ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡಿನ ಮರಿಯೆತ್ತಂಬುಧಿಯೊಳಾಡುವ ಕರಿಯೆತ್ತ ಮಾನವ ಮಾಡದಿರಚ್ಚುತ ನಾನೆಂಬ ಮನವಪ. ಯಾಡಮೂಢನೊಬ್ಬ ಎಲ್ಲಾ ಜಗದೊಳು ಗೂಢನಾಗಿ ನೋಡುತಿಹ ಸುಖಿಯೊಬ್ಬ ಗಡ ನಾಡರಿಯೆ ದುಃಖಿಯೊಬ್ಬ ಸುಖದಲ್ಲಿ ಲೋ- ಲಾಡುತಿಹ ನಿರನಿಷ್ಟನೊಬ್ಬ ಗಡ1 ಕಡಲ ಕಡೆದು ಸುಧೆಯ ನೋಡಿ ತ- ನ್ನೊಡಲ ಧಣಿಯಉಂಡವನೊಬ್ಬ ಹೆ- ಣ್ಣುಡಿಗೆಯನ್ನುಟ್ಟು ಅಸುರರ ಬಾಯ ಹೊಡೆದು ಬಡಿಸಿದವನೊಬ್ಬ ಗಡ 2 ಆಡುತಲಬ್ಧಿಯೊಳಡಗಿದದ್ರಿಯ ಕೋಡುಗಲ್ಲನೆತ್ತಿ ಹೂಡಲು ಬಲ್ಲೆಯ ಓಡುತಲೊಬ್ಬನೊರಗಿದ್ದನ ಕಣ್ಣೊಳೊಡದು ಮೂಡಿದÀಗ್ನಿಯಿಂದ ಸುಡುವೆಯ3 ಮಂದ ನೀನೊಬ್ಬನೆ ಮಾಡುವೆಯ ಲೆಕ್ಕವಿಲ್ಲದೆ ಮಕ್ಕಳ ಕೂಡಿದನ ಬಹಳ ಕೋಟಿಧನಂಗಳ ಕೂಡಿರ್ದಗೆ ಕೊಟ್ಟು ನೋಡಿ ಸುಖಿಪೆಯ 4 ದೃಢವಾಗಿ ನಿನ್ನುಂಗುಟ ನಖದಿಂ ದೊಡಲನಾದರು ಒಡೆಯಲಾಪೆಯ ಮೃಡಪ್ರಿಯ ಹಯವದನನಂತೆ ಮೂಢಜಾತಿಯಾಗಿ ವೇದ ಓದುವೆಯ 5
--------------
ವಾದಿರಾಜ
ನೋಡು ನೋಡು ನೋಡಯ್ಯ ರಂಗ ಮಾಡು ದಯ ಕರುಣಾಂತರಂಗ ಪ ಖೋಡಿಸಂಸಾರದ ಪೀಡೆಯ ಕಡೆಹಾ ಕರ ಭವಭಂಗ ಅ.ಪ ಮಡದಿಮಕ್ಕಳುಯೆಂಬ ಕಡುತೊಡರಿನ ಬಳ್ಳಿ ತೊಡರಿಕೊಂಡೆನ್ನನು ಕಡುವಿಧ ನೋಯಿಸುವುದೊಡೆಯನೆ ಕಡಿ ಗಡ1 ಸಜ್ಜಾಗಿಲ್ಲೊಲ್ಲೆ ನಾನು ಪ್ರಪಂಚವಿದು ಹೆಜ್ಜೆ ಹೆಜ್ಜೆಗೆ ಕಷ್ಟ ಗರ್ಜಲ್ಲೊರ್ಜಿಸು ಸುಜನರಜ್ಜನೆ 2 ಪ್ರೇಮದಿಂ ಕಂದನ ಪಾಮರಮನಸಿನ ಕಾಮಿತವಳುಕಿಸಿ ಕ್ಷೇಮವ ಪಾಲಿಸು ಸ್ವಾಮಿ ಶ್ರೀ ರಾಮನೆ 3
--------------
ರಾಮದಾಸರು
ರಂಗ ಬಾರೋ ರಂಗಯ್ಯ ಬಾರೋ - ನೀ ಪ ಬಾರದಿದ್ದರೆ ಎನ್ನ ಪ್ರಾಣ ಉಳಿಯದು ಅ ಅತ್ತಿಗೆ ಮೈದುನ ಬಾರೊ ಅತ್ತೆಯ ಮಗಳ ಗಂಡಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ1 ಮಾವನ ಅಳಿಯನೆ ಬಾರೊ ಮಾವನ ಬೀಗನ ತನುಜಮಾವನ ಮಡದಿಯ ಮಗಳ ತಂಗಿಯ ಗಂಡ 2 ಅಂಬುಧಿ ಶಯನನೆ ಬಾರೊ ಆದಿ ವಸ್ತುವೆ ರಂಗಕಂಬದೊಳು ನೆಲಸಿದ ಆದಿಕೇಶವರಾಯ 3
--------------
ಕನಕದಾಸ