೊಳಚ್ಯುತನ ದಾಸರು ನಿತ್ಯದಲಿ ಪ ಮೇದಿನಿ ಸಲಿಲನ್ನಮಯ ವಿಹಾಯಸ ವಾಯು ಮುಖ್ಯಪ್ರಾಣ ಮನೋಮಯಕೆ ಆದುದು ಮನ ಅಹಂಕಾರ ವಿಜ್ಞಾನಮಯ ವೇದ್ಯ ತತ್ತ್ವಾನಂದ ಮಯಕೆ ಅವ್ಯಕ್ತವನು1 ಕೃತಿ ಸಂಕರು ವಾಸುದೇವ ಮಾಯಾ ಘನ ಸುಲಕ್ಷಣ ಲಕ್ಷ್ಮೀ ನಾರಾಯಣರು ಮುಖ್ಯ ರೆನಿಸುವರು ಪಂಚಕೋಶದಲಿ ಎಂದೆಂದೂ 2 ಪ್ರಾಣಾಪಾನ ವ್ಯಾನೋದಾನ ಸಮಾನ ಪಂ ಚಾನಿಲರೂ ಅಲ್ಲಿಹರು ಮತ್ತು ದಾನವಾದಿಗಳಿಹರು ಭೂತ ಮಾತ್ರ ಕರ್ಮ ಜ್ಞಾನೇಂದ್ರಿಯಗಳು ತನ್ನಿಷ್ಟವಾಗಿಹವಲ್ಲಿ 3 ಅಬುಜ ಭವಾಂಡ ಪಿಂಡಾಂಡಕ್ಕೆ ಈ ತತ್ತ್ವ ಒಂಬತ್ತು ಆವರಣವೆಂದೆನಿಪವು ಕಂಬುಪಾಣಿಯ ರೂಪ ಲಕ್ಷ್ಮೀ ರೂಪವು ಪಂಚ ಇಂಬುಗೊಂಡಿಹವು ಚಿಂತಿಪುದು ಭೂಸುರರು 4 ಭೂಶನೇಶ್ವರ ವರುಣ ಸುರನದಿಗಳನ್ನಮಯ ಕೋಶದೊಳಗಿರುತಿಹರು ಪ್ರಾಣಮಯದಿ ಮೇಷವಾಹನ ಪ್ರವಹವಾಯು ಪ್ರಾವಹಿ ಮಹಾ ಕಾಶಾಧಿಪತಿ ಗಣಪರಧಿಪರೆಂದೆನಿಸುವರು 5 ಕಾಮೇಂದ್ರ ಶಿವ ರತೀಂದ್ರಾಣಿ ಪಾರ್ವತಿ ಮುಖ್ಯ ಈ ಮನೋಮಯಕಧಿಪರೆನಿಸುತಿಹರು ತಾಮರಸಭವ ವಾಯು ವಾಣಿ ಭಾರತಿ ಮುಖ್ಯ ಸ್ವಾಮಿಗಳೆನಿಸುವರು ವಿಜ್ಞಾನಕೋಶದಲಿ 6 ಆನಂದಮಯ ಕೋಶಕಭಿಮಾನಿ ಶ್ರೀನಿವಾಸನು ಪಂಚರೂಪಾತ್ಮಕಾ ಈ ನಿರ್ಜರರೊಳಿದ್ದು ತತ್ತದಾಹ್ವಯನಾಗಿ ಪಾನೀಯಜಾಂಡದೊಳಿಪ್ಪ ಕರುಣೀ 7 ಪೃಥಿವಿ ಗಂಧ ಘ್ರಾಣೋಪಸ್ಥಪ್ಪುರ ಸಂಜೀವಾ ಪ್ರಥಮ ಕೋಶದಿ ವಾಯು ಅಷ್ಟತತ್ತ್ವ ದ್ವಿತೀಯ ಕೋಶದಿ ತೇಜರೂಪ ಚಕ್ಷುಪಾದ ಪ್ರಥಮಾಂಗ ಸ್ಪರ್ಶ ತ್ವಕು ಪಾಣಿ ತತ್ವಗಳಿಹವು 8 ಆಕಾಶ ಶಬ್ದ ಶ್ರೋತ್ರವು ಪಿಂತೆ ಪೇಳ್ದಷ್ಟು ವಾಕು ಪ್ರಾಣಾದಿ ತತ್ತ್ವ ದ್ವಾದಶ ಕಾಮ ಶ್ರೀ ಕಂಠ ತತ್ವ ಮನ ಮನೋಮಯದಿ ವಿಜ್ಞಾನ ಕಮಲ ಭವ ನಂದ ಮಯತೆ ಅವ್ಯಕ್ತವನು 9 ಸ್ಥೂಲ ದೇಹಕೆ ಇನಿತು ಲಿಂಗ ತನುವಿನಲಿ ತತ್ತ ್ವ ಜಾಲ ಸೂಕ್ಷ್ಮಗಳಿಹವು ಗುಣ ಭೇದದಿ ಪೇಳುವೆನು ಅವ್ಯಕ್ತ ಮಹದಹಂಕಾರ ಮನ ಮೇಳೈಸಿಹವು ಸತ್ವಪರಿ ಭೇದದಲಿ 10 ರಜೋಪರಿಚ್ಛೇದದಲಿ ಜ್ಞಾನ ಕರ್ಮೇಂದ್ರಿಯವು ರಜನೀ ಗುಣದ ಮಾತ್ರ ಭೂತ ಇಹವು ಯಜಿಸು ಈ ತತ್ತ್ವ ಮಾನಿ ದಿವಿಜರನರಿತು ವೃಜಿನವರ್ಜಿತನಾಗಿ ಸುಪದವೈದುವಿ ಮನುಜ11 ಭೂಮ್ಯಭ್ರನ್ನ ಮಯನಳನೀಳಾಗಸ ಪ್ರಾಣ ಮಯ ಮ ನೋಮಯ ಮಹಾ ಅವ್ಯಕ್ತ ಸಮ್ಯಗಾನಂದ ವಿಜ್ಞಾನಮಯನೆನಿಸಿ ಗುರು ಸಮೀರನೊಳಗಿದ್ದು ಪಾಲಿಸುವ ಜಗವಾ 12 ಪಂಚಕೋಶದ ವಿವರ ತಿಳಿದ ಮಹಾತ್ಮರಿಗೆ ಕಿಂಚಿತಾದರು ದೋಷ ಬರಲರಿಯದು ಮಾರ್ಗಣ ಪಿತ ಜಗನ್ನಾಥ ವಿಠಲನು ಸಂಚತಾಗಾಮಿ ಕರ್ಮಗಳ ಫಲ ಬಿಡಿಸುವನು 13
--------------
ಜಗನ್ನಾಥದಾಸರು
ಪಾರ್ವತೀ - ಶರ್ವನ ಜಾಯೆ - ಪಾರ್ವತೀ ಪ ದಿವಿಜ ಧ್ವಂಸ | ಶರ್ವಾದಿ ದಿವಿಜೇಡ್ಯಸಾರ್ವಭೌಮನ ಸ್ಮøತಿ | ಸಾರ್ವಕಾಲದಲೀಯೆ ಅ.ಪ. ಪತಿ ಮಾರ ಜನನಿ ತಾಯೇ 1 ಸುರಪ ಗಣಪರ ಮಾತೆ ಶರ್ವೇ | ನಿನ್ನವರ್ಣಿಸಿ ಪೊಗಳಲೆನ್ನಳವೇ | ನೀನೆಕರುಣದಿ ಪೇಳಿಸೆ ಬರೆವೇ | ಎನ್ನಉರುತರ ಅಜ್ಞಾನವ ಬಲ್ಲೆ | ಆಹಕರಣಗಳೊಳು ನಿಂತು | ನಿರುತ ಪ್ರೇರಕಳಾಗಿಹರಿಗುಣ ದ್ಯೋತಕ | ಸ್ಮರಣೆ ಸುಖವ ನೀಯೆ 2 ಮೃಡನಂತರಂಗಳೆ ತಾಯೇ | ಎನ್ನಕಡು ಕರುಣದಿಂದಲಿ ಕಾಯೇ | ಇನ್ನುಧೃಡ ಹರಿ ಭಕುತಿಯ ನೀಯೆ | ಅನ್ಯಬೇಡೆನು ನಾ ಪಾರ್ವತೀಯೇ | ಆಹಮೃಡವಂದ್ಯ ಗುರು ಗೋ | ವಿಂದ ವಿಠ್ಠಲನನಡು ಹೃದಯದಿ ನೋಳ್ಪ | ಧೃಡಮತಿಯನು ಕೊಡೆ 3
--------------
ಗುರುಗೋವಿಂದವಿಠಲರು
ಬೇಡುತಿರ್ದೆನು ಕರುಣದಿ ನೋಡು ವರವನು ನೀಡು ಪ ಅನ್ನಪೂರ್ಣೆ ಸುಗುಣಪೂರ್ಣೆ ನಿನ್ನನು ಹೊರತು ಅನ್ಯರ ಕಾಣೆ 1 ಶರ್ವಜಾಯೆ ಶುಭ್ರಕಾಯೆ ಸರ್ವಮಂಗಳೆ ಗುಹ ಗಣಪರ ತಾಯೆ 2 ಮಾರ ಜನನಿ ಪ್ರಿಯನ ಭಗಿನಿ ಸಾರಿದ ಶರಣರ ಪೊರೆವ ಭವಾನಿ 3
--------------
ಲಕ್ಷ್ಮೀನಾರಯಣರಾಯರು
