ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಬಾಲಗೋಪಾಲ ವರ್ಣನೆ ಆಡ ಹೋಗುವಾ ಬಾರೊ ರಂಗಾ ಪ ಆಡ ಹೋಗುವಾ ಬಾರೊ ರಂಗಾ ಕೂಡಿ ಕಾಳಿಂದೀ ತೀರದಲ್ಲಿ ನಾಡ ಗೊಲ್ಲರ ಹೆಂಗಳಿಗೆಲ್ಲ ಬೇಡಿದಿಷ್ಟಾರ್ಥಗಳ ಕೊಡುವಾ ಅ.ಪ. ಆಣಿಕಲ್ಲು ಗೋಲಿ ಗಜ್ಜುಗ ಚಿಣ್ಣಿಕೋಲು ಚಂಡು ಬುಗುರಿ ಕಣ್ಣುಮುಚ್ಚಾಲೆ ಕುಂಟಹಲಿಪೆ ಬಣ್ಣ ಬಣ್ಣದಾಟಗಳನು 1 ಸೋಲುಗೆಲವಿಗೆಲ್ಲ ನೀನೆ ಪಾಲುಗಾರನಾಗಿ ನಮ್ಮ ಮೇಲೆ ಮಮತೆ ಇಟ್ಟು ಸಾನು - ಕೂಲನಾಗಿ ಕೈಯ್ಯ ಪಿಡಿಯೋ2 ಮೆಟ್ಟು ಮೆಟ್ಟು ಕೋಲು ಕೈಲಿ ಕಟ್ಟು ಬುತ್ತಿ ಕೊಳಲು ಕಂಬಳಿ ಧಿಟ್ಟ ಗೋವಳರಾಮ ಶ್ರೀದ - ವಿಠಲಯ್ಯ ಯಾಕೆ ತಡವೋ3
--------------
ಶ್ರೀದವಿಠಲರು
ಆಡುವ ಬನ್ನಿರಿ ಬಾಲಕರೆ ಪ ರೂಢಿಗಚ್ಚರಿಯಾಗಿ ಬಲುಲೀಲೆಗಳಿಂ ಅ.ಪ ಜನನ ಮರಣವÉಂಬ ಚೆಂಡು ಬುಗುರಿಯಿಂ ಮನದ ವೃತ್ತಿಗಳೆಂಬ ಗೋಲಿಗಜ್ಜುಗದಿಂ ಜನಸಂಘವೆಂಬುವ ಚಿಳ್ಳೆಕೋಲುಗಳಿಂ ಅನುದಿನ ಭ್ರಾಂತಿಯೆಂಬ ಕವಣೆ ಕಲ್ಲುಗಳಿಂ 1 ಏಳುತಲೀ ಮುಖ ತೊಳೆದು ನೀವೆಲ್ಲ ಕರ್ಮ ಭಕ್ಷಗಳೆಲ್ಲ ಲೀಲೆಯಿಂ ಮೆಲ್ಲುತಲಿದರೊಳು ಬಲ್ಲ ಶೀಲ ಸದ್ಗುಣವುಳ್ಳ ಬಾಲಕರೆಲ್ಲ 2 ಶ್ರವಣ ಮನನವೆಂಬ ಸಾಧನೆಯಿಂದ ಭವಹರ ಗುರುರಾಮ ವಿಠಲ ಮುಕುಂದ 3
--------------
ಗುರುರಾಮವಿಠಲ
ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ
ಕೇಶವ ಬಾ ನಾರಾಯಣ ಬಾ ಬಾಮಾಧವಬಾ ಮಧುಸೂದನ ಬಾಪಗೋವಿಂದ ಬಾ ಬಾ ಗೋಪಾಲ ಬಾ ಬಾಗೋವರ್ಧನ ಗಿರಿಧಾರಿಯೆ ಬಾ ಅ.ಪರಂಗನೆ ಅಂದಿಗೆ ಗೆಜ್ಜೆಯಕಟ್ಟಿಚುಂಗುಬಿಟ್ಟು ರುಮಾಲನೆ ಸುತ್ತಿಶೃಂಗಾರದ ಹಾರ ಪದಕಗಳ್ಹಾಕಿಅಂಗಳದೊಳಗಾಡಲು ಕಳುಹುವೆನು 1ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆಹಿಂಡುಗೋಪಾಲರ ಕೂಡಿಸುವೆಪುಂಡರಿಕಾಕ್ಷನೆ ಪಾಲಿಸು ದೊರೆಯೆ 2ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆಶಶಿಮುಖಿಯರ ಕೂಡಾಡದಿರೆನುವೆಮೊಸರು ಬೆಣ್ಣೆ ಪಾಲ್ಸಕ್ಕರೆ ಕೊಡುವೆ 3ಜರದವಲ್ಲಿ ಅಲಂಕರಿಸುತ ನಲಿವೆಪರಿಪರಿ ಗೆಳೆಯರ ಕೂಡಿಸಿ ಕೊಡುವೆಮುರಳಿ ನುಡಿಸೆನ್ನುತಕರಮುಗಿವೆಪರಮಾತ್ಮನೆ ಜಗನ್ಮೋಹನ ಹರಿಯೆ 4ಕಮಲಭವೇಂದ್ರಾದ್ಯಮರರು ಪೊಗಳೆಕಮಲಪುಷ್ಪ ಮಲ್ಲಿಗೆ ಮಳೆ ಕರೆಯೆಕಮಲನಾಭ ವಿಠ್ಠಲ ಶ್ರೀಹರಿಯೆಶ್ರಮ ಪರಿಹರಿಸೆನ್ನುತ ಪ್ರಾರ್ಥಿಸುವೆ 5
--------------
ನಿಡಗುರುಕಿ ಜೀವೂಬಾಯಿ