ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂ ಪ ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ 1 ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ 2 ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ 3 ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ 4 ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ವೀರನಾರಾಯಣನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ 5
--------------
ವೀರನಾರಾಯಣ
ರುದ್ರದೇವರು ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು 1 ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ 2 ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ 3 ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ 4
--------------
ಗುರುತಂದೆವರದಗೋಪಾಲವಿಠಲರು
ಅ. ಗಣಪತಿ ಸರಸ್ವತಿಯರು261ಶ್ರೀ ಗಣನಾಥನಿಗೆ | ಶಾರದಾಂಬಿಕೆಗೆಶ್ರೀ ಗೌರಿ ಭೂದೇವಿ ಶ್ರೀದೇವಿಗೆ |ಶ್ರೀಗುರುಮಹಾವಿಷ್ಣು ಬ್ರಹ್ಮರುದ್ರಾದ್ಯರಿಗೆಸಿರಿಚರಣ ಪಂಕಜಗೆ ನಮಿಸಿ ನುತಿಸುವೆನು 1ಅಷ್ಟ ದಿಕ್ಪಾಲರಿಗೆ ಶಿಷ್ಯಮರುದ್ಗಣಗಳಿಗೆಅಷ್ಟವಸು ಸಪ್ತಋಷಿ ನವಗ್ರಹಾದ್ಯರಿಗೆ |ಶ್ರೇಷ್ಠ ಹನುಮಂತನಿಗೆ ಕನಕಾದಿ ದಾಸರಿಗೆಸೃಷ್ಟಿಯೊಳು ಕವಿಜನಕೆ ಕೈಮುಗಿವೆನು 2ವಿಪ್ರಕುಲ ಸಂಜಾತ ಮಯ್ಯೂರ ಮಡಿಪುರದೊ-ಳಿಪ್ಪ ವೆಂಕಟರಾಯ ಗೋಳೇರ ಸುಕುಮಾರ |ಸರ್ಪಶಯನನ ದಾಸ ಗೋವಿಂದನೆಂಬವನುಜಲ್ವಿಸಿಯೆ ವಿರಚಿಸಿದೆನೀ ಕೃತಿಯನು 3ಯತಿಗಣ ಪ್ರಾಸ ವಿಷಮಾಕ್ಷರಗಳೊಂದರಿಯೆಕೃತ ದೋಷ ರಾಗ ಲಯ ಭೇದವನು ತಿಳಿಯೆ |ಪೃಥುವಿಯೊಳು ಕವಿಗಳಂತಗ್ಗಳನು ನಾನಲ್ಲಅತಿಶಯದ ನ್ಯೂನತೆಯ ಬಲ್ಲ ಶ್ರೀನಲ್ಲ 4ತಪ್ಪು ಸಾವಿರವಿರಲು ತಿದ್ದಿ ಬಲ್ಲವರಿದನುಒಪ್ಪುವಂದದಿ ಜಗದಿ | ಮೆರೆಸಿ ವಾಚಕರುಸರ್ಪಶಯನನ ಕೃಪೆಗೆ ಪಾತ್ರರಾಗುತ ನೀವುಕ್ಷಿಪ್ರದಲಿ ಗೋವಿಂದದಾಸ£À£Àು ಪರಸಿ ಮನ್ನಿಪುದು 5
--------------
ಗೋವಿಂದದಾಸ
ಆಗಬಲ್ಲದೆ ಹೀಗಾಗಬಲ್ಲದೆಯೋಗಿಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.ಕಾಮನಯ್ಯನರಮನೆಯಪ್ರೇಮದ ದಾಸಿಗೆ ಮಹಾಪಾಮರರಾಕ್ಷಸ ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1ಸಜ್ಜನರರಸನÀ ಮನೆಯವಜ್ರಪಂಜರದ ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ ಬಾಯಿತುತ್ತಿಗಾಗಬಲ್ಲದೆ 2ರಾಜಾಧಿರಾಜನ ಮನೆಯರಾಜಹಂಸವು ಕುಣಪಭೋಜಕನಾದ ವೃಕನಭೋಜಕನ ಅನುಕೂಲವಾಗಬಲ್ಲದೆ 3ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆಗಿರಿಯ ಹಳುವದ ಹುಲಿಯಗರಜರದ ಘಸಣೆಯಾಗಬಲ್ಲದೆ 4ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವುವಜ್ರವಿಷಮ ಯಮಬಂಟರೆಂಬಮುಸಲಕೆ ಹುಡಿ ಹಿಟ್ಟು ಆಗಬಲ್ಲದೆ 5
--------------
ಪ್ರಸನ್ನವೆಂಕಟದಾಸರು