ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ ನೆರೆನಂಬಿದವ ಧನ್ಯನೋ ಪ ಗುರು ಮೂಲ ಪುರುಷ ನಾರಪ್ಪಯ್ಯ ಮುನಿಗೊಲಿದು ಕುರಿಕಿಹಳ್ಳಿಯಲಿ ಬಂದಾ ನಿಂದಾ ಅ.ಪ ವರಋಷಿಯ ಪೂರ್ವದಲಿ ತಿರುಪತಿಯ ಮುಟ್ಟಿ ಮಲ- ಗಿರಲು ಸ್ವಪ್ನವ ಕಾಣುತ ತುರುರೂಪದಲಿ ನಾನೆ ಬರುವೆ ಕಾ- ರ್ಪರ ವನಕೆ ದರುಶನವÀÀ ಕೊಡುವೆ ನಿರುತ ಬರುತ ಬರುತಲಿ ವಿಪ್ರ ತಿರುಗಿ ನೋಡಲು ಪದದಿ ಕಿರುಗಜ್ಜೆಗಳ ನುಡಿಸುತಾ ಕುರಿಕಿ ಹಳ್ಳಿಯ ಸುಮಂದಿರನೆನಿಸಿ ಸಿರಿಸಹಿತ ವರಶಿಲೆಯ ಮೇಲೆ ಪಾ ಲ್ಗರಿದು ನೆಲೆಸಿರುವಂಥ 1 ತೋಂಡಮಾನಕ್ಷಿತಿಪ ಪುಂಡಲೀಕಾದಿ ಬಹು ತೋಂಡರಿಗೆ ಒಲಿದು ದೇವಾ ಕುಂಡಲಿ ಪರ್ವತದಿ ತಂಡತಂಡದಿ ಭಕುತ ಮಂಡಲಿಗೆ ಫಲವ ಕೊಡುವ ದುಂಡುಮುತ್ತಿನಹಾರ ಮುಕುಟ ರತ್ನಾಭರಣ ಮಂಡಿತನಾಗಿ ಮೆರೆವ ಕಂಡೆನಾನಿಮ್ಮ ಪದ ಪುಂಡಲೀಕವನು ಈ ಗುಂಡಿನಾ ತಿಮ್ಮಯ್ಯನೆಂದು ಕರೆಸಿಕೊಳುವಿ 2 ಕರಮುಗಿವೆ ಮನ್ಮನದಿ ಕರುಣದಲಿ ತೋರೋತವ ಪರಮ ಸುಂದರ ಚರಣವ ನಿರುತ ಸ್ಮರಿಸುವ ಜನರ ದುರಿತ ತಿಮಿರಕೆ ದಿವಾ ಕರನೆನಿಸಿ ಸುಖವಗರಿವಾ ಸೇವ್ಯ ಕಾರ್ಪರನಿಲಯನೆನಿಸೆ ಬಹು ಶರಣು ಜನರನು ಪೊರಿಯುವಾ ವರಕೃಷ್ಣ ಗರ್ಭದಲಿ ಒಪ್ಪುವ ಪಿಪ್ಪಲಸ್ಥಶ್ರೀ ನರಹರಿಯ ಬಳಿಯಲಿರುವಾಮೆರೆವಾ 3
--------------
ಕಾರ್ಪರ ನರಹರಿದಾಸರು
ಮಾರಿಯನು ತೋರುತಿಹೆನು ಅದನೀಗನಾರಿ ಎಂದೆಂಬರಯ್ಯಪಸೀರೆ ಕುಪ್ಪಸವನುಟ್ಟುಸಿಂಗರದಿ ತೋರ ಕಂಕಣವನಿಟ್ಟು ಅಯ್ಯಮೂರಳೆಯಕಟ್ಟಾಣಿಕಟ್ಟಿಯೇಮೋರೆ ಮುರಕಿಸುತಿಹುದು ಅಯ್ಯ1ಚಳ್ಳತುಂಬುಗಳಿಂದಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆಹಲ್ಲು ಕಡಿಯುತಲಿಹುದು ಅಯ್ಯ2ಓಲೆ ಮಾಡಿಸು ಎಂಬುದುವರಹಕೆ ಬಾಳುವೆ ನೋಡಿರಿ ಎಂಬುದಯ್ಯಹೇಳುವುದು ಕಿವಿಯೊಳಗೆ ಲೋಭಕಾಲು ಕೈ ತಿರುಹುವುದು ಅಯ್ಯ3ಕರೆಕರೆಯ ಮಾಡುತಿಹುದು ತಾಯಿಯಹೊರಡಿಸು ಮನೆಯಿಂದಲೆಂಬುದಯ್ಯಹರನ ಚಿಂತೆಗೆ ಹಾನಿಯು ಇದರಿಂದನರಕ ಬಹಳವ ತಿರುಗುವೆ ಅಯ್ಯ4ನಾರಿಯೆನಿಸಿಹುದೆ ಮೃತ್ಯುಇದನೀಗ ದೂರ ಮಾಡಿದನಾದರೆ ಅಯ್ಯಸೇರುವುದು ಸರ್ವಮುಕ್ತಿಚಿದಾನಂದನಿರೆ ತಾನೆಯಹುದು ಅಯ್ಯ5
--------------
ಚಿದಾನಂದ ಅವಧೂತರು