ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆದು ಸುಖಿಸಿ ನಮ್ಮ ಆದಿ ಶರಣರಾ ಅನುದಿನ ಹರಿ ಮೆಚ್ಚಿದ ಪ್ರಿಯರಾ ಪ ಪ್ರಲ್ಹಾದ ನಾರದ ಪರಾಶರ ಮುನಿ ವಲ್ಲಭ ರುಕ್ಮಾಂಗದಾ ಧ್ರುವರಾ ಉಲ್ಹಾಸದಿಂದಲಿ ಅಂಬರೀಷ ಗಜೇಂದ್ರನಾ ಬಲ್ಲಿದ ಬಲಿ ಗುಣ ಸಾಗರರಾ ಹನುಮ ವಿಭೀಷಣ ಜಾಂಬವ ಅಜಮಿಳ ಮುನಿ ಮುಚಕುಂದಾರ್ಜುನ ಮುಖ್ಯರಾ 1 ಉದ್ಧವ ಉಪಮಾನ್ಯನು ಜನÀದೋಳಧಿಕರಾದಾ ಪುಂಡಲೀಕ ಭೀಷ್ಮರಾ ಭಕುತಿ ವನಧಿಯೊಳು ಮೆರೆವರ ತನವಾದಾ 2 ಶುಕಶೌನಕ ಮುಖ್ಯ ಸಜ್ಜನರಾ | ಪ್ರಕಟದಿ ಮಹಿಪತಿ ನಂದನು ಸ್ತುತಿಸಿದ | ಮುಕುತಿಗೆ ಯೋಗ್ಯ-ನಾ ಮಾಡುವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಗವಂತನ ಸಂಕೀರ್ತನೆÀ ಇಂದಿರಾರಮಣ ಆನಂದಮೂರುತಿ ನಿನ್ನ ವಂದಿಸಿ ಕರಗಳ ಬಂಧಿಸಿ ಬೇಡುವೆ ಪ ಎಂದಿಗೂ ಎನ್ನ ಹೃದಯಮಂದಿರ ಬಿಡದಿರೊ ನಂದಮುನ್ನೀಶ್ವರ ವಂದಿತ ಚರಣನೆ ಅ.ಪ ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾ ಕೃತಿಯಾಗಿರಲು ಶ್ರೀಪತಿಯೇ ನೀ ಬಂದು ರತಿಪತಿಪಿತನೆ ಯುವತಿಯನ್ನೆ ಮಾಡಿದ ಪತಿತಪಾವನ ನೀನಲ್ಲವೇನೊ ಹರಿಯೆ 1 ನಾಕರಾಜನ ಸುತನು ಕಾಕರೂಪದಿ ಬಂದು ಏಕಾಂತದೊಳು ಅವಿವೇಕವ ಮಾಡಲು ಶ್ರೀಕಾಂತ ತೃಣದಿಂದ ಭೀಕರಿಸಿ ಮೂರು ಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೆ 2 ಮತ್ತು ಗಜೇಂದ್ರನಾಪತ್ತು ಪರಿಹರಿಸಿ ಉತ್ತಮ ಪದವವಗಿತ್ತು ರಕ್ಷಿಸಿದೆ ಭಕ್ತವತ್ಸಲ ಎನ್ನ ಕುತ್ತುಗಳನು ನೀ ಚಿತ್ತಕೆ ತರದೇ ಸದ್ವøತ್ತನೆಂದೆನಿಸೈ 3 ನೇತ್ರವೆಂಬುದು ನಾರಿಗಾತ್ರದೊಳಿರುವುದು ಶ್ರೋತ್ರವು ಗೀತವ್ರಾತದೊಳಿಹುದು ಚಿತ್ತ ವಿಷಯ ಭೋಗಾಸಕ್ತವು ಗೋಪಿಕಾ ಮಿತ್ರನೇ ಅಂಜಲಿಮಾತ್ರ ನೀನೊಪ್ಪಿಕೋ 4 ವರನಾಮಗಿರಿಲಕ್ಷ್ಮೀನರಸಿಂಹ ಮೂರುತೆ ಚರಣಕಮಲಯುಗ ಸ್ಮರಣೆಯ ಎನಗೆ ಸ್ಥಿರವಾಗಿರುವಂತೆ ವರವಿತ್ತು ಸಲಹೆಲೊ ಪರಮಪುರುಷ ದಿನಕರಕುಲತಿಲಕನೆ 5
--------------
ವಿದ್ಯಾರತ್ನಾಕರತೀರ್ಥರು