(ವಿನಾಯಕ ಚತುರ್ಥಿಯಂದು ಶರ್ವಿನ ಗಣಪತಿಯನ್ನು ನೆನೆದು)
ಗಣಪತೀ ಕೊಡು ನಮಗೆ ಶ್ರೀಶನಲಿ ಮತಿ ಪ.
ತನು ಮನದಲಿ ಶ್ರೀವಿನಿಯನ ಸ್ಮರಿಸಲು
ವುಣಿಸುವ ಸುಖ ಸಂದಣಿಗಣ ನಿರವಧಿ 1
ವಿಘ್ನ ಸಮೂಹವ ವೋಡಿಸಿ ಭವಭಯ
ಭಗ್ನಗೈಸಿ ನಿರ್ವಿಘ್ನದಿ ಕರುಣಿಸು 2
ಪರಶು ಪಾಶಾಂಕುಶಧರ ಕರುಣಾಕರ
ಸಿರಿವರ ವೆಂಕಟವರ ವಲಿವಂದದಿ 3
ಶ್ರೀಹರಿ ಸಂಕೀರ್ತನ ; ನಾಮ ಮಹಾತ್ಮೆ