ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಮಲಮಹಿಮನೆ ದಾಸನಾಸೆಪೂರೈಸೊ ಅಮಿತ ನಿಮ್ಮಯ ಬಿರುದು ಸತ್ಯವೆಂದೆನಿಸೊ ಪ ಕಷ್ಟಹರ ನೀನಹುದೆ ದಿಟ್ಟತನ ಕೊಡುಯೆನಗೆ ಶಿಷ್ಟರೊಡೆಯ ನೀನಹುದೆ ಗಟ್ಟಿಮನವ ಪಾಲಿಸು ಇಷ್ಟಪೂರ್ಣ ನೀನಹುದೇ ಕೊಟ್ಟು ರಕ್ಷಿಸೆನ್ನ 1 ದೀನರಾಸ್ಪದನಹುದೇ ಧ್ಯಾನ ದಯೆ ಪಾಲಿಸೈ ಗಾನಲೋಲಹುದೆ ನೀ ಜ್ಞಾನವನು ನೀಡೊ ಮಾನರಕ್ಷ ನೀನಹುದೇ ಅಭಿಮಾನಯೆನದಿರೆನ್ನ ಧ್ಯಾನಿಕಧೇನಹುದೇ ಆನಂದ ನೀಡೊ 2 ನ್ಯಾಯವಂತ ನೀನಹುದೇ ಮಾಯೆಮೋಹವನು ಬಿಡಿಸು ಪಾವನಾತ್ಮ ನೀನಹುದೇ ಸಾವು ಹುಟ್ಟು ಗೆಲಿಸು ಜಯವಂತ ನೀನಹುದೇ ದೇಹಿಯೆನಿಸದಿರಲ್ಪರಿಗೆ ಕಾವದೇವ ನೀನಹುದೇ ಭಾವದ್ವಾಸಿಸೆನ್ನ 3 ಪೃಥ್ವಿ ವ್ಯಾಪಕನಹುದೇ ಚಿತ್ತಶುದ್ಧಮಾಡೆನ್ನ ಸತ್ ಚಿತ್ತ ನೀನಹುದೇ ಸತ್ಸಂಗ ನೀಡೊ ಭಕ್ತವತ್ಸಲನಹುದೇ ಅನಿತ್ಯಗುಣ ಬಿಡಿಸೆನ್ನ ಕರ್ತನು ನೀನಹದೇ ಸತ್ಪಥದೆನ್ನಿರಿಸೊ 4 ಅಸಮಕರುಣಹುದೇ ನೀ ಪುಸಿಗೊಲಿಸಿದಿರು ಎನ್ನ ದೋಷಹರ ನೀನಹುದೇ ಹಸನೆನಿಸು ಎನ್ನ ದಾಸರಭಿಮಾನ್ಯಹುದೇ ಪೋಷಿಸೆಲೊ ತವಪಾದ ಧ್ಯಾನದಿರಿಸೆನ್ನ ಶ್ರೀಶ ಶ್ರೀರಾಮ5
--------------
ರಾಮದಾಸರು