ವನಜಾಕ್ಷ ನೀನೀಗ ಘನ ಕನಿಕರದಿ ಕಾಯಭವ
ಘನತರದ ಗುಣ ಎನ್ನೊಳಿನಿತಿಲ್ಲ ದೇವ ಪ
ಮನ ತುಸು ಗಟ್ಟಿಲ್ಲ ತನುಮೋಹ ಸುಟ್ಟಿಲ್ಲ
ಧನದಾಸೆ ಬಿಟ್ಟಿಲ್ಲ ಬಿನುಗುಗುಣಟ್ಟಿಲ್ಲ 1
ಪರಮಮದ ಮುರಿದಿಲ್ಲ ಪರನಿಂದೆ ತೊರೆದಿಲ್ಲ
ಶರಣರಿಗೆ ಎರಗಿಲ್ಲ ಹರಿಪಾದವದರಿವಿಲ್ಲ 2
ಏನು ಅಪರಾಧವಿರೆ ನೀನೆ ಕ್ಷಮಿಸೆನಗೆ
ಜ್ಞಾನದಿಂ ಸಲಹಯ್ಯ ಪ್ರಾಣೇಶ ಶ್ರೀರಾಮ 3