ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಣವನರಸುವರೆಲ್ಲ ಗುಣವನರಸುವರೆ ಮಣಿಯನರಸುವ ಕೆಲರು ಹಣಕೆ ಬಾಯ್ ಬಿಡರೆ ಪ ನೀಡುವವನೊಬ್ಬನಿರೆ ಬೇಡವೆಂಬುವರಿಹರೆ ನೀಡಲೊಲ್ಲದ ನರನ ನೋಡುವವರಿಹರೆ ಬೀಡು ಹೆಚ್ಚಳಸಿರಿಯ ನೀಡೆನಗೆ ತನಗೆಂಬ ನಾಡಿಗರ ಗಡಣವನು ಎಣಿಸಲಳವೇ 1 ಕಲಿಯುಗದ ನೀತಿಯೋ ಬಲುದುರಾಸೆಯ ಬಲೆಯೋ ಸಲೆ ಬೆಳೆದಸೂಯೆಯೋ ಕಲಿತ ದುರ್ನೀತಿಯೋ ಜಲಜಾಕ್ಷನನೀ ದುಶ್ಶೀಲ ಪ್ರವಾಹದಲಿ ಅಲೆಯಬಿಡಬೇಡಯ್ಯ ಮಾಂಗಿರಿಯ ರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್