ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆ ಮಾಡಮ್ಮ ಮಂಗಳಗೌರಿ ಬೇಡಿಕೊಂಬೆನೆ ನಿನಗೆ ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆ ಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ಪ ನಂದಿವಾಹನನರ್ಧಾಂಗಿಯ ಪೂಜಿಸಿ ಗಂಧಕುಂಕುಮದಿಂದ ತಂದು ಕಸ್ತೂರಿ ಕಮಲದ ಪುಷ್ಪಗಳುಡಿ ತುಂಬಿ ನೈವೇದ್ಯವ ತಂದಿರಿಸುವೆ ತಾಯೆ 1 ಅಚ್ಚ ಮುತ್ತಿನ ಹರಿವಾಣದಿ ಮಾಲತಿ ಬಟ್ಟ್ಟಿವಿ ಗೌಲಿಗಳು ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಪ್ಪ 2 ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ ದುಂಡುಗುಳ್ಳೋರಿಗೆಯು ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು ಅಂದವಾದ ಕಾಯಿರಸ ಶಾಖ ಪಾಕವು 3 ಸಣ್ಣ ಅಕ್ಕಿಯ ಶಾಲ್ಯಾನ್ನಕೊಪ್ಪುವ ತವ್ವೆ ಇನ್ನು ದಧ್ಯನ್ನಗಳು ಸನ್ಮತವಾಗಿದ್ದ ಶಾವಿಗೆಫೇಣಿ ಸಕ್ಕರೆ ರುಬ್ಬಿದ ಆಂಬೊಡೆ ರುಚಿಯಾದ ಕಲಸನ್ನ 4 ಘೃತ ಸೀಕರ್ಣೆ ಕಾಯ್ಹಾಲು ಹೊಯ್ಗಡುವನಿಟ್ಟು ಸಾರು ಸಾಂಬಾರ ಚಟ್ಟಣಿ ಕೋಸಂಬರಿ ನೀರೆ ನಿನಗೆ ಪನ್ನೀರು ತಂದಿರಿಸುವೆ 5 ದೇವಿ ನಿನ್ನ ಮನೋಭಾವ ತಿಳಿದು ನಾ ಭೀಮೇಶಕೃಷ್ಣನಿಗೆ ಬ್ಯಾಗ ಸಮರ್ಪಣೆ ಮಾಡಲು ಮಹಾದೇವ ಸ್ವಾದ ಸವಿದಾಸುಖದಿಂದಡ್ವಿಳ್ಯವ ಕೊಳ್ಳೆ 6
--------------
ಹರಪನಹಳ್ಳಿಭೀಮವ್ವ
ಭವ ಸಂಸಾರ ಶರಧಿಯ ಗುರು ಅಂಬಿಗ ದಾಟಿಸಿದಶಿವನ ಮಾಡುತಲೆನ್ನ ಮುಕ್ತಿಗೇರಿಸಿದ ಪ ಬಯಕೆಗಳೆಂಬ ತೆರೆಯು ತಾಪತ್ರಯಗಳೆ ಲಹರಿಯುಪ್ರಿಯಗಳೆಂಬುವೆ ನೊರೆಯು ಕ್ಲೇಶವೆಂಬುದೆ ಹರಿಯು 1 ತಿಳಿವು ಇಲ್ಲದ ಮಡುವು ಕಸಿವಿಸಿ ಎಂಬುದೆ ದಡವುಬಲು ಅವಿವೇಕವೆ ಗುಡುಗು ಸುಖದುಃಖಗಳೆಂಬುವು ತೆರೆಯು 2 ಸುಳಿ 3 ಸಂದಣಿಯೆಂಬುವು ಜಲಚರವು ಸಡಗರವೆಂಬುದೆ ತಳವುಹೊಂದಿಹ ಚಿಂತೆಯೆ ದಡವು ಸ್ಥಿರವಿಲ್ಲದುದೇ ಗಡುವು 4 ಜ್ಞಾನದ ನಾವೆಗಳಿಂದ ಪ್ರಣವದ ಹುಟ್ಟುಗಳಿಂದದಾಟಿಸಿದ ಚಿದಾನಂದ ಅಂಬಿಗ ಛಲದಿಂದ 5
--------------
ಚಿದಾನಂದ ಅವಧೂತರು
ಸಾಕು ಸಾಕು ರಂಗನಾಥ ಮನುಜ ಜನ್ಮವು ಲೋಕ ದೊಳಗೆ ಜನಿಸಲಾರೆ ಸಾಕು ಭವದಬೇಗೆಯಿನ್ನು ಬೇಕು ನಿನ್ನ ನಾಮವೊಂದೆ ಸಾಕುರಂಗ ಪಾಲಿಸೋ ಪ ಸುದತಿ ಸುತರ ಪೊರೆವುದಕ್ಕೆ ತಿರುಗಿ ಹೋಯಿತು ಸದನಕೈದಿ ಬರಲುಹಸಿದು ದಣಿದುಸ್ನಾನ ಜಪವ ತೊರೆದು ಕುಡಿದು ತಿಂದು ಒಡಲ ಹೊರೆದು ಬಿಟ್ಟುದಾಯಿತು1 ಕೊಂಡ ಭ್ರಷ್ಟ ಹಣವ ಕೊಟ್ಟು ಹೋಗು ಎಂಬುದಾಯಿತು ಕಷ್ಟ ಬೇಡವೆಂದು ಗಡುವ ಕೊಟ್ಟು ಕಳುಹಲವರ ಬಳಿಕ ಹೊಟ್ಟೆ ಹಸಿದು ನೇಮಗಳನು ಬಿಟ್ಟುದಾಯಿತು 2 ಮನೆಯ ಮಾಡಿಯಿರಲು ತಿಂದು ಅಸ್ತಿಮಾಂಸವನ್ನು ಅಂದ ಗೆಡಿಸಿತು ಹಿಂದೆ ಹಮ್ಮಿನೊಳಗೆ ತಂದು ತಿಂದುದನ್ನು ನೆನೆದು ನೆನೆದು ಮಂದನಾಗಿ ಮುಂದೆ ಗತಿಯು ಕುಂದಿಹೋಯಿತು 3 ಕಣ್ಣು ಕಾಣ ಬೆನ್ನದುಡುಗಿ ಬಣ್ಣಗೆಟ್ಟು ದಂತಬಿದ್ದು ಉಣ್ಣಲಿಕ್ಕು ಆಗದಾಗಿ ಕಿವಿಯು ಕೇಳದಾಯಿತು ತಿಣ್ಣ ಯಮನ ದೂತಬಂದು ಎನ್ನ ಕೊರಳ ಎಳೆಯುವಾಗ ಅಣ್ಣ ತಮ್ಮದಿರರು ಬೆನ್ನ ಬರುವರಿಲ್ಲವೋ 4 ಮುಪ್ಪು ಹರಯ ಬಾಲಕತ್ವ ಒಪ್ಪದಿಂದ ಮರಳಿಮರಳಿ ಬಪ್ಪ ಭವದ ಶರಧಿಗೊಂದು ತೆಪ್ಪವಿದ್ದಿತು ಅಲ್ಪಹೊತ್ತು ಆದರೇನು ಚಿಪ್ಪಳಿಯ ಗೋಪಿವರನ ಸ್ವಲ್ಪಮಾತ್ರ ಭಜಿಸೆ ಜನ್ಮ ತಪ್ಪಲಾಯಿತು 5
--------------
ಕವಿ ಪರಮದೇವದಾಸರು