ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ-
ನುಮನೆಂಬುವ ಹರಿಭಜಕನೀತ 1
ರಮ್ಮೆರಮಣನಾದ ರಾಮಸೇವಕನಂಘ್ರಿ
ಒಮ್ಮೆ ನೋಡಲು ದೋಷದೂರವಾಗ 2
ಕರ ಜೋಡಿಸಿ ಮುಗಿದು ಕೊಂ-
ಡಾಡುತೀತ ನಗುವ ಮಹಿಮೆಯನು 3
ಆಡಿದ್ವಚನ ಸತ್ಯಮಾಡುವ ಭಕುತರು
ಬೇಡಿದ್ವರಗಳ ಚೆಲ್ಲಾಡುವನು 4
ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ-
ಚರಿಸುತಿದ್ದನು ಮಹಾಪುರುಷನೀತ 5
ಅರಸರಂತಕನಾದ ಪರಶುರಾಮನ ಗೆದ್ದ
ಅರಸನಂಘ್ರಿಗಳನು ಸ್ಮರಿಸಿಕೊಂಡು 6
ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ-
ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7
ನಖ ಶಿರದಿಂದುದ್ದವ ಮಾಡಿ
ಉರಿವೀಲಂಕೆಗೆ ತಾನಂಕುರವನಿಟ್ಟ(?) 8
ಮರನಕಿತ್ತಕ್ಷಕುಮಾರನ ಮುರಿದು ತಾರ
ಮರನ ಕರೆದು(?) ತಂದಮರನಾದನು 9
ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ
ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10
ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು
ಭೂತಳದೊಡೆಯಗಿಟ್ಟ ಪ್ರೀತಿಯಿಂದ 11
ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು-
ನಾಥಗ್ವೊಲಿದು ಅಜಪದವಿನಿಟ್ಟ 12
ಸೀತಾಚೋರನ ಪ್ರಾಣಘಾತಕನು 13
ಅಂಜನಾತ್ಮಜ ದೊಡ್ಡ ಸಂಜೀವನವ ತಂದು
ಕೊಂದಕಪಿಗಳ ಪ್ರಾಣ ಪಡೆದನೀತ 14
ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ-
ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15
ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು-
ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16
ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ
ಈ ಮಹಾಸ್ಥಳದಿ ನಿಂತ ಮಹಾತ್ಮನು 17
ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ
ದೂತನೆನಿಸಿದ ಪ್ರಖ್ಯಾತನೀತ 18