ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಧನ್ವಂತ್ರಿಯ ಪ್ರಾರ್ಥನೆ) ವೇದ ವೇದ್ಯ ವೈದ್ಯನಾದನು ಭಕ್ತಜನ್ಮಾದಿ ವ್ಯಾಧಿಗಳನ್ನು ಬಾಧಿಸಿ ದುಗ್ಧ ಮಹೋದಧಿ ಮಥಿಸಿದ ಸಮಯದಿ ಪಾರಿಜಾ ತೋದಯವಾದ ಮೇಲಾದರದಿ ಪ. ಧೀರದಿತೆಯಸುರಾರಿ ನಾಯಕರೆಲ್ಲ ಸೇರಿ ಕ್ಷೀರಾಂಬುಧಿ ತೀರದ ತಡೆಗಾಗಿ ಭಾರಿ ಮಂದರವೆತ್ತಿ ತಾರಲಾರದೆ ಮಧ್ಯ ದಾರಿಯೊಳಗೆ ಬಿದ್ದು ಚೀರಲಂದು ನೀರದನಿಭ ಕೃಪೆದೋರಿ ಬಂದಲ್ಲಿ ಸ- ರ್ಪಾರಿಯ ಶಿರದ ಮೇಲೇರಿಸಿ ಗಿರಿಯ ಗಂ- ಭೀರ ರವದಿ ಮುಂದೆ ಸಾರಿದ ಸುರಮೋದ- ಕಾರಿ ಸಂಸ್ಕøತಿ ಭಯವಾರಣನು 1 ಅಮರದೈತ್ಯರ ಭುಜ ಭ್ರಮಣೆಗೆ ನಿಲ್ಲದ ಕ್ಷಮೆಯಧರನ ಕಂಡು ಸುಮನಸ ಗಣಕಾಗಿ ಕಮಠಾವತಾರದಿಂದಮಿತಭಾರವ ಲಕ್ಷ್ಮೀ ರಮಣ ಬೆಂಬನಿಂದಲಾಕ್ರಮಿಸಿದ್ದನೂ ಕ್ಷಮೆಯಿಂತು ತೋರಿ ಸಂಭ್ರಮದಿಂದ ಸುರಕಲ್ಪ- ದ್ರುಮಕಂಠರತ್ನ ಚಂದ್ರಮ ಮುಖ್ಯರುದಿಸಲು ರಮೆಯೊಂದು ರೂಪದಿ ನಮಿಸುತ್ತ ಬರೆ ತನ್ನ ರಮಣೀಯ ಮದುವಿಯಾ ಕ್ರಮವ ತೋರಿ 2 ಇಂತು ವಿವಾಹದನಂತರದಲಿ ಶ್ರೀ- ಕಾಂತನು ದೇವರ್ಕಳಂತವರಿತು ನಿ- ಬೋಧ ಚಿನ್ಮಯನು ನಿರ್ಭಯದಿ ಧ- ನ್ವಂತರಿಯಾದುದನೆಂತೆಂಬೆನು ಕಂತುಕೋಟಿಯ ಗೆಲುವಂತೆ ಸಕಲ ಸುಜ ನಾಂತರ್ಬಹಿರ್ಗತ ಸಂತಾಪಗಳ ಬಲ- ವಂತದಿಂದಲಿ ಕಳವಂಥ ಮೂರುತಿಯಾಗಿ ನಿಖಿಳ ವೇದಾಂತೇಶನು 3 ಕುಂಡಲ ಹಾರ ವನರುಹಾಂಬಕ ವಲ್ಲುಹಾಸ ಕೌಸ್ತುಭಧರ ಕರಿ ಕರೋರುತರ ಕ್ಷಣಿತ ಕಿಂಕಿಣಿ ಕಾಂಚೀವರ ಮಂಜೀರಾ ಸುನಸ ಸುಂದರದಂತ ಶುಭನೀಲಕೇಶಾಂತ ವನಜ ಸಂಭವನೀಗರುಹುತಾಯುರ್ವೇದಾಂತ ನೆನೆಸುವವರಪಮೃತ್ಯುಹಾರಿ ರೂಪವ ತೋರಿ ವಿನಯದಿ ವಿಬುಧಾರ ಸೇರಿದನು 4 ಪಾತಕ ಸಂಘಾಧಾರದಿಂದ್ಯಮಪರಿ ವಾರವೆಂದೆನಿಪತ್ತಿ ಸಾರವ ಸ್ಮಾರಕ್ಷಯೋರಗಜ್ವರಕಫ ಗೂರು ಪ್ರಮೇಹಾದಿ ವಾರಕ ವರಸುಖ ಕಾರಕನು ಥೋರ ಕರದಿ ಸುಧಾಪೂರಿತ ಕಲಶವ ತೋರಿ ದಾನವ ಮೋಹಕಾರಿ ನಾರಾಯಣಿ ಸ್ತ್ರೀ ರೂಪದಿಂದ ದೈತ್ಯಾರಿಗಳಿಗೆ ಕೊಟ್ಟ ಧೀರ ವೆಂಕಟ ಶಿಖರಾರೂಢನು 5
--------------
ತುಪಾಕಿ ವೆಂಕಟರಮಣಾಚಾರ್ಯ