ರಕ್ಷಿಸು ಮಹಮಾಯೆ ಕರುಣ ಕ- ಟಾಕ್ಷದಿಂದಲಿ ತಾಯೆ ಪ. ದಾಕ್ಷಾಯಿಣಿ ದೈತ್ಯಾಂತಕಿ ವರ ನಿಟಿ- ಲಾಕ್ಷನ ರಾಮಿ ನಿರೀಕ್ಷಿಸು ಜನನೀಅ.ಪ. ವಾಸವಮುಖವಿನುತೆ ರವಿಸಂ- ಕಾಶೆ ಸುಗುಣಯೂಥೇ ಭಾಸುರಮಣಿಗಣಭೂಷೆ ತ್ರಿಲೋಕಾ- ಧೀಶೆ ಭಕ್ತಜನಪೋಷೆ ಪರೇಶೆ1 ಗುಹಗಣಪರಮಾತೆ ದುರಿತಾ- ಪಹೆ ದುರ್ಜನ ಘಾತೆ ಬಹುಕಾಮಿತಪ್ರದೆ ಭಜಕಜನೋರ್ಜಿತೆ ಮಹಿತೆ ಯೋಗಿಹೃದ್ಗುಹನಿವಾಸಿನಿಯೆ2 ಶುಂಭಾಸುರಮಥಿನಿ ಸುರನಿಕು- ರುಂಬಾರ್ಚಿತೆ ಸುಮನಿ ರಂಭಾದಿಸುರನಿತಂಬಿನೀ ಜನಕ- ದಂಬಸೇವಿತಪದಾಂಬುಜೆ ಗಿರಿಜೆ3 ಅಷ್ಟಾಯುಧಪಾಣಿ ಸದಾಸಂ- ತುಷ್ಟೆ ಸರಸವಾಣಿ ಸೃಷ್ಟಿಲಯೋದಯಕಾರಿಣಿ ರುದ್ರನ ಪರಾಕು ಕಲ್ಯಾಣಿ4 ನೇತ್ರಾವತಿ ತಟದ ವಟಪುರ- ಕ್ಷೇತ್ರಮಂದಿರೆ ಶುಭದಾ ಸುತ್ರಾಣಿ ಲಕ್ಷ್ಮೀನಾರಾಯಣಿ ಸ- ರ್ವತ್ರ ಭರಿತೆ ಲೋಕತ್ರಯನಾಯಕಿ5
--------------
ತುಪಾಕಿ ವೆಂಕಟರಮಣಾಚಾರ್ಯ
ರುದ್ರದೇವರು ಇಂದು ಶೇಖರ ಶಿವ ನಂದಿವಾಹನ ಶೂಲಿ ಸ್ಕಂಧಗಣಪರ ತಾತ ದಂದಶೂಕಕಲಾಪ ಪುರಂದರ ಮುಖಸುರ ವೃಂದವಿನುತ ಪಾದಾದಿಂದ ಶೋಭಿತ ದೇವ ಕಂದು ಕಂಧರ ತ್ರಿಪುರ ಸಂದೋಹಹರ ಹರ ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ ಇಂದು ಪೂರ್ತಿಸೋ ಗುರೋ ಗಂಧವಾಹನ ತನಯಾ ಇಂದಿರಪತಿ ಗುರುಜಗನ್ನಾಥವಿಠಲಾ ನಂದಾ ಬಡುವನಿದಕೆ ಸಂದೇಹ ಇನಿತಿಲ್ಲಾ
--------------
ಗುರುಜಗನ್ನಾಥದಾಸರು
ರುದ್ರದೇವರು ಶಿವನೆ ನಾ ನಿನ್ನ ಸೇವಕನಯ್ಯ ದುಮ್ಮಾನ ಬಿಡಿಸಯ್ಯ ಸುಜನ ಸಹಾಯ ಸಿರಿಧರನರಮಯ್ಯ ಪ ಭಾಗವತ ಶಾಸ್ತ್ರವನು ಅವನೀಶಗೆ ಪೇಳ್ದವ ನೀನಲ್ಲವೆ ಅ.ಪ. ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ ಸಾಂಬ ಸುರಪಾದ್ಯರ ಬಿಂಬ ವೈಕಲ್ಯಾಸ್ಪದವನು ಕಳೆದೊಮ್ಮೆಲೆ ವೈಕುಂಠಕೆ ಕರೆದೊಯ್ಯೊ ಕರಿಗೊರಳಾ 1 ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳ ಕಾವ ಸ್ತುತ್ಯಾದ್ರಿಜಾಪತಿ ಜತತೀವನದಾವ ದುರಿತಾಂಬುಧಿ ನಾವ ಕೃತ್ತಿವಾಸ ಉನ್ನತ್ಯವರಾಧಗ - ಳೆತ್ತಿಣಿಸದೆ ಕೃತಕೃತ್ಯನ ಮಾಡೈ 2 ಗಂಗಾಧರ ಷಣ್ಮುಖ ಗಣಪರ ತಾತ ತ್ರೈಲೋಕ್ಯಖ್ಯಾತ ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ ತುಂಗ ಮಹಿಮ ನಿಸ್ಸಂಗ ಹರಿಯದ್ವತೀ ಯಂಗ ಡಮರು ಶೂಲಂಗಳ ಧರಿಸಿಹ 3 ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ ಸಂಚಿಂತನ ಮಾಡುವ ಸಂತತ ನೇಮ ಶ್ರೀರಾಮನಾಮ ಪಂಚಶರಾರಿ ವಿರಿಂಚಿಕುವರ ನಿ - ಷ್ಕಿಂಚನರೊಡೆಯನ ಮಂಚಪದಾರ್ಹನೆ4 ಸ್ಪಟಿಕಾಭ ಕಪಾಲಿ ಕಾಮಿತಫಲದ ಫಲ್ಗುಣಸಖ ಶ್ರೀದ - ವಿಠಲಾಶ್ರಯವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ ಕುಟಿಲರಹಿತ ಧೂರ್ಜಟಿ ವೈಷ¨sಕಧ್ವಜ ನಿಟಿಲನಯನ ಸಂಕಟವÀ ನಿವಾರಿಸೊ 5
--------------
ಶ್ರೀದವಿಠಲರು
ರಕ್ಷಿಸು ಮಹಮಾಯೆ ಕರುಣ ಕ-ಟಾಕ್ಷದಿಂದಲಿ ತಾಯೆ ಪ.ದಾಕ್ಷಾಯಿಣಿ ದೈತ್ಯಾಂತಕಿವರನಿಟಿ-ಲಾಕ್ಷನ ರಾಮಿ ನಿರೀಕ್ಷಿಸು ಜನನೀ ಅ.ಪ.ವಾಸವಮುಖವಿನುತೆ ರವಿಸಂ-ಕಾಶೆ ಸುಗುಣಯೂಥೇಭಾಸುರಮಣಿಗಣಭೂಷೆ ತ್ರಿಲೋಕಾ-ಧೀಶೆ ಭಕ್ತಜನಪೋಷೆ ಪರೇಶೆ 1ಗುಹಗಣಪರಮಾತೆ ದುರಿತಾ-ಪಹೆ ದುರ್ಜನ ಘಾತೆಬಹುಕಾಮಿತಪ್ರದೆ ಭಜಕಜನೋರ್ಜಿತೆಮಹಿತೆ ಯೋಗಿಹೃದ್ಗುಹನಿವಾಸಿನಿಯೆ 2ಶುಂಭಾಸುರಮಥಿನಿ ಸುರನಿಕು-ರುಂಬಾರ್ಚಿತೆ ಸುಮನಿರಂಭಾದಿಸುರನಿತಂಬಿನೀ ಜನಕ-ದಂಬಸೇವಿತಪದಾಂಬುಜೆ ಗಿರಿಜೆ 3ಅಷ್ಟಾಯುಧಪಾಣಿ ಸದಾಸಂ-ತುಷ್ಟೆ ಸರಸವಾಣಿಸೃಷ್ಟಿಲಯೋದಯಕಾರಿಣಿ ರುದ್ರನಪಟ್ಟದ ರಾಣಿಪರಾಕುಕಲ್ಯಾಣಿ4ನೇತ್ರಾವತಿ ತಟದ ವಟಪುರ-ಕ್ಷೇತ್ರಮಂದಿರೆ ಶುಭದಾಸುತ್ರಾಣಿ ಲಕ್ಷ್ಮೀನಾರಾಯಣಿ ಸ-ರ್ವತ್ರ ಭರಿತೆ ಲೋಕತ್ರಯನಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