ಆತ್ಮನಿವೇದನಾಸ್ತುತಿಗಳು
ಸನ್ನುತ ವನಜಭವಾನುತ ಪ
ಮುನಿಜನವಂದಿತ ಅನಘ ವಿರಾಜಿತ ಅ.ಪ
ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ
ವಿಕಳನಾ ಮುನಿಗೇಯ ಸುಕವಿಪೂಜಿತಕಾಯ 1
ಮರೆಯಬೇಡವೋ ಯನ್ನ ಗರುಡಗಮನ ನಿನ್ನ
ಚರಣ ಸೇವಕರನ್ನ ನಿರುತನೆನೆವೆ ಮುನ್ನ 2
ನಡುಗಡಲಿನೊಳಿಹೆ ತಡಬಡಿಸುತಲಿಹೆ
ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ 3
ತಾಮಸನಯ್ಯ ಬೇಡ ನೀ ಮನಸೋಲಬೇಡ
ಪಾಮರ ವರದನೆ | ರಾಮದಾಸಾರ್ಚಿತನೆ4
ಮಾಂಗಿರಿವರವಾಸ ರಂಗನಾಥನೆ ಶ್ರೀಶಾ
ಹಿಂಗದೆ ಯನ್ನಂತರಂಗದೆ ನಿಲೊ ಈಶಾ 5