(ಶೇಣಿ ಗೋಪಾಲಕೃಷ್ಣ)
ಗೋಪಾಲಕೃಷ್ಣ ನಿನ್ನಡಿಗಳ ಸೇರಿದೆ ಪ.
ಕಾಳಕೂಟಧರ ಕಾಳಿಯ ಸರ್ಪನ
ಧಾಳಿಗೊಂಡಿಹ ಗೋಪಾಲರನ್ನು
ಪಾಲಿಪೆನೆಂದು ಕೃಪಾಲಯ ತಾಂಡವ
ಲೀಲೆಯಿಂದ್ಯಮುನಾಜಲಾಲಯ ಬಿಡಿಸಿದ 1
ವಿಷವೃಕ್ಷ ದಾವಾಗ್ನಿ ವೃಷಭಕೇಶಿ ಬಕ
ಅಸಮಸಾಹಸಧೇನುಕಾದಿಗಳಾ
ನುಸಿಯಂತೆ ಬಡಿದು ತನ್ನೊಶಗರ ಸಲಹಿದ
ಪಶುಪತಿ ವಂದ್ಯ ನೀ ದೆಸೆಯೆಂದು ನಂಬಿದೆ 2
ಸರ್ವದೋಷಹರ ಸಕಲಲೋಕ ವಂದ್ಯ
ಗೀರ್ವಾಣಗಣಪೂಜ್ಯ ಪಾದಪದ್ಮ
ನಿರ್ವಹಿಸುತ ನೀನೆ ನಿರುತ ನಾಗರಾಜ
ಪರ್ವತನಾಥ ಸುಪರ್ಣಾಂಗ ಗಮನಾ 3