ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚರ ಹಿಡಿ ಮನವೇ | ನಿಚ್ಚದಿ ಮೆಚ್ಚಿನ ಅಚ್ಚುತನಂಘ್ರಿ ಪ ಹಾಡುತಾ ನೋಡುತಾ ನೀಡದೊಳಾಡುತಾ ನಡೆ ನುಡಿಯೊಳು ಬಿಡ ದಡಿ ಗಡಿಗೊಮ್ಮೆ 1 ಹೇಳುತ ಕೇಳುತ ಮೇಳದಿ ಬಾಳುತ | ಕಳವಳದಳುಕಿನ ಡಳಮಳದೊಳಗೆ 2 ಬಂದದ ಛಂದವಿಂದೇ ಹೊಂದು ಮುಕುಂದನೆಂದು | ತಂದೆ ಮಹೀಪತಿ ಕಂದಗ ಬೋಧಿಸಿದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿಯೆಂದು ನೆನೆಯೋ ಮರಿಯದೆ ಮನುಜ ಧ್ರುವ ನಡೆಯುತ ನುಡಿಯುತ ನಡೆ ನುಡಿಯೊಳಗೆ ಪೊಡವಿಧರನ ಮಹಿಮೆಯ ಕೊಂಡಾಡುತ ಇಡವುತ ತೊಡವುತ ಮುಡವುತ ಮನದೊಳು ಬಿಡದೆ ಸ್ಮರಸೊ ನೀ ಅಡಿ ಗಡಿಗೊಮ್ಮೆ 1 ಉಣುತ ಉಡುತನ್ನೋದಕ ಕೊಳುತ ವನಿತಯರೊಡಗೂಡಿ ಘನಸುಖ ಪಡೆಯುತ ಅನಭದಿಂದಾನಂದದಿ ನೆನೆಯೋ ತನುಮನದೊಳು ನೀ ಕ್ಷಣಕ್ಷಣಕೊಮ್ಮೆ 2 ಏಳುತ ಕೂಡುತ ಮಲಗುತ ನೆನೆಯೋ ಹಲವು ಪರಿಲಿ ಶ್ರೀ ಹರಿ ಸರ್ವೋತ್ತಮ ನೆಲೆಗೊಂಡಿರೋ ಮಹಿಪತಿ ನಿಜನಾಮವ ಸಲಹುತ ಸ್ವಾಮಿ ಶ್ರೀಗುರು ಶ್ರೀಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು