ಜಯದೇವ ಜಯದೇವ ಜಯ ರಾಘವ ರಾಮಾ
ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ
ಹಭವ ಭವಮುಖರಮೊರೆಯನು ಕೇಳುತಲಿ
ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ
ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ
ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ 1
ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ
ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ
ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ
ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ 2
ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ
ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ
ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ
ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ 3
ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ
ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ
ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ
ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ 4
ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು
ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು
ನೀತಿಯ ತಪ್ಪಿದ ರಾವಣ ಕುಂಭಶ್ರವಣರನು
ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು 5
ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ
ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ
ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ
ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು 6
ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ
ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ
ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ
ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ 7